HEALTH TIPS

ಪತ್ನಿ ಜೊತೆಗಿನ ಖಾಸಗಿ ಸಂಭಾಷಣೆ ವೈರಲ್; ಮಲಪ್ಪುರಂ ಪಂಚಾಯತಿ ಅಧ್ಯಕ್ಷರಿಂದ ರಾಜೀನಾಮೆ


          ಮಲಪ್ಪುರಂ: ಪತ್ನಿ ಜತೆಗಿನ ಖಾಸಗಿ ಸಂಭಾಷಣೆ ವೈರಲ್ ಆದ ಹಿನ್ನೆಲೆಯಲ್ಲಿ  ಮಲಪ್ಪುರಂ ಪಂಚಾಯತಿ ಅಧ್ಯಕ್ಷ ರಾಜೀನಾಮೆ ನೀಡಿದ್ದಾರೆ.
            ಚೊಕ್ಕಾಡ್ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಚುರಪಿಲಾನ್ ಶೌಕತ್ ರಾಜೀನಾಮೆ ನೀಡಿದ್ದಾರೆ. ತನಗೆ ಸಿಗುತ್ತಿರುವ ಕಮಿಷನ್ ಗೆ ಸಂಬಂಧಿಸಿದ ವಿಚಾರಗಳನ್ನು ಪತ್ನಿಯೊಂದಿಗೆ ಚರ್ಚಿಸಿದ್ದು ವೈರಲ್ ಆಗಿತ್ತು.
         'ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಈಗ ಸಿಗುತ್ತಿರುವ ಕಮಿಷನ್ ಕೈ ತಪ್ಪುತ್ತದೆ. ನಮ್ಮ ಆದಾಯವನ್ನು ಉಳಿಸಿಕೊಳ್ಳಬೇಕಾದರೆ, ಈ ಸ್ಥಾನ ಉಳಿಸಿಕೊಳ್ಳಬೇಕಿದೆ ಎಂದು ಅವರು ತಮ್ಮ ಹೆಂಡತಿಗೆ ಪೋನ್ ಮೂಲಕ ಹೇಳಿದ್ದರು. ಈ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
           ಡಿಸಿಸಿ ಉಪಾಧ್ಯಕ್ಷ ಕೆ.ಸಿ.ಕುಂಞÂ ಮುಹಮ್ಮದ್ ಹಾಗೂ ಪ್ರಧಾನ ಕಾರ್ಯದರ್ಶಿ ಅಜೀಶ್ ಎಡಯಾಳತ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಶೌಕತ್ ಅವರ ತಪ್ಪು ಪತ್ತೆಯಾಗಿದೆ. ನಂತರ ಡಿಸಿಸಿ ಅಧ್ಯಕ್ಷ ವಿ.ಎಸ್.ಜಾಯ್ ಅವರು ಶೌಕತ್ ರಾಜೀನಾಮೆಗೆ ಸೂಚಿಸಿದರು.
         ಕಳೆದ ಪಂಚಾಯ್ತಿ ಚುನಾವಣೆಯಲ್ಲಿನ ಒಪ್ಪಂದದ ಪ್ರಕಾರ ಅಧ್ಯಕ್ಷ ಸ್ಥಾನ ಮೊದಲ ಎರಡೂವರೆ ವರ್ಷ ಕಾಂಗ್ರೆಸ್ ಗೆ, ಮುಂದಿನ ಎರಡೂವರೆ ವರ್ಷ ಲೀಗ್ ಗೆ ಬಿಟ್ಟುಕೊಡಬೇಕಿತ್ತು. ಆದರೆ ಪೋನ್ ವೈರಲ್ ಕಾರಣ ಶೌಕತ್ ಅವರ ಅಧಿಕಾರಾವಧಿ ಆರು ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡಬೇಕಾಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries