ತಿರುವನಂತಪುರಂ: ರಾಜ್ಯದ ಎಲ್ಲ 14 ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ಪದಚ್ಯುತಗೊಳಿಸುವ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದ ಬಳಿಕ ಮುಂದಿನ ಕ್ರಮಗಳ ಕುರಿತು ಗೊಂದಲ ಉಂಟಾಗಿದೆ.
ಮಸೂದೆ ಕಾನೂನಾಗಬೇಕಾದರೆ ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಬೇಕು. ಆದರೆ, ರಾಜ್ಯಪಾಲರ ಒಪ್ಪಿಗೆಗಾಗಿ ಇನ್ನೂ ಮಸೂದೆಯನ್ನು ರಾಜಭವನಕ್ಕೆ ಕಳುಹಿಸಲಾಗಿಲ್ಲ.
ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ಕೆಳಗಿಳಿಸಿ ಆ ಹುದ್ದೆಗೆ ಶಿಕ್ಷಣ ತಜ್ಞರು ಅಥವಾ ಇತರ ತಜ್ಞರನ್ನು ನೇಮಿಸುವುದು ಮಸೂದೆಯ ಲಕ್ಷ್ಯವಾಗಿದೆ. ಕುಲಪತಿ ಹುದ್ದೆಗೆ ನೇಮಕವು ಐದು ವರ್ಷಗಳವರೆಗೆ ಇರುತ್ತದೆ. ಯಾವುದೇ ದುರ್ನಡತೆ ಅಥವಾ ಇತರ ಸಮಸ್ಯೆಗಳ ಆರೋಪಗಳಿದ್ದಲ್ಲಿ ಕುಲಪತಿಯನ್ನು ತೆಗೆದುಹಾಕುವ ಅಧಿಕಾರವನ್ನು ತಿದ್ದುಪಡಿ ಮಸೂದೆಯು ಸರ್ಕಾರಕ್ಕೆ ನೀಡುತ್ತದೆ.
ರಾಜ್ಯಪಾಲರ ಬದಲಾವಣೆಯ ವಿಧೇಯಕವನ್ನು ರಾಜ್ಯಪಾಲರಿಗೇ ಕಳುಹಿಸಿದರೆ ಏನಾಗುತ್ತದೆ ಎಂಬ ಆತಂಕ ಎದುರಾಗಿದೆ. ರಾಜ್ಯಪಾಲರ ಸ್ಥಾನದಿಂದ ವಜಾಗೊಳಿಸಲು ರಾಜ್ಯಪಾಲರಾಗಲಿ ಅಥವಾ ಕೇಂದ್ರ ಸರಕಾರವಾಗಲಿ ಒಲವು ತೋರುವ ಸಾಧ್ಯತೆ ಇಲ್ಲ. ಇದೇ ಕಾರಣಕ್ಕೆ ರಾಜ್ಯಪಾಲರಿಗೆ ಕಳುಹಿಸಿಲ್ಲ ಎನ್ನಲಾಗಿದೆ.
ರಾಜ್ಯಪಾಲರನ್ನು ಬದಲಾಯಿಸುವ ವಿಧೇಯಕವನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸುವುದು ಹೇಗೆ?: ಸರ್ಕಾರಕ್ಕೆ ಆತಂಕ
0
ಡಿಸೆಂಬರ್ 16, 2022
Tags





