HEALTH TIPS

ಕಾಯಿಲೆ ಗುಣಪಡಿಸುವ ಎನರ್ಜಿ ಹೀಲಿಂಗ್ ಬಗ್ಗೆ ಕೇಳಿದ್ದೀರಾ? ಇದು ಪರಿಣಾಮಕಾರಿಯೇ?

 ಎನರ್ಜಿ ಹೀಲಿಂಗ್‌ ಎಂಬುವುದು ತುಂಬಾ ಹಿಂದಿನಿಂದಲೂ ಮಾಡುತ್ತಾ ಬಂದಿರುವ ಮನುಷ್ಯ ಮಾನಸಿಕ ಹಾಗೂ ದೈಹಿಕ ಕಾಯಿಲೆ ಹೋಗಲಾಡಿಸುವ ಒಂದು ವಿಧಾನವಾಗಿದೆ. ಇದನ್ನು ಮೂಢನಂಬಿಕೆ ಎಂದು ಹೇಳಲು ಸಾಧ್ಯವಿಲ್ಲ, ಈ ವಿಧಾನದಲ್ಲಿ ತಮಗಿರುವ ಆರೋಗ್ಯ ಸಮಸ್ಯೆಯಿಂದ ಗುಣಮುಖವಾಗಿರುವ ಎಷ್ಟೋ ಉದಾಹರಣೆಗಳಿವೆ, ಹಾಗಂತ ಇದು ಪವಾಡವೂ ಅಲ್ಲ, ಇದೊಂದು ರೋಗ ಗುಣಪಡಿಸುವ ವಿಧಾನವಷ್ಟೇ...

ಕೆಲವರು ಸೋಂಕು ತೆಗೆಯುತ್ತಾರೆ ಅಂದ್ರೆ ಎಲ್ಲೋ ಹೊರಗಡೆ ಹೋಗಿ ಬಂದಾಗ ಸ್ವಲ್ಪ ಸುಸ್ತು ಅನಿಸಿದರೆ ಮನೆಯಲ್ಲಿರುವ ಹಿರಿಯರಿಗೆ ಸೋಂಕು ತೆಗೆಯುವುದು ಗೊತ್ತಿದ್ದರೆ ಸೋಂಕು ತೆಗೆಯುತ್ತಾರೆ, ಅದಾಗ ಸ್ವಲ್ಪ ಹೊತ್ತಿನಲ್ಲಿಯೇ ಆ ಸುಸ್ತು ದೂರಾಗಿರುತ್ತದೆ. ಇನ್ನು ದೃಷ್ಟಿ ತೆಗೆಯುವುದು ಬಹುತೇಕ ಜನರಿಗೆ ಗೊತ್ತಿರುತ್ತದೆ, ಇದು ಕೂಡ ಒಂದು ಬಗೆಯ ಹೀಲಿಂಗ್.

ಎನರ್ಜಿ ಹೀಲಿಂಗ್ ಬಗ್ಗೆ ತಿಳಿಯಬೇಕೆಂದರೆ ಆ ವಿದ್ಯೆಯನ್ನು ಕಲಿಯಬೇಕು, ಎಷ್ಟೋ ಜನರು ಇದನ್ನು ಕಲಿತು ತಮ್ಮ ವೃತ್ತಿಯನ್ನಾಗಿ ಕೂಡ ಮಾಡಿಕೊಂಡಿದ್ದಾರೆ. ಎನರ್ಜಿ ಹೀಲಿಂಗ್‌ನಲ್ಲಿ ಪ್ರಮುಖವಾಗಿ 5 ವಿಧ.

ರೇಖಿ ಹೀಲಿಂಗ್:

ಇದನ್ನು ಜಪಾನ್‌ನಲ್ಲಿ ಹೆಚ್ಚಾಗಿ ಮಾಡಲಾಗುವುದು, ಭಾರತದಲ್ಲಿಯೂ ಈ ರೇಖಿ ಹೀಲಿಂಗ್ ಪ್ರಸಿದ್ಧಿಯನ್ನು ಪಡೆದಿದೆ. ನಮ್ಮನ್ನು ಸ್ಪರ್ಶ ಮಾಡುವ ಮೂಲಕ ಅವರ ಒಳ್ಳೆಯ ಎನರ್ಜಿ ನಮಗೆ ಪಾಸ್‌ ಮಾಡಿ ಗುಣಪಡಿಸುವ ವಿಧಾನ. ಫೋನ್‌ ಮೂಲಕ ರೇಖಿ ಹೀಲಿಂಗ್ ಮಾಡಿ ಗುಣ ಪಡಿಸಲಾಗುವುದು. ಇದನ್ನು ಡಿಸ್ಟಂಟ್ ಹೀಲಿಂಗ್ ಎಂದು ಕರೆಯಲಾಗುವುದು.

ರೇಖಿ ಹೀಲಿಂಗ್ ಮುಖಾಂತರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ನೀಡಲಾಗುವುದು. ಇದರಿಂದ ದೇಹದಲ್ಲಿರುವ ನೋವು ಕಡಿಮೆ ಮಾಡಲಾಗುವುದು, ಮಾನಸಿಕ ಒತ್ತಡ ಕಡಿಮೆ ಮಾಡಲಾಗುವುದು. ಅತಿಯಾದ ಮಾನಸಿಕ ಒತ್ತಡದಿಂದಾಗಿ ಬರುವ ತಲೆನೋವು, ನಿದ್ರಾಹೀನತೆ, ಆತಂಕ ಈ ಬಗೆಯ ಸಮಸ್ಯೆ ಕೂಡ ಪರಿಹರಿಸಲಾಗುವುದು.

ರೇಖಿ ಹೀಲಿಂಗ್ ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುವುದು.

ಪ್ರಾಣಿಕ್ ಹೀಲಿಂಗ್

ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸಲು ಈ ಎನರ್ಜಿ ಬಳಸಲಾಗುವುದು. ನಮ್ಮ ಸುತ್ತ ಒಮದು ಶಕ್ತಿಯ ಪ್ರಭೆ ಇರುತ್ತದೆ, ಇದರ ಬಗ್ಗೆ ತಿಳಿಯುತ್ತಾ ಹೋದರೆ ನಮ್ಮಲ್ಲಿನ ಎಷ್ಟೋ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರ ಸಿಗುವುದು. ಈ ಚಿಕಿತ್ಸೆಯಲ್ಲಿ ಕೂಡ ಶಕ್ತಿಯನ್ನು ಬಳಸಿ ದೇಹದಲ್ಲಿರುವ ಕಶ್ಮಲಗಳನ್ನು, ಬೇಡದ ಚಿಂತನೆಗಳನ್ನು, ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ಇವುಗಳನ್ನು ಹೊರಹಾಕಲಾಗುವುದು.

ಕ್ರಿಸ್ಟಲ್ ಹೀಲಿಂಗ್

ಸ್ಪಟಿಕ ಬಳಸಿ ಚಿಕಿತ್ಸೆಯನ್ನು ನೀಡುವ ವಿಧಾನವಾಗಿದೆ. ಸ್ಪಟಿಕ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೊರಹಾಕುತ್ತದೆ, ದೈಹಿಕ-ಮಾನಸಿಕ ಸಮಸ್ಯೆಗಳಿದ್ದರೆ ಅದನ್ನು ಕಡಿಮೆ ಮಾಡುತ್ತದೆ. ಸ್ಪಟಿಕ ಬಳಸಿ ನಮ್ಮ ದೇಹದ ಯಾವ ಭಾಗದಲ್ಲಿ ಸಮಸ್ಯೆಯಿದೆಯೋ ಅದನ್ನು ಬಗೆಹರಿಸಲಾಗುವುದು.

ಕ್ವಾಂಟಮ್ ಹೀಲಿಂಗ್

ದೈವಿಕ ಬೆಳಕಿನ ಚಿಕಿತ್ಸೆ ಎಂದು ಕರೆಯಲಾಗುವುದು, ಇದರಲ್ಲಿ ಮಾತ್ರೆಗಳು, ಇಂಜೆಕ್ಷನ್ ಇಲ್ಲದೆ ಗುಣಪಡಿಸುವ ಚಿಕಿತ್ಸೆ ವಿಧಾನವಾಗಿದೆ. ಇದರ ಬಗ್ಗೆ ಡಾ. ಬಿ ಎಂ ಹೆಗಡೆ ಕೂಡ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಅವರು ಹೇಳ್ತಾರೆ ನೀವು ಒಂದು ನಿಶ್ಯಬ್ದವಾಗಿರುವ ಕೋಣೆಯಲ್ಲಿ ಕುಳಿತುಕೊಂಡು ನಿಮ್ಮ ಶತ್ರುಗಳು ಯಾರೆಲ್ಲಾ ಎಂದು ಯೋಚಿಸಿ, ನಂತರ ನನ್ನತ್ರ ಬನ್ನಿ ನೀವು ಅವರನ್ನು ಇಷ್ಟಪಡಲಾರಂಭಿಸುತ್ತೀರಿ' ಎಂದು ಹೇಳುತ್ತಾರೆ. ಒಂದು ಉದಾಹರಣೆಯನ್ನು ಕೂಡ ಹೇಳುತ್ತಾರೆ ಅಮೆರಿಕದಲ್ಲಿ ಒಬ್ಬ ದೊಡ್ಡ ಜನರ್ಲಿಸ್ಟ್ ಇರುತ್ತಾನೆ, ಆತನಿಗೆ ಅಟೋ ಇಮ್ಯೂನೆ ಕಾಯಿಲೆಯಿಂದಾಗಿ ಕೈ ಬೆರಳಗಳನ್ನು ಚಲಿಸಲು ಸಾಧ್ಯವಾಗಲ್ಲ, ಆಸ್ಪತ್ರೆಗೆ ಹೋಗ್ತಾನೆ ವೈದ್ಯರು ಈ ಕಾಯಿಲೆ ಗುಣಪಡಿಸುವುದು ಕಷ್ಟ ಅಂತಾರೆ. ಅವನನ್ನು ನೋಡಲು ಫ್ರೆಂಡ್‌ ನಾರ್ಮನ್ ಕಸಿನ್ ಬರುತ್ತಾನೆ, ಆತ ಏನೆಲ್ಲಾ ಹೇಳಿ ಈತನನ್ನು ನಗಿಸುತ್ತಾನೆ. ಆತನ ಮಾತುಗಳನ್ನು ಕೇಳುತ್ತಾ ಈತನೂ ತುಂಬಾ ನಗುತ್ತಾನೆ, ನೋಡಿದರೆ ಕೈ ಬೆರಳುಗಳು ಚಲಿಸಲಾರಂಭಿಸುತ್ತದೆ. ಚಾರ್ಲಿ ಚಾಪ್ಲಿನ್ ಮೂವಿಗಳನ್ನು ನೋಡುತ್ತಾನೆ, ಹೀಗೆ ತುಂಬಾ ನಗುತ್ತಾ ಖುಷಿಯಾಗಿರುತ್ತಾನೆ, 3 ತಿಂಗಳಿನಲ್ಲಿಯೇ ಚೇತರಿಸಿಕೊಂಡು ಮನೆಗೆ ಹೋಗುತ್ತಾನೆ, ಇದರ ಬಗ್ಗೆ ನಾರ್ಮನ್ ಕಸಿನ್ anatomy of illness ಎಂಬ ಬುಕ್ ಬರೆಯುತ್ತಾನೆ. ಆದ್ದರಿಂದಲೇ ಕೆಲವೊಮ್ಮೆ ವೈದ್ಯರು ಕೂಡ ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಮಿಕ್ಕಿದ್ದೆಲ್ಲಾ ದೇವರ ಕೈಯಲ್ಲಿದೆ ಎನ್ನುವುದು.

ಕ್ವಿಗಾಂಗ್ ಹೀಲಿಂಗ್‌

ಸ್ವಾಧೀನ ಕಳೆದುಕೊಂಡಿರುವ ದೇಹಕ್ಕೆ ಚಿಕಿತ್ಸೆ ನೀಡುವ ವಿಧಾನವಾಗಿದೆ. ಇದನ್ನು 4000 ವರ್ಷಗಳ ಹಿಂದೆಯೇ ಅಭ್ಯಾಸ ಮಾಡಲಾಗಿತ್ತು ಎಂದು ಹೇಳಲಾಗುವುದು. ಈ ಚಿಕಿತ್ಸೆಯಲ್ಲಿ ಸ್ವಾದೀನಾ ಕಳೆದುಕೊಂಡಿರುವ ಕೈ ಕಾಲುಗಳಿಗೆ ಪಾಸಿಟಿವ್ ಎನರ್ಜಿ ಕಳುಹಿಸಿ ಮತ್ತೆ ನಡೆದಾಡುವಂತೆ ಮಾಡಲಾಗುವುದು.

ಸಲಹೆ: ಈ ಎಲ್ಲಾ ಹೀಲಿಂಗ್ ಚಿಕಿತ್ಸೆ ಮಾಡಿಸುವ ಮುನ್ನ ನಮಗೆ ಅದರಲ್ಲಿ ನಂಬಿಕೆ ಇರಬೇಕು, ಇದರಿಂದ ನನಗೆ ಗುಣವಾಗುತ್ತೆ ಎಂಬ ನಂಬಿಕೆಯಿದ್ದರೆ ಖಂಡಿತ ಗುಣವಾಗುವುದು, ಹೀಲಿಂಗ್ ಚಿಕಿತ್ಸೆ ನೀಡುವ ಎಷ್ಟೋ ಪರಿಣಿತರು ಭಾರತದಲ್ಲಿಯೂ ಇದ್ದಾರೆ, ಇದರಿಂದ ಪ್ರಯೋಜನ ಪಡೆದವರೂ ಇದ್ದಾರೆ, ಹಾಗಾಗಿ ನಿಮ್ಮಲ್ಲಿ ಇದರ ಬಗ್ಗೆ ಪೂರ್ಣ ನಂಬಿಕೆ ಇದ್ದರೆ ಮಾತ್ರ ಈ ಬಗೆಯ ಚಿಕಿತ್ಸೆ ಪ್ರಯತ್ನಿಸಬಹುದು.


 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries