HEALTH TIPS

ಸೆನ್ಸಿಟಿವ್ ಕಣ್ಣನ್ನು ಹೊಂದಿರುವವರಿಗೆ ಕಣ್ಣಿನ ಮೇಕಪ್‌ ಟಿಪ್ಸ್‌

 ಕಣ್ಣಿಗೆ ಮೇಕಪ್ ಮಾಡಿಕೊಳ್ಳುವುದು ಎಲ್ಲರಿಗೂ ಇಷ್ಟ. ತಮ್ಮಿಷ್ಟದ ಹಾಗೇ ಕಣ್ಣಿನ ರೆಪ್ಪೆಯನ್ನು ಅಲಂಕಾರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಇದೊಂದು ರೀತಿಯ ಟ್ರೆಂಡ್ ಆಗಿದೆ. ನಿಮ್ಮ ಉಡುಗೆಗೆ ತಕ್ಕಂತೆ ಕಣ್ಣಿನ ಮೇಕಪ್ ಮಾಡಿಕೊಳ್ಳುವುದರಿಂದ ನಿಮ್ಮ ಸೌಂದರ್ಯ ಇನ್ನಷ್ಟು ಹೆಚ್ಚಾಗುವುದರಿಂದ ಯಾವುದೇ ಸಂದೇಹವಿಲ್ಲ.

ಆದರೆ, ಸೂಕ್ಷ್ಮ ಅಥವಾ ಸೆನ್ಸಿಟಿವ್ ಕಣ್ಣುಗಳನ್ನು ಹೊಂದಿರುವವರಿಗೆ ಇದು ಕಿರಿಕಿರಿ ಉಂಟು ಮಾಡಬಹುದು. ಹೌದು, ಸೆನ್ಸಿಟಿವ್ ಕಣ್ಣುಗಳನ್ನು ಹೊಂದಿರುವವರು ಕಣ್ಣಿನ ಮೇಕಪ್ ಮಾಡಿಕೊಂಡ ತಕ್ಷಣ ತುರಿಕೆ, ಕಜ್ಜಿಯಂತಹ ಅಲರ್ಜಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂತಹವರು ಕಣ್ಣಿನ ಮೇಕಪ್ ಮಾಡಿಕೊಳ್ಳುವಾಗಿ ಗಮನಸಿಬೇಕಾದ ಕೆಲವೊಂದು ವಿಚಾರಗಳ ಬಗ್ಗೆ ಇಲ್ಲಿ ನೋಡೋಣ.

ಕಣ್ಣಿನ ಮೇಕಪ್ ಉತ್ಪನ್ನಗಳಲ್ಲಿ ಯಾವ ಪದಾರ್ಥಗಳು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತವೆ? ಟಾಲ್ಕ್ ಅಥವಾ ಪೌಡರ್: ಯಾವುದೇ ಐಶ್ಯಾಡೋದ ಪದಾರ್ಥಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಟಾಲ್ಕಮ್ ಪೌಡರ್ ಹೆಚ್ಚು ನೋಡುತ್ತೀರಿ. ನಿಮ್ಮ ಕಣ್ಣುಗಳ ಸುತ್ತ ಪೌಡರನ್ನು ಅತಿಯಾಗಿ ಬಳಸುವುದರಿಂದ ಕಿರಿಕಿರಿಯನ್ನು ಉಂಟುಮಾಡಬಹುದು. ಸಂರಕ್ಷಕಗಳು: ಬಹುತೇಕ ಎಲ್ಲಾ ಕಣ್ಣಿನ ಮೇಕಪ್ ಉತ್ಪನ್ನಗಳು ಬ್ರೋನೋಪೋಲ್ ಅಥವಾ ಡಿಮೆಥಿಕೋನ್ ನಂತಹ ಕೆಲವು ರೀತಿಯ ಸಂರಕ್ಷಕಗಳನ್ನು ಹೊಂದಿರುತ್ತವೆ, ಇದು ಚರ್ಮ ಮತ್ತು ಕಣ್ಣಿನ ಕಿರಿಕಿರಿಯನ್ನು ಉಂಟುಮಾಡಬಹುದು. ಬಣ್ಣಗಳು : ಐಶ್ಯಾಡೋಗಳಲ್ಲಿ ಬಳಸುವ ಬಣ್ಣಗಳು ಸಹ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಸುಗಂಧ ದ್ರವ್ಯಗಳು: ಮೇಕಪ್ ಉತ್ಪನ್ನಗಳಲ್ಲಿ ಬಳಸುವ ಸುಗಂಧವು ಅಲರ್ಜಿಯ ಪ್ರತಿಕ್ರಿಯೆಯ ಹಿಂದಿನ ಪ್ರಾಥಮಿಕ ಕಾರಣವಾಗಿದೆ.

1. ಹೈಪೋಲಾರ್ಜನಿಕ್ ಮೇಕಪ್ ಉತ್ಪನ್ನ ಆಯ್ಕೆ ಮಾಡಿ

ನೀವು ಸೂಕ್ಷ್ಮ ಕಣ್ಣುಗಳನ್ನು ಹೊಂದಿದ್ದರೆ, ಮೇಕಪ್ ಮಾಡಿಕೊಳ್ಳಲು ಮೊದಲ ನಿಯಮವೆಂದರೆ ಹೈಪೋಲಾರ್ಜನಿಕ್ ಉತ್ಪನ್ನಗಳನ್ನು ಖರೀದಿಸುವುದು. ಅಂದರೆ ಅಲರ್ಜಿಮುಕ್ತವಾಗಿರುವಂತ ಉತ್ಪನ್ನಗಳು. ಈ ಹೈಪೋಲಾರ್ಜೆನಿಕ್ ಉತ್ಪನ್ನಗಳು ನಿಮ್ಮ ಕಣ್ಣುಗಳು ಮತ್ತು ಸುತ್ತಲೂ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವ ಯಾವುದೇ ಪದಾರ್ಥಗಳನ್ನು ಹೊಂದಿರುವುದಿಲ್ಲ. ಜೊತೆಗೆ, ನಿಮ್ಮ ಕಣ್ಣುಗಳಿಗೆ ಉಂಟಾಗುವ ಇತರ ಕಿರಿಕಿರಿಯನ್ನು ಕಡಿಮೆ ಮಾಡಲು ಪರಿಮಳರಹಿತ ಮೇಕಪ್‌ ಉತ್ಪನ್ನಗಳನ್ನು ಅರಿಸಿಕೊಳ್ಳಿ. ಇದರ ಜೊತೆಗೆ ಸಾವಯುವ ಅಥವಾ ಆರ್ಗಾನಿಕ್ ಉತ್ಪನ್ನಗಳ ಸಹ ಸಹಕಾರಿ.

2. ಪೌಡರ್ ಐಶಾಡೋ ಬದಲು ಕ್ರೀಮ್ ಐಶ್ಯಾಡೋ ಬಳಸಿ

ಕಣ್ಣುಗಳ ಮೇಲೆ ಯಾವುದೇ ಅಲರ್ಜಿಯನ್ನು ತಪ್ಪಿಸಲು ಪೌಡರ್ ಐಶ್ಯಾಡೋಗಿಂತ ಕ್ರೀಮ್ ಐಶ್ಯಾಡೋವನ್ನು ಆಯ್ಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ, ಪೌಡರ್ ಐಶ್ಯಾಡೋವಿನಲ್ಲಿ ಪೌಡರ್‌ ಇರುವುದರಿಂದ ಸಹಜವಾಗಿಯೇ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಜೊತೆಗೆ ಪೌಡರ್ ಐಶ್ಯಾಡೋ ಕಣ್ಣುಗಳ ಸುತ್ತಲೂ ಹರಡಿ, ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.

3. ಕಣ್ಣಿನ ಮೇಕಪ್ ಮಾಡಿಕೊಳ್ಳುವ ವಿಧಾನವನ್ನು ಬದಲಾಯಿಸಿ

ಮೇಕಪ್ ಉತ್ಪನ್ನಗಳ ಹೊರತಾಗಿ, ಮೇಕಪ್ ಮಾಡಿಕೊಳ್ಳುವ ವಿಧಾನವು ಕಣ್ಣಿನ ಕಿರಿಕಿರಿಯನ್ನು ಉಂಟುಮಾಡಬಹುದು. ರೆಪ್ಪೆಗಳ ಮೇಲೆ ಮೇಕಪ್ ಮಾಡಲು ಹಾರ್ಡ್ ಸ್ಟ್ರೋಕ್ಗಳನ್ನು ಬಳಸುವುದು ಕಿರಿಕಿರಿಯನ್ನು ಉಂಟುಮಾಡಬಹುದು. ಆದ್ದರಿಂದ, ಐಶ್ಯಾಡೋವನ್ನು ಹಚ್ಚುವಾಗ ಸೌಮ್ಯವಾಗಿ ವರ್ತಿಸುವುದು ಮುಖ್ಯ. ಆದ್ದರಿಂದ ಸೂಕ್ಷ್ಮ ಕಣ್ಣುಗಳ ಮೇಲೆ ಮೇಕಪ್ ಹಚ್ಚಲು ಉತ್ತಮ ಮಾರ್ಗವೆಂದರೆ ಪ್ಯಾಟಿಂಗ್ ಆಯ್ಕೆ ಮಾಡಿಕೊಳ್ಳವುದು. ಅಂದರೆ ನಿಧಾನವಾಗಿ ಹಚ್ಚಿ, ಹೆಚ್ಚು ಒತ್ತಡ ಹಾಕದೇ ಮಿಶ್ರಣ ಮಾಡುವುದು.

4. ಉತ್ತಮ ಗುಣಮಟ್ಟದ ಬ್ರಷ್ ಆರಿಸಿಕೊಳ್ಳಿ ಕಣ್ಣಿನ ಮೇಕಪ್ ಮಾಡಿಕೊಳ್ಳುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ ಬ್ರಷ್‌ಗಳ ಆಯ್ಕೆ. ಕೊಳೆಯಾಗಿರುವ ಹಾಗೂ ಒರಟಾದ ಕೂದಲುಗಳಿರುವ ಬ್ರಷ್‌ಗಳನ್ನು ಬಳಸುವುದರಿಂದ ಕಣ್ಣಿನ ಕಿರಿಕಿರಿ ಉಂಟಾಗಬಹುದು. ಆದ್ದರಿಂದ ಮೃದುವಾಗಿರುವ ಬಿರುಗೂದಲುಗಳನ್ನು ಹೊಂದಿರುವ ಬ್ರಷ್‌ಗಳನ್ನು ಬಳಸಿ ಮತ್ತು ಯಾವುದೇ ಕಣ್ಣಿನ ಕಿರಿಕಿರಿಯನ್ನು ಕಡಿಮೆ ಮಾಡಲು ನಿಮ್ಮ ಬ್ರಷ್‌ಗಳನ್ನು ನಿಯಮಿತವಾಗಿ ತೊಳೆಯಿರಿ.

5. ವಾಟರ್‌ಲೈನ್ ತಪ್ಪಿಸಿ ನಿಮ್ಮ ವಾಟರ್‌ಲೈನ್‌ನಲ್ಲಿ ಐಲೈನರ್ ಹಚ್ಚವುದರಿಂದ ನಿಮ್ಮ ಕಣ್ಣುಗಳ ಸೌಂದರ್ಯ ಹೆಚ್ಚಾಬಹುದು. ಆದರೆ ನೀವು ಸೆನ್ಸಿಟಿವ್ ಕಣ್ಣುಗಳನ್ನು ಹೊಂದಿದ್ದರೆ, ಕಿರಿಕಿರಿಯನ್ನು ತಪ್ಪಿಸಲು ವಾಟರ್‌ಲೈನ್‌ಗೆ ಯಾವುದೇ ರೀತಿಯ ಐಲೈನರ್‌ ಬಳಸದೇ ಇರುವುದು ಉತ್ತಮ.

6. ಮೇಕಪ್ ಸರಳವಾಗಿರಲಿ ನೀವು ಸೂಕ್ಷ್ಮ ಕಣ್ಣುಗಳನ್ನು ಹೊಂದಿದ್ದರೆ ಹೆಚ್ಚು ಕಣ್ಣಿನ ಮೇಕಪ್ ಉತ್ಪನ್ನಗಳನ್ನು ಬಳಸದೇ ಇರುವುದು ಉತ್ತಮ. ಉದಾಹರಣೆಗೆ, ಐಲೈನರ್ ಹಚ್ಚಿದ್ದರೆ, ಐಶ್ಯಾಡೋವನ್ನು ಸ್ಕಿಪ್ ಮಾಡಬಹುದು. ಹೆಚ್ಚೆಚ್ಚು ಕಣ್ಣಿನ ಮೇಕಪ್ ಉತ್ಪನ್ನಗಳನ್ನು ಏಕಕಾಲದಲ್ಲಿ ಬಳಸುವುದರಿಂದ ನಿಮ್ಮ ಕಣ್ಣುಗಳು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.

7. ಸರಿಯಾಗಿ ಮೇಕಪ್ ತೆಗೆಯಿರಿ ಹೌದು, ಮಲಗುವ ಮುನ್ನ ಅಥವಾ ನಿಮ್ಮ ಕೆಲಸ ಮುಗಿದ ಬಳಿಕ ಕಣ್ಣಿನ ಮೇಕಪನ್ನು ಸರಿಯಾಗಿ ತೆಗೆಯುವುದುನಿಮ್ಮ ಸೂಕ್ಷ್ಮ ಕಣ್ಣುಗಳನ್ನು ಸುರಕ್ಷಿತವಾಗಿರಿಸಲು ಮಾಡಬೇಕಾದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಮೇಕಪ್ ಹಾಕಿಕೊಂಡು ಮಲಗುವುದನ್ನು ತಪ್ಪಿಸಿ. ಕಣ್ಣಿನ ಮೇಕಪ್ ಅನ್ನು ನಿಧಾನವಾಗಿ ತೆಗೆದುಹಾಕಲು ಉತ್ತಮ ಮೇಕಪ್ ರಿಮೂವರ್ ಅಥವಾ ಕ್ಲೆನ್ಸಿಂಗ್ ಬಾಮ್ ಅನ್ನು ಬಳಸಿ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries