ಕೋಝಿಕ್ಕೋಡ್: ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ತರಗತಿಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿ ಸೇರ್ಪಡೆಗೊಂಡ ಘಟನೆಯ ಕುರಿತು ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ತನಿಖೆಗೆ ಸೂಚನೆ ನೀಡಲಾಗಿದೆ. ಈ ನಡುವೆ ವೈದ್ಯಕೀಯ ಕಾಲೇಜು ಪೆÇಲೀಸರ ತನಿಖೆ ಪ್ರಗತಿಯಲ್ಲಿದೆ.
ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ನವೆಂಬರ್ 29 ರಂದು ಮೊದಲ ವರ್ಷದ ವೈದ್ಯಕೀಯ ತರಗತಿ ಪ್ರಾರಂಭವಾಯಿತು. 245 ಮಂದಿ ಪ್ರವೇಶ ಪಡೆದಿದ್ದರು. ಇದಲ್ಲದೇ ಪ್ಲಸ್ ಟು ವಿದ್ಯಾರ್ಥಿನಿ ಪ್ರವೇಶ ಪಡೆದು ತರಗತಿಗೆ ತೆರಳಿದ್ದಳು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮೊನ್ನೆ ರಾತ್ರಿ ಪೆÇಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳ ಪ್ರವೇಶ ಪಟ್ಟಿಯಲ್ಲಿ ಬಾಲಕಿಯ ಹೆಸರಿಲ್ಲದಿದ್ದರೂ ಹಾಜರಾತಿ ಪಟ್ಟಿಯಲ್ಲಿ ಬಾಲಕಿಯ ಹೆಸರು ಕಾಣಿಸಿಕೊಂಡಿರುವುದು ನಿಗೂಢವಾಗಿದೆ ಎನ್ನುತ್ತಾರೆ ಪೆÇಲೀಸರು. ವಿದ್ಯಾರ್ಥಿಯು ಮಲಪ್ಪುರಂ ಮೂಲದವರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ತನ್ನ ತಪ್ಪನ್ನು ಒಪ್ಪಿಕೊಂಡಿದೆ. ತರಗತಿ ಆರಂಭವಾದ ಮೊದಲ ದಿನವೇ ತರಾತುರಿಯಲ್ಲಿ ಸಮಯ ಹಾಳು ಮಾಡುವುದನ್ನು ತಪ್ಪಿಸಲು ಮಕ್ಕಳನ್ನು ಸೇರಿಸಿಕೊಂಡಾಗ ತಪ್ಪಾಯಿತು ಎಂದು ಉಪಪ್ರಾಂಶುಪಾಲರು ವಿವರಿಸಿದರು.
ಎಂಬಿಬಿಎಸ್ ತರಗತಿಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿ; ಆರೋಗ್ಯ ಸಚಿವರರಿಂದ ತನಿಖೆಗೆ ಆದೇಶ
0
ಡಿಸೆಂಬರ್ 10, 2022


