ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಲುಜಾರಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ.
ಅವರು ಗಾಯಗೊಂಡ ನಂತರ ವಿಶ್ರಾಂತಿ ಪಡೆಯುತ್ತಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಘಟನೆ ಗುರುವಾರ ನಡೆದಿದೆ. ಸಂಸತ್ತಿನಲ್ಲಿ ಅವಘಡ ಸಂಭವಿಸಿದೆ. ಸಂಸತ್ತಿನ ಮೆಟ್ಟಿಲುಗಳನ್ನು ಇಳಿಯುವಾಗ ಅವರು ಎಡವಿದರು. ನೋವನ್ನು ಮೊದಲಿಗೆ ನಿರ್ಲಕ್ಷಿಸಲಾಯಿತು ಆದರೆ ನಂತರ ತೀವ್ರವಾಯಿತು. ಇದಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅವರು ಈಗ ಬೆಡ್ ರೆಸ್ಟ್‍ನಲ್ಲಿದ್ದಾರೆ. ಕಾಲಿಗೆ ಪೆಟ್ಟಾಗಿರುವ ಕಾರಣ ಕ್ಷೇತ್ರದ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಎಡವಿದ ಶಶಿ ತರೂರ್: ಜಾರಿಬಿದು ಗಾಯ
0
ಡಿಸೆಂಬರ್ 16, 2022





