ಬದಿಯಡ್ಕ: ಬಡಗುಶಬರಿಮಲೆ ಎಂದು ಪ್ರಸಿದ್ಧಿಯನ್ನು ಪಡೆದ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಚಪ್ಪರ ಮುಹೂರ್ತ ನಡೆಯಿತು. ಡಿ.25ರಿಂದ 2023 ಜನವರಿ 2ರ ತನಕ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿರುವುದು.
ಸಿದ್ಧತೆಗಾಗಿ ಕ್ಷೇತ್ರದ ಪರಿಸರದಲ್ಲಿ ವಿಶಾಲವಾದ ಚಪ್ಪರ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಯಿತು. ಪ್ರಧಾನ ಅರ್ಚಕ ಭಾಸ್ಕರ ಐತಾಳ್ ಪೂಜೆ ನಡೆಸಿದರು. ಕ್ಷೇತ್ರ ಆಡಳಿತ ಸಮಿತಿಯ ಕಿರಣ್ ಕುಣಿಕುಳ್ಳಾಯ, ಜಯರಾಜ್ ಕುಣಿಕುಳ್ಳಾಯ, ಬ್ರಹ್ಮಕಲಶ ಸಮಿತಿಯ ಪ್ರ.ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ, ಚಪ್ಪರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕುರುಪ್ಪ್, ಸಂಚಾಲಕ ಉದಯ ಚೂರಿಕ್ಕೋಡು, ಹಣಕಾಸು ಸಮಿತಿಯ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ, ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಯೋಗೀಶ ಶರ್ಮ ಬಳ್ಳಪದವು, ಶುಚಿತ್ವ ಸಮಿತಿಯ ಅಧ್ಯಕ್ಷ ನರಸಿಂಹ ಭಟ್ ಕಳೆಯತ್ತೋಡಿ, ಸ್ವಾಗತ ಸಮಿತಿಯ ಅಧ್ಯಕ್ಷ ಈಶ್ವರ ರಾವ್, ಪ್ರಚಾರ ಸಮಿತಿಯ ಅಧ್ಯಕ್ಷ ಗಂಗಾಧರ ಕೆ., ನಾರಾಯಣ ಮಣಿಯಾಣಿ ಚೇರ್ಕೂಡ್ಲು, ಉದಯ ಕುಮಾರ್ ಕಲ್ಲಕಟ್ಟ, ಬಾಲರಾಜ್ ಬೆದ್ರಡಿ, ಉದಯಪ್ರಕಾಶ ಬೆದ್ರಡಿ, ಹರೀಶ್ ಕುಣಿಕುಳ್ಳಾಯ, ಪುರುಷೋತ್ತಮ ಮಾಸ್ತರ್, ಚಪ್ಪರದ ಉಸ್ತುವಾರಿ ಕೈಲಾಸ್ ಡೆಕೊರೇಶನ್‍ನ ಲಾಲು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ವಿವಿಧ ಸಮಿತಿಯ ಸಂಚಾಲಕರು ಪಾಲ್ಗೊಂಡಿದ್ದರು.

