ಬದಿಯಡ್ಕ: ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಮತ್ತು ಪರಿವಾರ ದೇವರುಗಳ ಹಾಗೂ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಶುಭಕೃತ್ ಸಂವತ್ಸರದ ಧನುಮಾಸ 14ರಂದು, ಗುರುವಾರ ಬೆಳಗ್ಗೆ 11.37ರ ಮೀನಲಗ್ನ ಶುಭÀಮುಹೂರ್ತದಲ್ಲಿ ಜರಗಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಪ್ರಾತಃಕಾಲ 108 ತೆಂಗಿನಕಾಯಿ ಮಹಾಗಣಪತಿ ಹೋಮ ಜರಗಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ವಿಧಿವಿಧಾನಗಳು ನಡೆದುವು. ಪ್ರತಿಷ್ಠೆಯ ನಂತರ ಶ್ರೀಕ್ಷೇತ್ರಕ್ಕೆ ಮುಗುಳಿಯನ್ನಿಟ್ಟು ಅಭಿಷೇಕವನ್ನು ಮಾಡಲಾಯಿತು. ಈ ಸಂದರ್ಭ ಆಗಮಿಸಿದ ಮಾಯಿಪ್ಪಾಡಿ ಅರಮನೆಯ ಶ್ರೀ ದಾನಮಾರ್ತಾಂಡವರ್ಮ ರಾಜ ಯಾನೆ, ರಾಮಂತರಸುಗಳು13 ಅವರನ್ನು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಗೋಮಾತೆಯ ದರ್ಶನ :
ಪ್ರತಿಷ್ಠಾ ಕಲಶಾಭಿಷೇಕಕ್ಕೂ ಮೊದಲು ಶ್ರೀ ಸನ್ನಿಧಿಗೆ ಗೋವನ್ನು ಕರೆತರಲಾಯಿತು. ಗೋವಿನ ದರ್ಶನದ ನಂತರ ಶ್ರೀ ದೇವರಿಗೆ ಅಭಿಷೇಕ ಮಾಡಲಾಯಿತು. ಊರಪರವೂರ ಅನೇಕ ಭಕ್ತರು ಈ ಸಂದಭರ್Àದಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾ ಪಾಣಿ, ಬಲಿ, ಅಂಕುರಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಸ್ವಯಂಸೇವಕರ ಕಠಿಣ ಪರಿಶ್ರಮ :
ಡಿ.25ರಂದು ಭಾನುವಾರ ಆರಂಭವಾದ ಬ್ರಹ್ಮಕಲಶೋತ್ಸವವು ಜ.2ರ ತನಕ ನಡೆಯಲಿರುವುದು. ಈ ಸಂದಭರ್Àದಲ್ಲಿ ಸ್ವಯಂಸೇವಕರು ನಿಷ್ಠೆಯಿಂದ ದುಡಿಯುತ್ತಿದ್ದು, ಆಗಮಿಸುವ ಭಕ್ತಾದಿಗಳ ಬಗ್ಗೆ ವಿಶೇಷ ಕಾಳಜಿಯನ್ನುಟ್ಟು ಎಲ್ಲಾ ಸೌಕರ್ಯಗಳನ್ನು ಮಾಡುತ್ತಿದ್ದಾರೆ. ವಿಶಾಲವಾದ ಪ್ರದೇಶದಲ್ಲಿ ಅಚ್ಚುಕಟ್ಟಾದ ವಾಹನ ಪಾರ್ಕಿಂಗ್‍ಗೂ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸ್ವಚ್ಛತೆಗೆ ಆದ್ಯತೆಯನ್ನು ನೀಡಿ ಅದಕ್ಕಾಗಿ ಹಗಲಿರುಳು ದುಡಿಯುವ ಸ್ವಯಂಸೇವಕರ ಕಾರ್ಯ ಶ್ಲಾಘನೀಯ. ನೀರಿನ ವ್ಯವಸ್ಥೆ, ಪಾರ್ಕಿಂಗ್, ಊಟೋಪಚಾರ ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಗಳೂ ಅಚ್ಚುಕಟ್ಟಾಗಿದೆ ಎಂಬುದು ಭಕ್ತಾದಿಗಳ ಅಭಿಪ್ರಾಯವಾಗಿದೆ.




