HEALTH TIPS

ಚೀನಾ ಭಾರೀ ಪ್ರಮಾಣದಲ್ಲಿ ಭಾರತದ ಜಮೀನನ್ನು ಕಬಳಿಸಿದೆ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ

             ವದೆಹಲಿ:ವಾಸ್ತವಿಕ ನಿಯಂತ್ರಣ ರೇಖೆ (ಎಲ್ಸಿಎ)ಯನ್ನು ಬದಲಾಯಿಸುವ ತನ್ನ ಪ್ರಯತ್ನದಲ್ಲಿ ಚೀನಾವು ಕಳೆದ ಹಲವಾರು ವರ್ಷಗಳಲ್ಲಿ ಅಗಾಧ ಯಶಸ್ಸನ್ನು ಕಂಡಿದೆ ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಯಲ್ಲಿ ಗುರುವಾರ ಪ್ರಕಟಗೊಂಡಿರುವ ಸಂದರ್ಶನವೊಂದರಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

                  ಅರುಣಾಚಲಪ್ರದೇಶ ಗಡಿಯಲ್ಲಿ ಡಿಸೆಂಬರ್ 9ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಏರ್ಪಟ್ಟ ಸಂಘರ್ಷದ ಹಿನ್ನೆಲೆಯಲ್ಲಿ ಮಾಡಲಾದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

              ಅರುಣಾಚಲಪ್ರದೇಶದ ತವಾಂಗ್ ವಿಭಾಗದಲ್ಲಿ ಭಾರತೀಯ ಭೂಭಾಗವನ್ನು ಆಕ್ರಮಿಸುವ ಮೂಲಕ ವಾಸ್ತವಿಕ ನಿಯಂತ್ರಣ ರೇಖೆಯನ್ನು ಬದಲಿಸಲು ಚೀನಾ ಸೈನಿಕರು ಪ್ರಯತ್ನಿಸಿದರು ಎಂಬುದಾಗಿ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ ನಲ್ಲಿ ಹೇಳಿದ್ದರು. ಚೀನೀಯರ ಅತಿಕ್ರಮಣವನ್ನು ತಡೆಯಲು ಭಾರತೀಯ ಸೈನಿಕರು ಮುಂದಾದಾಗ, ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿತು ಹಾಗೂ ಅವರು ಕೈ-ಕೈ ಮಿಲಾಯಿಸಿದರು ಎಂದು ಸಿಂಗ್ ಹೇಳಿದರು.

                 ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರಿಗೆ ''ಸಣ್ಣಪುಟ್ಟ ಗಾಯಗಳಾಗಿವೆ'' ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

                  ಚೀನಾವು ದಶಕಗಳ ಅವಧಿಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ಹಂತ ಹಂತವಾಗಿ ತುಂಬಾ ಬದಲಿಸಿದೆ ಎಂದು ಸಂದರ್ಶನದಲ್ಲಿ ನರವಣೆ ಹೇಳಿದರು. ''ಇದನ್ನು ಅವರು ನಿರಂತರವಾಗಿ ಸಣ್ಣ ಪ್ರಮಾಣದಲ್ಲಿ ಮಾಡುತ್ತಾ ಬಂದಿದ್ದಾರೆ. ಆಯಾಯ ಹಂತಗಳಲ್ಲಿ ಅದು ತುಂಬಾ ಅಪಾಯಕಾರಿ ಎಂಬುದಾಗಿ ಅನಿಸುತ್ತಿರಲಿಲ್ಲ'' ಎಂದು ಮಾಜಿ ಸೇನಾ ಮುಖ್ಯಸ್ಥರು ಹೇಳಿದರು.

                ''ಈ ಅತಿಕ್ರಮಣಗಳು ತುಂಬಾ ಅಪಾಯರಹಿತವೆಂಬಂತೆ ಕಾಣುತ್ತಿದ್ದವು. ಅವರು ಒಂದು ಸಲಕ್ಕೆ ಒಂದು ಇಂಚಿನಷ್ಟು ಅತಿಕ್ರಮಣ ನಡೆಸುತ್ತಿದ್ದರು. ಆದರೆ, ಈ ಎಲ್ಲಾ ಅತಿಕ್ರಮಣಗಳನ್ನು ಒಟ್ಟಾಗಿ ಪರಿಗಣಿಸಿದರೆ, ಹಲವು ದಶಕಗಳ ಅವಧಿಯಲ್ಲಿ ಅವರು ತುಂಬಾ ಜಮೀನನ್ನು ಒಳಗೆ ಹಾಕಿಕೊಂಡಿದ್ದಾರೆ. ಈ ತಂತ್ರಗಾರಿಕೆಯನ್ನು ಅವರು ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ'' ಎಂದು ಅವರು ಹೇಳಿದರು.

               2020ರ ಜೂನ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಸೇನೆ ಅನುಭವಿಸಿದ ಸಾವು-ನೋವುಗಳು, ಅವರು ಮೊದಲ ಬಾರಿಗೆ ಅನುಭವಿಸಿದ ಹಿನ್ನಡೆಯಾಗಿತ್ತು ಎಂದು ನರವಾಣೆ ಅಭಿಪ್ರಾಯಪಟ್ಟರು. ಆ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ತನ್ನ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂಬುದಾಗಿ ಬಳಿಕ ಚೀನಾ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries