ಬದಿಯಡ್ಕ: ಬಡಗು ಶಬರಿಮಲೆ ಉಬ್ರಂಗಳ ಮಹಾದೇವ ಪಾರ್ವತಿ ಶ್ರೀ ಶಾಸ್ತರ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವಕ್ಕೆ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಸಮಿತಿ, ಸೇವಾ ಸಮಿತಿ, ಸಿಬ್ಬಂದಿವರ್ಗ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಾಗೂ ಊರ ಭಗದ್ಭಕ್ತರ ಸಹಕಾರದೊಂದಿಗೆ ಹೊರೆ ಕಾಣಿಕೆ ಸಮರ್ಪಣೆ ಶೋಭಾ ಯಾತ್ರೆ ಬುಧವಾರ ನಡೆಯಿತು.
ಈ ಸಂದರ್ಭ ಪೆರಡಾಲ ಸನ್ನಿಧಿಯ ಆಡಳಿತ ಸಮಿತಿ ಅಧ್ಯಕ್ಷ ನ್ಯಾಯವಾದಿ.ವೆಂಕಟರಮಣ ಭಟ್, ಸದಸ್ಯರಾದ ಪಿ.ಜಿ. ಜಗನ್ನಾಥ ರೈ, ಕೃಷ್ಣ ಪೆರಡಾಲ, ಜಗದೀಶ ಪೆರಡಾಲ, ಮಾಜಿ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಪದ್ಮನಾಭ ಶೆಟ್ಟಿ ವಳಮಲೆ, ಉದಯ ಶಂಕರ್ ಭಟ್, ಸೇವಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ತಲ್ಪನಾಜೆ, ಅರ್ಚಕ ವೃಂದ, ಸಿಬ್ಬಂದಿ ವರ್ಗ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಕ್ತರು ಉಪಸ್ಥಿತರಿದ್ದರು.
ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ
0
ಡಿಸೆಂಬರ್ 30, 2022
Tags

