ಕೊಚ್ಚಿ: ಕೊಲ್ಲಂನ ವಿಸ್ಮಯ ಪ್ರಕರಣದಲ್ಲಿ ಶಿಕ್ಷೆಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಲು ಆರೋಪಿ ಕಿರಣ್ ಕುಮಾರ್ ನೀಡಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಈ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಇದರೊಂದಿಗೆ ಕಿರಣ್ ಕುಮಾರ್ ಜೈಲಿನಲ್ಲೇ ಇರಬೇಕಾಗುತ್ತದೆ. ನ್ಯಾಯಮೂರ್ತಿ ಅಲೆಕ್ಸಾಂಡರ್ ಥಾಮಸ್ ಮತ್ತು ಸೋಫಿ ಥಾಮಸ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಕೊಲ್ಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಶಿಕ್ಷೆಯ ವಿರುದ್ಧ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ತೀರ್ಪು ಬರುವವರೆಗೆ ಶಿಕ್ಷೆಯ ಅನುಷ್ಠಾನವನ್ನು ಅಮಾನತುಗೊಳಿಸುವಂತೆ ಆರೋಪಿ ಕೋರಿದ್ದ.
ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೈದ ಬಿ.ಎ.ಎಂ.ಎಸ್. ವಿದ್ಯಾರ್ಥಿನಿಯೂ, ಕಿರಣ್ ಕುಮಾರ್ ಪತ್ನಿಯೂ ಆಗಿದ್ದ ವಿಸ್ಮಯ ಮೇ 24ರಂದು ಆತ್ಮಹತ್ಯೆಗೈದಿದ್ದು ಪ್ರಕರಣದಲ್ಲಿ ಕಿರಣ್ ಕುಮಾರ್ ದೋಷಿ ಎಂದು ಕೆಳ ನ್ಯಾಯಾಲಯ ತೀರ್ಪು ನೀಡಿತ್ತು. ಹತ್ತು ವರ್ಷ ಜೈಲು ಶಿಕ್ಷೆ ಮತ್ತು 12.55 ಲಕ್ಷ ರೂ.ದಂಡ ವಿಧಿಸಲಾಗಿತ್ತು. ಐದು ಸೆಕ್ಷನ್ ಗಳಲ್ಲಿ ಒಟ್ಟು 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರೂ, ಇವೆಲ್ಲವನ್ನೂ ಏಕಕಾಲದಲ್ಲಿ ಪೂರೈಸಿದರೆ ಸಾಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಿರಣ್ ಕುಮಾರ್ ಗೆ ಹಿನ್ನಡೆ; ವಿಸ್ಮಯ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಬೇಕೆಂಬ ಮನವಿ ವಜಾಗೊಳಿಸಿದ ಹೈಕೋರ್ಟ್
0
ಡಿಸೆಂಬರ್ 13, 2022


