ಬೆಂಗಳೂರು: ವಾಟ್ಸ್‌ಆಯಪ್ ನೂತನ ಅಪ್‌ಡೇಟ್‌ನಲ್ಲಿ ಅವತಾರ್ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಲಾಗುತ್ತಿದೆ.
ಈಗಾಗಲೇ ಎಮೋಜಿ, ಸ್ಟಿಕರ್ಸ್ ಮತ್ತು ಜಿಫ್ ಬಳಸುತ್ತಿರುವವರಿಗೆ, ಅವತಾರ್ ಹೊಸದಾಗಿ ಲಭ್ಯವಾಗುತ್ತಿದೆ.
ಮೆಟಾ ಒಡೆತನದ ವಾಟ್ಸ್‌ಆಯಪ್, ಅವತಾರ್ ಫೀಚರ್ ಅನ್ನು ಪರೀಕ್ಷಾರ್ಥ ಬಳಕೆ ಮಾಡಿತ್ತು.
ಬಳಿಕ, ಈಗ ಆಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಹೊಸ ಅಪ್‌ಡೇಟ್ ಜತೆಗೆ ನೀಡುತ್ತಿದೆ.
ವಾಟ್ಸ್‌ಆಯಪ್ ಬಳಕೆದಾರರು, ಹೊಸ ಅವತಾರ್ ಫೀಚರ್ ಬಳಸಿಕೊಂಡು, 36 ಬಗೆಯ ವಿವಿಧ ಅವತಾರ್ ರಚಿಸಬಹುದು. ಅದನ್ನು ಸ್ಟಿಕರ್ಸ್, ಡಿಸ್‌ಪ್ಲೇ ಆಗಿಯೂ ಬಳಸಬಹುದು.
ವಿವಿಧ ಕೇಶವಿನ್ಯಾಸ, ಮುಖ ಚಹರೆ, ವಸ್ತ್ರಗಳನ್ನು ಧರಿಸಿಕೊಂಡಿರುವ ಅವತಾರ್ ರಚಿಸಲು ವಾಟ್ಸ್‌ಆಯಪ್ ಬಳಕೆದಾರರಿಗೆ ಅವಕಾಶ ನೀಡಲಿದೆ.





