HEALTH TIPS

ಸೈನಿಕರಿಗೆ ಪಿಂಚಣಿ: ಕೇಂದ್ರ ಸರ್ಕಾರಕ್ಕೆ ಮಾರ್ಚ್‌ 15ವರೆಗೆ 'ಸುಪ್ರೀಂ' ಕಾಲಾವಕಾಶ 4hr7 shares

 

             ನವದೆಹಲಿ: 'ಒಂದು ಶ್ರೇಣಿ, ಒಂದು ಪಿಂಚಣಿ' ಅಡಿಯಲ್ಲಿ ನಿವೃತ್ತ ಸೈನಿಕರಿಗೆ ನೀಡಲು ಬಾಕಿ ಇರುವ ಪಿಂಚಣಿಗಳನ್ನು ಮಾರ್ಚ್‌ 15ರ ಒಳಗಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಹೇಳಿದೆ.

                 ಮಾರ್ಚ್‌ 15 ನಂತರವೂ ತಡಮಾಡದೆ ಪಿಂಚಣಿದಾರರಿಗೆ ಪಿಂಚಣಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ ಅವರಿದ್ದ ಪೀಠವು ಕೇಂದ್ರಕ್ಕೆ ತಾಕೀತು ಮಾಡಿದೆ.

              'ಪಿಂಚಣಿ ನೀಡುವಲ್ಲಿ ಕೇಂದ್ರದ ಯಾವುದೇ ಕ್ರಮದಿಂದ ಬೇಸರವಾದರೆ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು' ಎಂದು ನ್ಯಾಯಾಲಯವು ಮಾಜಿ ಸೇನಾನಿರತ ಸಂಸ್ಥೆಗೆ ಅವಕಾಶ ನೀಡಿದೆ.

                   'ರಕ್ಷಣಾ ಪಡೆಗಳ ಲೆಕ್ಕಪತ್ರ ಮಹಾನಿಯಂತ್ರಕರು (ಸಿಜಿಡಿಎ) ಲೆಕ್ಕಾಚಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಕೊನೇ ಹಂತದ ಅನುಮೋದನೆಗಾಗಿ ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿದೆ. ಮಾರ್ಚ್‌ 15ರ ಹೊತ್ತಿಗೆ ಎಲ್ಲಾ 25 ಲಕ್ಷ ಪಿಂಚಣಿದಾರರ ಖಾತೆಗಳಿಗೆ ಪಿಂಚಣಿ ಹಾಕಲಾಗುವುದು' ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಾಮಯ್ಯ ನ್ಯಾಯಾಲಯಕ್ಕೆ ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries