HEALTH TIPS

ಪ್ರತಿದಿನ ನಾಲ್ಕೂವರೆ ಗಂಟೆ ಕೆಲ್ಸ ಮಾಡಿ 7000 ರೂ. ಸಂಪಾದನೆ! ಸಿಕ್ಕಿಬಿದ್ದ 21ರ ಯುವತಿಯ ಕರಾಳ ಹಿನ್ನೆಲೆ ಇದು

 

                ಕೊಚ್ಚಿ: ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೂ ಅಪಾಯಕಾರಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ 21 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ತಿಂಗಳುಗಳ ಸುದೀರ್ಘ ತನಿಖೆಯ ನಂತರ ಕೇರಳದ ಅಬಕಾರಿ ಅಧಿಕಾರಿಗಳು ಯುವತಿಯನ್ನು ಬಂಧಿಸಿದ್ದಾರೆ.

                    ಆರೋಪಿಯನ್ನು ಕೊಲ್ಲಂ ಮೂಲಕ ಬ್ಲೆಸ್ಸಿ ಎಂದು ಗುರುತಿಸಲಾಗಿದೆ.

ಈಕೆ ಎರ್ನಾಕುಲಂನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸಹ ಹೌದು. ಅಗತ್ಯವಿರುವವರು ಕಳುಹಿಸುತ್ತಿದ್ದ ಲೊಕೇಶನ್​​ಗೆ ಸ್ಕೂಟರ್​ ಮೂಲಕ ಡ್ರಗ್ಸ್​ ತಲುಪಿಸುತ್ತಿದ್ದಳು. ಕೋಯಿಕ್ಕೂಡ್​ ನಿವಾಸಿಯೊಬ್ಬರು ಭಾರೀ ಪ್ರಮಾಣದ ಎಂಡಿಎಂಎ ಡ್ರಗ್ಸ್​ ಅನ್ನು ಬ್ಲೆಸ್ಸಿಗೆ ತಲುಪಿಸುತ್ತಿದ್ದನು ಎಂದು ತಿಳಿದುಬಂದಿದೆ. ಒಟ್ಟು 7 ಮಂದಿ ಈ ಡ್ರಗ್ಸ್​ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಇದೀಗ ಅಬಕಾರಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

                    ಬ್ಲೆಸ್ಸಿ ವಾಸವಿರುವ ಬಾಡಿಗೆ ಫ್ಲ್ಯಾಟ್​ನಲ್ಲಿ 2.5 ಗ್ರಾಂ ಎಂಡಿಎಂಎ ಡ್ರಗ್ಸ್​ ಅನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಯೊಂದಿಗೆ ಫ್ಲ್ಯಾನ್​ನಲ್ಲಿ ವಾಸವಿದ್ದ ಮೂವರು ಮಹಿಳೆಯರು ಕೂಡ ಡ್ರಗ್ಸ್​ ವ್ಯವಹಾರದಲ್ಲಿ ಭಾಗಿಯಾಗಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಬ್ಲೆಸ್ಸಿ ಓರ್ವ ಮೀನುಗಾರನ ಮಗಳು. ವಾಯುಯಾನ ಕೋರ್ಸ್​ ಮಾಡಲೆಂದು ಕೊಚ್ಚಿಗೆ ಬಂದ ಬ್ಲೆಸ್ಸಿ, ತರಗತಿಗೆ ಹೋಗದೆ ಸ್ಪಾನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಕೆಲಸ ಕಳೆದುಕೊಂಡಾಗ ಆಕೆ ಡ್ರಗ್ಸ್​ ವ್ಯವಹಾರಕ್ಕೆ ಇಳಿದಳು. ಮಂಗಳವಾರ ಆಕೆಯ ಮನೆಗೆ ತೆರಳಿ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕೋಯಿಕ್ಕೋಡ್ ಮೂಲದವರೊಬ್ಬರು ಆಕೆಗೆ ಫ್ಲ್ಯಾಟ್​ ಅನ್ನು ಬಾಡಿಗೆಗೆ ನೀಡಿದ್ದರು. ಇದಲ್ಲದೇ ಎರಡು ಫ್ಲ್ಯಾಟ್​ಗಳನ್ನೂ ಬಾಡಿಗೆಗೆ ಪಡೆದಿದ್ದಾರೆ. ಇನ್ನಷ್ಟು ಮಂದಿ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

                                    ಒಂದು ದಿನಕ್ಕೆ 7 ಸಾವಿರ ಸಂಪಾದನೆ
             ಪ್ರತಿದಿನ ತಡರಾತ್ರಿ 2.30ಕ್ಕೆ ಡ್ರಗ್ಸ್​ ವ್ಯವಹಾರ ಶುರು ಮಾಡಿ ಬೆಳಗ್ಗೆ 7 ಗಂಟೆಗೆ ಮುಗಿಸುತ್ತಿದ್ದಳು. ಕನಿಷ್ಠ 7 ಸ್ಥಳಗಳಿಗೆ ಪ್ರತಿದಿನ ಡ್ರಗ್ಸ್​ ಪೂರೈಸುತ್ತಿದ್ದಳು. ದಿನಕ್ಕೆ 7 ಸಾವಿರ ರೂ. ಸಂಪಾದನೆ ಮಾಡುತ್ತಿದ್ದಳು. ಇದರಿಂದ ಐಷಾರಾಮಿ ಜೀವನ ಸಾಗಿಸುತ್ತಿದ್ದ ಬ್ಲೆಸ್ಸಿ ತಾನೂ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಕುಟುಂಬದ ಬಳಿ ಸುಳ್ಳು ಹೇಳಿಕೊಂಡಿದ್ದಳು. ತನ್ನ ಕೆಲಸ ಮುಗಿಸಿದ ಬಳಿಕ ಇಡೀ ದಿನ ಮಲಗುತ್ತಿದ್ದಳು.

                 ಕಲೂರಿನಲ್ಲಿ ಎಂಡಿಎಂಎ ಸಮೇತ ಸಿಕ್ಕಿಬಿದ್ದ ಯುವಕನಿಂದ ದೊರೆತ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿದಾಗ ಬ್ಲೆಸ್ಸಿ ಸಿಕ್ಕಿಬಿದ್ದಿದ್ದಾಳೆ. ಇನ್​ಸ್ಟಾಗ್ರಾಂ ಮೂಲಕ ಪ್ರತಿದಿನ ವ್ಯವಹಾರವನ್ನು ನಡೆಸುತ್ತಿದ್ದರು. ಪೊಲೀಸರಿಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ಹೆಚ್ಚಾಗಿ ಸಿಮ್​ ಬಳಸದೇ ಹಾಟ್​ಸ್ಪಾಟ್​ ಮೂಲಕ ನೆಟ್​ ಬಳಸುತ್ತಿದ್ದಳು. ಸದ್ಯ ಬ್ಲೆಸ್ಸಿಯನ್ನು ಬಂಧಿಸಲಾಗಿದ್ದು, ಆಕೆಯ ವಿಚಾರಣೆ ಬಳಿಕ ಇನ್ನಷ್ಟು ಮಹತ್ವದ ಮಾಹಿತಿ ಅಬಕಾರಿ ಅಧಿಕಾರಿಗಳಿಗೆ ಸಿಗುವ ಸಾಧ್ಯತೆ ಇದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries