HEALTH TIPS

ಸಂಕ್ರಾಂತಿಗೆ ಮಕ್ಕಳಿಗೆ ನೀಡಬಹುದಾದ ಅದ್ಭುತ ಫ್ಯಾಂಟಸಿ ಕತೆಗಳ 8 ಪುಸ್ತಕಗಳಿವು

 ಮಕರ ಸಂಕ್ರಾಂತಿ, ಪೊಂಗಲ್‌ ಬರುತ್ತಿದೆ. ಸಂಕ್ರಾಂತಿ ಹಬ್ಬವನ್ನು ದೇಶದೆಲ್ಲಡೆ ಬೇರೆ-ಬೇರೆ ಹೆಸರಿನಿಂದ ಆಚರಿಸಲಾಗುವುದು. ಸುಗ್ಗಿಯ ಹಬ್ಬ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ, ಈ ಹಬ್ಬದ ಬಗ್ಗೆ ಮತ್ತಷ್ಟು ತಿಳಿಯಲು ಸಾಹಿತ್ಯಗಳು ಸಹಾಯ ಮಾಡುತ್ತವೆ.

ನಾವಿಲ್ಲಿ ಸಂಕ್ರಾಂತಿ ಕುರಿತು ಬರೆದಿರುವ ಕೆಲವೊಂದು ಪುಸ್ತಕಗಳ ಪಟ್ಟಿ ನೀಡಿದ್ದೇವೆ ನೋಡಿ:

1. ದೇವ್‌ &ನೋಲಿ-ಕೈಟ್ ಕ್ರೀಝಿ ( Dev & Ollie - Kite Crazy )

ಶ್ವೇತಾ ಅಗರ್‌ವಾಲ್‌ ಈ ಪುಸ್ತಕವನ್ನು ಬರೆದಿದ್ದು ಸೋಮನಥ್ ಚಟರ್ಜಿ ಈ ಬುಕ್‌ ಅನ್ನು ಇಲ್ಯೂಸ್ಟ್ರೇಟ್ ಮಾಡಿದ್ದಾರೆ. 4 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದಾದ ಪರ್ಫೆಕ್ಟ್ ಬುಕ್ ಇದಾಗಿದೆ. ಮಕ್ಳಳಿಗೆ ಫ್ಯಾಂಟಿಸಿ ಕತೆ ಹೇಳುವ ಈ ಬುಕ್‌ ಅನ್ನು ಸಂಕ್ರಾಂತಿಗೆ ಮಕ್ಕಳಿಗೆ ಉಡುಗೊರೆಯಾಗಿ ನೀಡಬಹುದು.

2. ವೇರ್‌ಈಸ್‌ ದಿ ಸನ್? (Where's the Sun?) ನಿವೇದಿತಾ ಸುಬ್ರಮಣ್ಯ ಈ ಪುಸ್ತಕವನ್ನು ಬರೆದಿದ್ದಾರೆ. ಒಂದು ಮುಂಜಾನೆ ತಾಯಿ ಮತ್ತು ಮಗು ಸೂರ್ಯನನ್ನು ಹುಡುಕಿಕೊಂಡು ಹೋಗುವಂಥ ಸುಂದರ ಕತೆಯನ್ನು ಈ ಪುಸ್ತಕ ಒಳಗೊಂಡಿದೆ. ಇದರಲ್ಲಿರುವ ಕಲರ್‌ಫುಲ್‌ ಪಿಕ್ಷರ್‌ಗಳು ಕೂಡ ಗಮನ ಸೆಳೆಯುತ್ತದೆ.

3. ದಿ ಟೊಮೆಟೊ ಫ್ಲಡ್ ( The Tomato Flood) ಗಾರ್ಡನ್‌ ಹಾಗೂ ಸುಗ್ಗಿಯ ಕುರಿತ ಸುಂದರ ಕತೆಗಳನ್ನು ಒಳಗೊಂಡಿರುವ ಪುಸ್ತಕ ಇದಾಗಿದೆ. ನಿಯ್ಯಾತೆ ಪರಿಖ್ ಶರ್ಮಾ ಈ ಪುಸ್ತಕವನ್ನು ಬರೆದಿದ್ದಾರೆ. ಇದರಲ್ಲಿ ವೀರ್ ಹಾಗೂ ಅನನ್ಯ ಎಂಬ ಇಬ್ಬರು ಪುಟ್ಟ ಪಾತ್ರದಾರಿಗಳಿದ್ದಾರೆ. ವೀರ್ ಹಾಗೂ ಅವನ ಸಹೋದರಿ ಅನನ್ಯ ಸೇರಿ ಗಾರ್ಡನ್‌ನಿಂದ ಟೊಮೆಟೊ ಕಿತ್ತು ಒಬ್ಬರಿಗೊಬ್ಬರು ಎಸೆಯುತ್ತಾ ಆಟ ಆಡುವಾಗ ಟೊಮೆಟೊದ ಒಡೆದು ಅದರ ರಸವೆಲ್ಲಾ ಅಲ್ಲಿ ಚೆಲ್ಲುತ್ತೆ. ಸ್ವಲ್ಪ ದಿನಗಳು ಕಳೆದು ನೋಡಿದಾಗ ಅಲ್ಲಿ ಚಿಕ್ಕ-ಚಿಕ್ಕ ಟೊಮೆಟೊ ಗಿಡಗಳು ಹುಟ್ಟಿರುತ್ತದೆ. ಹೀಗೆ ಮಕ್ಕಳಿಬ್ಬರು ಕೈ ತೋಟ ಮಾಡಿದ ಸುಂದರ ಕತೆ ಇದಾಗಿದ್ದು ಮಕ್ಕಳಿಗೆ ನೀತಿ ಕತೆ ಹೇಳಲು ಈ ಪುಸ್ತಕ ಬೆಸ್ಟ್.

4. ಫೆಸ್ಟಿವಲ್ ಥ್ರೂ ದಿ ಇಯರ್ ಸ್ಟೋರಿಸ್ (Festival Through the Year Stories) ರಚ್ನಾ ಚೌಧುರಿ ಈ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಸಂಕ್ರಾಂತಿಯಿಂದ ಹಿಡಿದು , ಆಯುಧ ಪೂಜೆ, ದೀಪಾವಳಿ, ಈದ್‌ಮಿಲಾದ್, ಕ್ರಿಸ್ಮಸ್‌ ಎಲ್ಲಾ ಹಬ್ಬಗಳ ಬಗ್ಗೆ ಸುಂದರವಾದ ಫೋಟೋಗಳ ಜೊತೆ ವಿವರಣೆ ಇದೆ.

5. ಫಾರ್ಮರ್ ಫಲ್ಗು ಗೋಸ್‌ ಕೈಟ್‌ ಫ್ಲೈಯಿಂಗ್ (Farmer Falgu Goes Kite Flying) ರೈತ ಫಲ್ಗು ಮಗಳ ಜೊತೆ ಗಾಳಿ ಹಾರಿಸುವ ಸ್ಪರ್ಧೆಗೆ ಹೋಗಿರುತ್ತಾನೆ, ಆಗ ಆತನ ಮಗಳು ಹಾರಿಸಿದ ಗಾಳಿಪಟ ದೊಡ್ಡ ಗಾಳಿ ಬೀಸಿದ ಕಾರಣ ಕಳೆದು ಹೋಗುತ್ತದೆ, ಮಗಳಿಗೆ ಆ ಬಾವುಟ ತಂದು ಕೊಡಲು ರೈತ ಮಾಡುವ ಉಪಾಯಗಳು ಮಾತ್ರ ತುಂಬಾನೇ ಆಸಕ್ತಿಕರವಾಗಿದೆ, ಮಕ್ಕಳು ಓದಲೇಬೇಕಾದ ಪುಸ್ತಕಗಳಲ್ಲಿ ಇದೂ ಒಂದಾಗಿದೆ.

6. ಸುಶೀಲಾ'ಸ್ ಕೋಲಂ (Susheela's Kolams) ಬುಕ್‌ ನೋಡಿ ಸುಶೀಲ ಹೇಗೆ ರಂಗೋಲಿ ಬಿಡಿಸುತ್ತಾಳೆ ಎಂಬುವುದರ ಕುರಿತ ಪುಸ್ತಕ ಇದಾಗಿದೆ. ಈ ಪುಸ್ತಕವನ್ನು ಶ್ರೀದಲಾ ಸ್ವಾಮಿ ಬರೆದಿದ್ದಾರೆ. ತಮಿಳುನಾಡಿನಲ್ಲಿ ಸುಶೀಲ ಎಂಬ ಪುಟ್ಟ ಬಾಲಕಿ ಪೊಂಗಲ್ ಸೇರಿ ಎಲ್ಲಾ ಹಬ್ಬಕ್ಕೆ ತನ್ನ ಮನೆ ಮುಂದೆ ಸುಂದರವಾದ ರಂಗೋಲಿ ಬಿಡಿಸುತ್ತಾಳೆ, ಇದನ್ನು ಆಕೆ ತಾಯಿ ಬಳಿಯಿಂದ ಕಲಿತಿರುತ್ತಾಳೆ. ಇವಳ ರಂಗೋಲಿ ನೋಡಿ ಮೆಚ್ಚಿದ ಏರ್‌ಫೋರ್ಸ್ ಆಕೆಗೆ ಆಕಾಶದಲ್ಲಿ ರಂಗೋಲಿ ಬಿಡಿಸಿಕೊಡು ಅಂತ ಕೇಳಿಕೊಳ್ಳುತ್ತಾರೆ, ಆಕೆ ಆಕಾಶದಲ್ಲಿ ಹೇಗೆ ರಂಗೋಲಿ ಬಿಡಿಸುತ್ತಾಳೆ ಎಂಬ ಫ್ಯಾಂಟಿಸಿ ಕತೆ ಒಳಗೊಂಡಿದೆ.

7. ದಿ ರೂಸ್ಟರ್ ಅಂಡ್ ಸನ್‌ (The Rooster and the Sun) ರೈತ ಸೂರ್ಯನ ಮೇಲೆ ಕೋಪಗೊಂಡು ಬೈದಾಗ ಬೇಸರಗೊಂಡ ಸೂರ್ಯ ಮರೆಯಾಗುತ್ತಾನೆ, ಆಗ ಸೂರ್ಯ ಮತ್ತೆ ಆಕಾಶದಲ್ಲಿ ಕಾಣುವಂತೆ ಮಾಡಲು ಕೋಳಿ ಮಾಡುವ ಉಪಾಯಗಳ ಫ್ಯಾಂಟಸಿ ಸ್ಟೋರಿಯ ಪುಸ್ತಕ ಇದಾಗಿದೆ. ಇದು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿದ್ದು ಮಕ್ಕಳಿಗೆ ಆಸಕ್ತಿಕರವ ಆಗಿಸಲು ಆಕರ್ಷಕ ಚಿತ್ರಗಳಿವೆ.

8. ಭೂಮಿ ಲರ್ನ್ಸ್‌ ಟು ಡ್ರಾ ಎ ಕೋಲಂ (Bhoomi Learns to Draw a Kolam ) ಸಂಕ್ರಾಂತಿ ಹಾಗೂ ಪೊಂಗಲ್‌ಗೆ ಮಕ್ಕಳಿಗೆ ಗಿಫ್ಟ್ ಮಾಡಬಹುದಾದ ಮತ್ತೊಂದು ಅದ್ಭುತ ಪುಸ್ತಕ ಇದಾಗಿದೆ. ಸಂಕ್ರಾಂತಿ ಕತೆಯನ್ನು ಒಳಗೊಂಡಿರುವ ಮತ್ತಿತರ ಮಕ್ಕಳ ಪುಸ್ತಕಗಳ ಬಗ್ಗೆ ಮಾಹಿತಿ ಗೊತ್ತಿದ್ದರೆ ಕಮೆಂಟ್‌ ಮಾಡಿ ತಿಳಿಸಿ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries