ಯಕ್ಷಗಾನ ಕಲಾವಿದ ಅಗಲ್ಪಾಡಿ ಮಹಾಲಿಂಗ ನಿಧನ
0
ಜನವರಿ 09, 2023
ಬದಿಯಡ್ಕ: ಹಿರಿಯ ಯಕ್ಷಗಾನ ಕಲಾವಿದ ಅಗಲ್ಪಾಡಿ ಮಹಾಲಿಂಗ ಎಂದೇ ಕರೆಯುವ ಮಹಾಲಿಂಗ ಚೆಟ್ಟಿಯಾರ್ (64) ಉಬ್ರಂಗಳದ ಸ್ವಗೃಹದಲ್ಲಿ ಭಾನುವಾರ ನಿಧನರಾದರು.
ಮೃತರು ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು. ದೇವಿಮಹಾತ್ಮೆಯಲ್ಲಿ ದೇವಿಯಾಗಿ ಮಿಂಚಿದ್ದರು. ಇದಾದ ಬಳಿಕ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಸಂಘದಲ್ಲೂ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರಿಗೆ ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ.
ಸಂತಾಪ
ಮಹಾಲಿಂಗರ ನಿಧನಕ್ಕೆ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾ ಸಂಘದ ನೇತೃತ್ವದಲ್ಲಿ ದಲ್ಲಿ ಸಂತಾಪ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಪರಿವಾರ ಸಮೇತ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಗಂಗಾಧರ್ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಕೊನೆಯದ್ದಾಗಿ ಉಬ್ರಂಗಳ ಶ್ರೀ ಮಹಾದೇವ ಪಾರ್ವತ ಶ್ರೀ ಶಾಸ್ತಾರ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ನಡೆದ ಯಕ್ಷಗಾನದಲ್ಲಿ ಭಾಗವಹಿಸಿರುವುದನ್ನು ಸ್ಮರಿಸಲಾಯಿತು.
ಕಲಾ ಸಂಘದ ಅಧ್ಯಕ್ಷ ಮನು ಪಣಿಕ್ಕರ್, ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮೈಲ್‍ತೊಟ್ಟಿ, ಉಪಾಧ್ಯಕ್ಷ ವಿಶ್ವನಾಥ ಬಳ್ಳಪದವು, ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಶಿವಾನಂದ, ಯಕ್ಷಗಾನ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೋಳಾರಿ, ಕಲಾವಿದರಾದ ದಿವಾಕರ ಮಾವಿನಕಟ್ಟೆ, ರಾಜೇಶ್ ನೆಕ್ರಾಜೆ, ಶ್ರೀನಿವಾಸ ಕೋಳಾರಿ ಮತ್ತಿತರರು ಉಪಸ್ಥಿತರಿದ್ದರು.




-Mahalinga.jpg)
