HEALTH TIPS

ಉದ್ಯೋಗ ನೋಂದಣಿಯನ್ನು ನವೀಕರಿಸಬಹುದು


 
             ಕಾಸರಗೋಡು::2000 ಜನವರಿ 1 ರಿಂದ 2022 ಅಕ್ಟೋಬರ್ 31 ರ ವರೆಗೆ ನಿಯಮಾನುಸಾರವಾಗಿ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೋಂದಣಿಯನ್ನು ನವೀಕರಿಸಲು ಸಾಧ್ಯವಾಗದೆ ಹಿರಿತನ (ಸೀನಿಯೋರಿಟಿ ) ನಷ್ಟ ಗೊಂಡಿರುವ ಅಭ್ಯರ್ಥಿಗಳು ಅವರ ಸೀನಿಯೋರಿಟಿ ಯನ್ನು ಹಿಂತಿರುಗಿ ಪಡೆಯಲು ನೋಂದಣಿಯನ್ನು ನವೀಕರಿಸಲು ಅವಕಾಶ ಇದೆ. (ರೆಜಿಸ್ಟ್ರೇಶನ್ ಕಾರ್ಡ್ ನಲ್ಲಿ ನವೀಕರಿಸಲಿರುವ ತಿಂಗಳು 1999 ಅಕ್ಟೋಬರ್ ನಿಂದ 2022 ಆಗಸ್ಟ್ ವರೆಗೆ ದಾಖಲಿಸಿರುವ ವರಿಗೆ ಅವಕಾಶ). ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಲ್ಲಿಯೂ ಹೊಸದುರ್ಗ ಟೌನ್ ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್‌ನಲ್ಲಿಯೂ ನವೀಕರಿಸಲು ಅವಕಾಶ ಇದೆ. ಎಂಪ್ಲೋಯ್ ಮೆಂಟ್ ಕಾರ್ಡ್ ನೊಂದಿಗೆ ನೇರವಾಗಿ, ದೂತರ ಮುಖಾಂತರ ಅಥವಾ ಇ-ಪೋರ್ಟಲ್ ಮುಖಾಂತರ ಆನ್ಲೈನ್ ಆಗಿ ನೋಂದಣಿ ನವೀಕರಿಸಬಹುದು. ನೌಕರಿ ಸಿಕ್ಕ ನಂತರ ಸಕಾಲಕ್ಕೆ ಬಿಡುವ ಪ್ರಮಾಣ ಪತ್ರವನ್ನು ಲಗತ್ತಿಸದೇ ಇರುವವರು ಹಾಗೂ ಸಕಾಲಕ್ಕೆ ಲಗತ್ತಿಸದ ಕಾರಣ ಹಿರಿತನ ಕಳೆದುಕೊಂಡವರು ಅರ್ಜಿ ಸಲ್ಲಿಸಬಹುದು. ಶಿಕ್ಷಾ ಕ್ರಮದ ಭಾಗವಾಗಿ ಹಿರಿತನ ಕಳೆದುಕೊಂಡವರಿಗೆ ಪುನಃ ಲಭಿಸುವುದಿಲ್ಲ.
ವೆಬ್‌ಸೈಟ್ www.eemployment.kerala.gov.in ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ದೂರವಾಣಿ 04994 255582,
ಹೊಸದುರ್ಗ ಟೌನ್ ಉದ್ಯೋಗ ವಿನಿಮಯ ಕಛೇರಿ. ದೂರವಾಣಿ 0467 2209068.
 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries