ಕಾಸರಗೋಡು: ಸ್ವಾಮಿ ವಿವೇಕಾನಂದ ಅವರ ಜನ್ಮ ದಿನದನ್ವಯ ಆಚರಿಸಲಾಗುತ್ತಿರುವ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಮಿನಿ ಮ್ಯಾರಥಾನ್ ಗುರುವಾರ ಕಾಸರಗೋಡು ನಗರದಲ್ಲಿ ಜರುಗಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಸಮಾರಂಭ ಉದ್ಘಾಟಿಸಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಮನುಲಾಲ್ ಮೇಲತ್, ಯುವಮೋರ್ಚಾ ರಾಜ್ಯ ಮಹಿಳಾ ಸಂಚಾಲಕಿ ಅಂಜು ಜೋಸ್ಟಿ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ, ಗುರುಪ್ರಸಾದ್ ಪ್ರಭು, ಶ್ರೀಧರ ಕೂಡ್ಲು, ಚಂದ್ರಹಸ ಮಸ್ಟರ್, ಯುವಮೋರ್ಚಾ ಮಂಡಲ ಅಧ್ಯಕ್ಷ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಮನೋಜ್ ಕೂಡ್ಲು ಸವಾಗತಿಸಿದರು. ಕೀರ್ತನ್ ಕುಡ್ಲು ವಂದಿಸಿದರು.
ಕುಡ್ಲು ರಾಮದಾಸನಗರದಿಂದ ಆರಂಭಗೊಂಡ ಮಿನಿ ಮ್ಯಾರಥಾನ್ ಕಾಸರಗೋಡು ನಗರದಲ್ಲಿ ಸಮಾರೋಪಗೊಂಡಿತು. ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಓಟದಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಯುವ ದಿನಾಚರಣೆ ಯುವಮೋರ್ಚಾ ವತಿಯಿಂದ ಮಿನಿ ಮ್ಯಾರಥಾನ್
0
ಜನವರಿ 12, 2023
Tags





