HEALTH TIPS

ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ

 

               ಕೊಚ್ಚಿ: ಕೆಲವು ದಿನಗಳ ಹಿಂದೆ ಬೆಂಗಳೂರಿನ ಒಂದು ಪ್ರದೇಶದಲ್ಲಿ ಬಾಡಿಗೆದಾರರಿಗೆ ಅಪಾರ್ಟ್​ಮೆಂಟ್​ ಮಾಲೀಕರು ವಿಚಿತ್ರ ಷರತ್ತುಗಳನ್ನು ವಿಧಿಸಿದ್ದ ಸಂಗತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಅಂಥದ್ದೇ ಇನ್ನೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

             ಅದೇನೆಂದರೆ, ಮನೆ ಮಾಲೀಕರ ಸಂಘವೊಂದು ಬಾಡಿಗೆದಾರರಿಗೆ ಕೆಲವು ನಿಯಮಗಳನ್ನು ವಿಧಿಸಿದ್ದು, ಮದುವೆ ಆಗಿರದವರು ಮನೆ ಖಾಲಿ ಮಾಡಬೇಕು ಎಂಬ ಎಚ್ಚರಿಕೆಯನ್ನು ನೀಡಿದೆ. ಕೇರಳದ ಹೀರಾ ಟ್ವಿನ್ಸ್ ಓನರ್ಸ್ ಅಸೋಸಿಯೇಷನ್​ ಇಂಥ ನಿಯಮಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದೆ.


                  ತಿರುವನಂತಪುರದ ಅಪಾರ್ಟ್​ಮೆಂಟ್​​ವೊಂದರಲ್ಲಿ ಈ ರೀತಿ ನೋಟಿಸ್ ಜಾರಿ ಮಾಡಿರುವ ಕುರಿತು, ಬಾಡಿಗೆದಾರರು ಇದನ್ನು ನೈತಿಕ ಪೊಲೀಸ್​ಗಿರಿ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ. ಮಾತ್ರವಲ್ಲ, ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಮನೆ ಮಾಲೀಕರ ಸಂಘದ ಈ ನೋಟಿಸ್ ಟ್ವೀಟ್ ಮಾಡಿ ಕೇರಳ ಮುಖ್ಯಮಂತ್ರಿ, ಸಂಸದರು ಮತ್ತು ಕೇರಳ ಪೊಲೀಸರ ಹ್ಯಾಂಡಲ್​ಗಳಿಗೆ ಮೆನ್ಷನ್ ಮಾಡಿ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

                   ಫ್ಲ್ಯಾಟ್​ನಲ್ಲಿ ಬರೀ ಪುರುಷರು ಅಥವಾ ಮಹಿಳೆಯರಷ್ಟೇ ನೆಲೆಸಿರುವವರಿಗೆ ಈ ಸೂಚನೆಗಳು ಅನ್ವಯ ಎಂದು ಈ ಸಂಘ ಕೆಲವು ನಿಯಮಗಳನ್ನು ಪಟ್ಟಿ ಮಾಡಿದೆ, ಅವು ಈ ಕೆಳಗಿನಂತಿವೆ.

- ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ರಕ್ತಸಂಬಂಧಿಕರು ಬಿಟ್ಟು ವಿರುದ್ಧ ಲಿಂಗದವರು ಮನೆಗೆ ಬರುವಂತಿಲ್ಲ. ಬಾಡಿಗೆದಾರರು ಹೊರಗಿನಿಂದ ಬಂದವರನ್ನು ಬೇಸ್​ಮೆಂಟ್​ನಲ್ಲಿರುವ ಕಚೇರಿಯ ರಿಜಿಸ್ಟರ್ಡ್​ನಲ್ಲಿ ಎಂಟ್ರಿ ಮಾಡಿಸಿ ಅಲ್ಲಿ ಭೇಟಿ ಮಾಡಬಹುದು.
- ಎಲ್ಲ ಬಾಡಿಗೆದಾರರು ಅವರ ಆಧಾರ್​ ಮಾಹಿತಿ ನೀಡಿರಬೇಕು ಮತ್ತು ಪಾಲಕರು ಇಲ್ಲವೇ ಪೋಷಕರ ಮೊಬೈಲ್​ಫೋನ್​ ನಂಬರ್ ಕೊಟ್ಟಿರಬೇಕು.
- ಈ ಕಟ್ಟಡ ಕುಟುಂಬಸ್ಥರಿಗೆ ಮಾತ್ರ ಸೀಮಿತವಾದ್ದರಿಂದ ಕುಟುಂಬಸಹಿತ ಇರದವರು ಅಂದರೆ ಅವಿವಾಹಿತರು ಎರಡು ತಿಂಗಳ ಒಳಗೆ ಫ್ಲ್ಯಾಟ್​ ತೆರವುಗೊಳಿಸಬೇಕು.
- ವಾಚ್​ಮ್ಯಾನ್​ ಜತೆ ಅನವಶ್ಯಕ ತಕರಾರು-ಜಗಳ ಮಾಡಿದರೆ ಪೊಲೀಸರಿಗೆ ಮಾತ್ರವಲ್ಲದೆ ಬಾಡಿಗೆದಾರರ ಮನೆಯವರಿಗೂ ಮಾಹಿತಿ ನೀಡಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries