HEALTH TIPS

ಬಜೆಟ್‌ ಅಧಿವೇಶನದಲ್ಲಿ ಚೀನಾ ಕುರಿತ ಚರ್ಚೆಗೆ ಕಾಂಗ್ರೆಸ್‌ ಒತ್ತಾಯ

 

          ನವದೆಹಲಿ: ಡಿಜಿಪಿ-ಐಜಿಪಿ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಲಾದ ಸಂಶೋಧನಾ ಪ್ರಬಂಧವನ್ನು ಶುಕ್ರವಾರ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, 'ಚೀನಾದ ಬಗ್ಗೆ ಸರ್ಕಾರಕ್ಕಿರುವ ಧೋರಣೆಯನ್ನು ಪ್ರಬಂಧವು ಬಹಿರಂಗಪಡಿಸಿದೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಬೇಕು' ಎಂದು ಒತ್ತಾಯಿಸಿದೆ.

              ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, 'ಪ್ರಧಾನಿ ನರೇಂದ್ರ ಮೋದಿಯವರು ಈಗಲೂ ಚೀನಾಗೆ ಹೆದರುತ್ತಿದ್ದಾರೆಯೇ ಅಥವಾ ದೇಶವನ್ನು ಪ್ರೀತಿಸುತ್ತಾರೆಯೇ ಎಂಬುದನ್ನು ವಿವರಿಸಬೇಕು' ಎಂದು ಕೇಳಿದ್ದಾರೆ.

            'ಮೋದಿ ಅವರು ಚೀನಾಕ್ಕೆ ನೀಡಿದ್ದ ಕ್ಲೀನ್‌ಚಿಟ್‌ ಅನ್ನು ಈ ಪ್ರಬಂಧವು ಚೂರು ಚೂರು ಮಾಡಿದೆ. ಚೀನಾ ಭಾರತದ ಭೂಪ್ರದೇಶ ಅಕ್ರಮ ಆಕ್ರಮಣವನ್ನು ಹಾಗೂ ಮೂಲಸೌಕರ್ಯಗಳನ್ನು ನಿರ್ಮಿಸಿದ್ದನ್ನು ಮೋದಿ ನೇತೃತ್ವದ ಸರ್ಕಾರ ನಿರಂತರವಾಗಿ ನಿರಾಕರಿಸಿತ್ತು. ಈ ನಿರಾಕರಣೆ ಚೀನಾವನ್ನು ಹುರಿದುಂಬಿಸಿದೆ' ಎಂದು ಆರೋಪಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries