HEALTH TIPS

ಪ್ರಪಂಚದ ಮುಂದೆ ಭಾರತವನ್ನು ಗೌರವಿಸುವ ವರ್ತಮಾನ ಕೆಲವರಿಗೆ ಅರಗಿಸಲಾಗುತ್ತಿಲ್ಲ್ಲ!: ಸಾಕ್ಷ್ಯಚಿತ್ರ ತಯಾರಕರು ಬ್ರಿಟಿಷರ ಚಿತ್ರಹಿಂಸೆಗಳ ಸರಣಿಯನ್ನು ಏಕೆ ಪ್ರಸಾರ ಮಾಡುತ್ತಿಲ್ಲ: ಆರಿಫ್ ಮೊಹಮ್ಮದ್ ಖಾನ್


         ತಿರುವನಂತಪುರಂ: ಗೋಧ್ರಾ ನಂತರದ ದಂಗೆಯ ಸಾಕ್ಷ್ಯಚಿತ್ರವನ್ನು ನಿರ್ಮಿಸಿದವರು ಬ್ರಿಟಿಷರ ಕಿರುಕುಳ, ದೂಂಡಾವರ್ತನೆಯ  ಕುರಿತು ಸರಣಿಯನ್ನು ಏಕೆ ನಿರ್ಮಿಸಲಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ.
            ಭಾರತವು ಎಲ್ಲವನ್ನೂ ಉತ್ತಮವಾಗಿ ನಿರ್ವಹಿಸುತ್ತಿರುವುದರಿಂದ ವಿದೇಶಿ ಸಾಕ್ಷ್ಯಚಿತ್ರ ತಯಾರಕರು ನಿರಾಶೆಗೊಂಡಿದ್ದಾರೆ ಎಂದು ರಾಜ್ಯಪಾಲರು ಹೇಳಿದರು.
            ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಡೀ ಜಗತ್ತು ನೋಡುತ್ತಿದೆ. ಇದು ಅನೇಕ ಜನರಿಗೆ ಸ್ವೀಕಾರಾರ್ಹವಲ್ಲ. ಈ ಜನ ಬ್ರಿಟಿಷರ ಚಿತ್ರಹಿಂಸೆಗಳ ಕುರಿತು ಸಾಕ್ಷ್ಯಚಿತ್ರ ಸಿದ್ಧಪಡಿಸುತ್ತಿಲ್ಲ. ಏಕೆಂದರೆ ಅವರು ನಮ್ಮ ನ್ಯಾಯಾಲಯದ ತೀರ್ಪಿಗಿಂತ ಸಾಕ್ಷ್ಯಚಿತ್ರವನ್ನು ನಂಬುತ್ತಾರೆ ಎಂದು ಆರಿಫ್ ಮೊಹಮ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
          ಬಿಬಿಸಿ ಬಿಡುಗಡೆ ಮಾಡಿರುವ ದೇಶವಿರೋಧಿ ಸಾಕ್ಷ್ಯಚಿತ್ರದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ರಾಜ್ಯಪಾಲರ ಪ್ರತಿಕ್ರಿಯೆ ನೀಡಿದರು. ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಲು ಭಾರತ ಸಜ್ಜಾಗಿದೆ. ಈ ಸಾಕ್ಷ್ಯಚಿತ್ರವನ್ನು ನಿಖರವಾಗಿ ಅದೇ ಸಮಯದಲ್ಲಿ ಏಕೆ ಬಿಡುಗಡೆ ಮಾಡಲಾಯಿತು? ಎಮದು ರಾಜ್ಯಪಾಲರು ಪ್ರಶ್ನಿಸಿದರು.
      ತಿರುವನಂತಪುರಂನಲ್ಲಿ ಮಾಧ್ಯಮದವರನ್ನು ಭೇಟಿಯಾದ ಸಂದರ್ಭದಲ್ಲಿ ರಾಜ್ಯಪಾಲರು ಈ ಪ್ರತಿಕ್ರಿಯೆ ನೀಡಿದರು. ಭಾರತಕ್ಕೆ ಅರ್ಹತೆ ಇಲ್ಲ ಎಂದು ಹೇಳುವವರಿಂದಲೇ ಸಾಕ್ಷ್ಯಚಿತ್ರ ಹೊರಬಿದ್ದಿರುವುದು ಗಮನಾರ್ಹ, ಸ್ವಾತಂತ್ರ್ಯ ಬಂದಾಗ ಭಾರತಕ್ಕೆ ಪ್ರಜಾಪ್ರಭುತ್ವ ರಾಷ್ಟ್ರವಾಗುವ ಸಾಮಥ್ರ್ಯ ಇರಲಿಲ್ಲ ಎಂಬುದನ್ನು ಬಿಟನ್ ಅಥವಾ ಬಿಬಿಸಿ ಹೇಳಿದ್ದನ್ನು ಮರೆಯಬಾರದೆಂದು ನೆನಪಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries