ಕಾಸರಗೋಡು: ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಗಣರಾಜ್ಯೋತ್ಸವದ ಶುಭಾಶಯ ಪತ್ರ ಹಿಂದುತ್ವ ಶಕ್ತಿ ಮುಖಂಡ ವಿ.ಡಿ.ಸಾವರ್ಕರ್ ಚಿತ್ರ ಪ್ರಕಟಗೊಂಡಿರುವುದು ವಿವಾದಕ್ಕೀಡಾಗಿದೆ. ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಅವರ ಫೇಸ್ ಬುಕ್ ಪೇಜ್ ನಲ್ಲಿ ವಿ.ಡಿ. ಸಾವರ್ಕರ್ ಅವರ ಚಿತ್ರವನ್ನು ಹಾಕಲಾಗಿತ್ತು. ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತುಂಬಿದ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಸಂಘಪರಿವಾರದ ರಾಜಕೀಯದ ನೆಚ್ಚಿನ ನಾಯಕ ವಿ.ಡಿ.ಸಾವರ್ಕರ್ ಅವರ ಫೆÇೀಟೋ ಸೇರಿಸಿ ಕಾಂಗ್ರೆಸ್ ಶಾಕ್ ನೀಡಿದೆ.
ದೇಶ ಸದಾ ನೆನಪಿಸಿಕೊಳ್ಳುವ ಡಾ. ಬಿಆರ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್ ಮತ್ತು ಭಗತ್ ಸಿಂಗ್ ಅವರ ಚಿತ್ರಗಳ ನಡುವೆ ಸಾವರ್ಕರ್ ಅವರ ಚಿತ್ರವಿರುವ ಕಾರ್ಡ್ ಅನ್ನು ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಪೋಸ್ಟ್ ಭಾರೀ ಟೀಕೆಗೆ ಗುರಿಯಾದ ಬಳಿಕ, ನಾಯಕತ್ವವು ಗಣರಾಜ್ಯೋತ್ಸವದ ಶುಭಾಶಯ ಪತ್ರವನ್ನು ಹಿಂತೆಗೆದುಕೊಂಡಿತು. ಪೋಸ್ಟರ್ ವಿನ್ಯಾಸದಲ್ಲಿ ತಪ್ಪಾಗಿದೆ ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ವಿವರಿಸಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪ್ರಚಾರಕ್ಕಾಗಿ ಅತಣಿಯಲ್ಲಿ ಈಹಿಂದೆ ಹಾಕಲಾಗಿದ್ದ ಜಾಹೀರಾತು ಫಲಕದಲ್ಲಿ ಸಾವರ್ಕರ್ ಅವರ ಚಿತ್ರವನ್ನು ಬಳಸಲಾಗಿತ್ತು. ಸ್ವಾತಂತ್ರ್ಯ ಹೋರಾಟದ ನಾಯಕರ ಚಿತ್ರಗಳೊಂದಿಗೆ ಸಾವರ್ಕರ್ ಅವರ ಚಿತ್ರ ಕಾಣಿಸಿಕೊಂಡಿತ್ತು. ವಿವಾದದ ನಂತರ, ಈ ಚಿತ್ರದ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಬಳಸಲಾಯಿತು. ಘಟನೆಯಲ್ಲಿ ಐಎನ್‍ಟಿಯುಸಿ ಚೆಂಗಮನಾಡು ಕ್ಷೇತ್ರದ ಅಧ್ಯಕ್ಷ ಸುರೇಶ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಹಿಂದಿನಿಂದಲೇ ವಿ.ಡಿ.ಸಾವರ್ಕರ್ ಮತ್ತು ಕಾಂಗ್ರೆಸ್ಸ್ ಗೆ ಬದ್ದ ವೈರ ವ್ಯಾಪಕವಾಗಿದ್ದು ಮುಂದುವರಿದುಬಂದಿದೆ. ರಾಷ್ಟ್ರಪಿತ ಮಹಾತ್ಮಜಿಯವರ ಹತ್ಯೆಗೆ ಕಾರಣರಾದವರಲ್ಲಿ ಸಾವರ್ಕರ್ ಅವರೂ ಇದ್ದರೆಮದು ಕಾಂಗ್ರೆಸ್ಸ್ ಈಗಲೂ ಹೇಳುತ್ತಿದೆ. ಹಿಂದುತ್ವ ಸಿದ್ಧಾಂತದ ಪ್ರತಿಪಾದಕರನ್ನು ಗುರುತಿಸಲಾಗದ ಕಾಂಗ್ರೆಸ್ ನಾಯಕತ್ವದ ಅಪಾಯಕಾರಿ ನಡೆ, ಪಕ್ಷದೊಳಗೆ ಮತ್ತು ಹೊರಗೆ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತಿದೆ.
ಕಾಂಗ್ರೆಸ್ ಸಮಿತಿಯ ಗಣರಾಜ್ಯೋತ್ಸವದ ಪೋಸ್ಟರ್‍ನಲ್ಲಿ ಸಾವರ್ಕರ್ ಅವರ ಚಿತ್ರ: ವಿನ್ಯಾಸದ ವೇಳೆ ತಪ್ಪಾಗಿದೆ ಎಂದು ಡಿಸಿಸಿ ಅಧ್ಯಕ್ಷ ಪಿಕೆ ಫೈಸಲ್ ಪ್ರತಿಕ್ರಿಯೆ
0
ಜನವರಿ 27, 2023




.webp)
