HEALTH TIPS

ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಸೈಬೀರಿಯನ್ ಹಸ್ಕಿ ನಾಯಿಯನ್ನು ಛೂಬಿಟ್ಟ ಆರೋಪಿ: ಕಾಕ್ಕನಾಡಿನ ಡ್ರಗ್ ಡೀಲರ್ ಕೊನೆಗೂ ಬಲೆಗೆ


           ಕೊಚ್ಚಿ; ಕಾಕನಾಡಿನಲ್ಲಿ ಮಾದಕ ವಸ್ತು ಪರೀಕ್ಷೆಗೆ ಆಗಮಿಸಿದ್ದ ಅಬಕಾರಿ ಅಧಿಕಾರಿಗಳ ಮೇಲೆ ನಾಯಿ ಬಿಟ್ಟು ದಾಳಿ ನಡೆಸಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ.
          ಡ್ರಗ್ಸ್ ಡೀಲರ್ ಆಗಿರುವ ಕಾಕ್ಕನಾಡು ನಿಲಂಪಾಂಡಿ ಮೂಲದ ಲಿಯಾನ್ ರೇಗಿ (23) ಬಂಧಿತ ಆರೋಪಿ. ವಿಶೇಷ ತರಬೇತಿ ಪಡೆದ ಸೈಬೀರಿಯನ್ ಹಸ್ಕಿ ನಾಯಿಯನ್ನು ಬಳಸಿಕೊಂಡು ಆತ ಅಧಿಕಾರಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ.
             ಸಿಟಿ ಮೆಟ್ರೋ ಶಾಡೋ ಮತ್ತು ಇಂಟೆಲಿಜೆನ್ಸ್ ಆರೋಪಿಯು ತಂಗಿದ್ದ ತುತಿಯೂರು ಸೇಂಟ್ ಜಾರ್ಜ್ ಚಾಪೆಲ್ ರಸ್ತೆಯಲ್ಲಿರುವ ಮನೆಯ ಕೊಠಡಿಗೆ ತಲುಪಿದಾಗ  ನಾಯಿಯನ್ನು ಬಿಡಲಾಯಿತು. ಸಾಕಷ್ಟು ಶ್ರಮದ ಬಳಿಕ ನಾಯಿಯನ್ನು ಬೇರೆ ಕೋಣೆಗೆ ಸ್ಥಳಾಂತರಿಸಿ ಆರೋಪಿಯನ್ನು ಬಗ್ಗುಬಡಿಯಲಾಯಿತು. ಸೆರೆಹಿಡಿಯುವಾಗಲೂ ಆರೋಪಿ ಡ್ರಗ್ಸ್ ಬಳಸಿದ್ದ. ಈ ವೇಳೆ ಆರೋಪಿ ಕಿರುಚುತ್ತಿದ್ದ ಮತ್ತು ಹಿಂಸಾತ್ಮಕ ವರ್ತನೆಯನ್ನು ತೋರಿಸಿದ್ದ.
           ಬಂಧಿತನಾಗಿರುವ ಲಿಯಾನ್ ರೇಗಿ ಕಾಕನಾಡ್ ತುತಿಯೂರು ಮೂಲದ ಡ್ರಗ್ಸ್ ದಂಧೆ ತಂಡದ ನಾಯಕ. ಐಟಿ ಅಧಿಕಾರಿ ಎಂಬ ನೆಪದಲ್ಲಿ ಕಪೇಲಾ ರಸ್ತೆಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ಮನೆಯಿಂದ ಹೆಚ್ಚು ಹೊರಗೆ ಬರುತ್ತಿರಲಿಲ್ಲ. ಈ ನಡುವೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾದ ಬೇರೊಬ್ಬ ಯುವಕನಿಂದ ರೇಗಿ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ಸಿಕ್ಕಿತು.
            ತನಗೆ ಡ್ರಗ್ಸ್ ನೀಡಿದ್ದು ರೇಗಿ ಎಂದು ಯುವಕ ಬಹಿರಂಗಪಡಿಸಿದ್ದ. ಈ ಮಾಹಿತಿಯ ಆಧಾರದ ಮೇಲೆ ಆರೋಪಿಯು ಕಳೆದ ಕೆಲವು ದಿನಗಳಿಂದ ಎರ್ನಾಕುಳಂ ಅಬಕಾರಿ ವಿಶೇಷ ದಳದ ನಿಗಾದಲ್ಲಿದ್ದ. ಬಳಿಕ ಆತನ ಬಾಡಿಗೆ ಮನೆಗೆ ತೆರಳಿದ ಅಬಕಾರಿ ತಂಡ ಪರಿಶೀಲನೆ ನಡೆಸಿತು. ಆರೋಪಿಯಿಂದ ಐದು ಗ್ರಾಂ ಎಂಡಿಎಂಎ ಮತ್ತು ಮೂರು ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

            ತನಿಖೆ ವೇಳೆಯೂ ಆರೋಪಿ ಡ್ರಗ್ಸ್ ಸೇವಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಬಂದಾಗ ಕೋಣೆಯೊಳಗಿದ್ದ ಸಾಕು ನಾಯಿಯನ್ನು ಅಧಿಕಾರಿಗಳ ಮೇಲೆ ಛೂ ಬಿಡಲಾಯಿತು. ಅನಿರೀಕ್ಷಿತ ನಡೆಯಿಂದ ಮೊದಲು ತಡಬಡಾಯಿಸಿದ ಅಧಿಕಾರಿಗಳು ನಂತರ ನಾಯಿಯನ್ನು ನಿಯಂತ್ರಣಕ್ಕೆ ತಂದರು. ಅದನ್ನು ಮತ್ತೊಂದು ಕೋಣೆಗೆ ವರ್ಗಾಯಿಸಿದ ನಂತರ ಬಂಧಿಸಲಾಯಿತು. ಕುಡಿತದ ಪ್ರಕರಣವಲ್ಲದೆ ಅಧಿಕಾರಿಗಳ ಮೇಲೆ ನಾಯಿಯಿಂದ ಹಲ್ಲೆಗೆ ಯತ್ನಿಸಿದ ಆರೋಪದ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
           ಇನ್ಫೋ ಪಾರ್ಕ್ ನಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ರೇಗಿ ಮನೆಯಲ್ಲಿ ವಹಿವಾಟು ನಡೆಸುತ್ತಿದ್ದ. ಆನ್ ಲೈನ್ ನಲ್ಲಿ ಹಣ ಪಾವತಿಸಿದರೆ ಮನೆಗೆ ಕರೆಸಿ ಮಾದಕವಸ್ತು ದಾಟಿಸುವುದು ಈತನ ವಿಧಾನ. ಇದಕ್ಕಾಗಿ, ಮನೆ ಇರುವ ಸ್ಥಳದ ವಿವರಗಳನ್ನು ಪಾವತಿಸುವವರಿಗೆ ಕಳುಹಿಸಲಾಗುತ್ತದೆ. ನಂತರ ನೇರವಾಗಿ ಮನೆಗೆ ತೆರಳಿ ಡ್ರಗ್ಸ್  ಖರೀದಿಸುತ್ತಾರೆ.
             ಪ್ರತಿ ಗ್ರಾಂಗೆ 2500 ರೂ.ಗೆ ಖರೀದಿಸಿದ ಡ್ರಗ್ಸ್ ನ್ನು 4000 ದಿಂದ 6000 ರೂ.ತನಕ ಮಾರಾಟ ಮಾಡುತ್ತಿದ್ದ. ಈತನಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದವರ ಬಗ್ಗೆಯೂ ಅಬಕಾರಿ ಇಲಾಖೆಗೆ ಮಾಹಿತಿ ಸಿಕ್ಕಿದೆ. ಈತನ ಬಂಧನದಿಂದ ಕಾಕ್ಕನಾಡಿನಲ್ಲಿ ಮಾದಕ ವ್ಯಸನದ ಇತರ ಪ್ರಕರಣಗಳ ಸುಳಿವು ಸಿಗಲಿದೆ ಎಂದು ಅಬಕಾರಿ ಇಲಾಖೆ ಭಾವಿಸಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries