ಕಾಸರಗೋಡು: ಕುಂಡಂಗುಳಿಯಲ್ಲಿ ಗ್ಲೋಬಲ್ ಬಿಸಿನೆಸ್ ಗ್ರೂಪ್ ಎಂಬ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದ ವ್ಯಕ್ತಿಕೇಂದ್ರಿತ ಹಣಕಾಸು ಸಂಸ್ಥೆಯೊಂದು ಠೇವಣಿದಾರರಿಂದ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಸಂಸ್ಥೆ ಮುನ್ನಡೆಸುತ್ತಿದ್ದ ಕುಂಡಂಗುಳಿ ನಿವಾಸಿ ವಿನೋದ್‍ಕುಮಾರ್ ಎಂಬಾತನ ವಿರುದ್ಧ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆಕರ್ಷಕ ಬಡ್ಡಿ ನೀಡುವ ಭರವಸೆಯೊಂದಿಗೆ ವಿನೋದ್ ಕುಮಾರ್ ಹಲವರಿಗೆ ಕೋಟ್ಯಂತರ ರೂ. ವಂಚಿಸಿದ್ದು, ಈತನ ವಿರುದ್ಧ ಹದಿನೇಳು ಕೇಸು ದಾಖಲಾಗಿದೆ. ವಂಚನೆಗೀಡಾದವರಲ್ಲಿ 24ಮಂದಿ ಮಹಿಳೆಯರೂ ಒಳಗೊಂಡಿದ್ದಾರೆ. ವಿನೋದ್‍ಕುಮಾರ್ ತಲೆಮರೆಸಿಕೊಂಡಿದ್ದು, ಈತನಿಗಾಗಿ ಹುಡುಕಾಟ ನಡೆಯುತ್ತಿದೆ.
ಗ್ಲೋಬಲ್ ಬಿಸಿನೆಸ್ ಗ್ರೂಪ್ ಹೆಸರಲ್ಲಿ ಹಲವರಿಗೆ ವಂಚನೆ-ಕೇಸು
0
ಜನವರಿ 12, 2023




