ಕುಂಬಳೆ: ಶಾಂತಿಪಳ್ಳ ಸಮೀಪದ ಶೇಡಿಗುಮ್ಮೆ ಶ್ರೀಶಂಕರನಾರಾಯಣ ಮಠದ ಪ್ರವೇಶೋತ್ಸವ ವೇ.ಮೂ ಶ್ರೀ ಕೋಣಮ್ಮೆ ಮಹಾದೇವ ಭಟ್ಟರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ವಾಸ್ತು ಪೂಜೆ, ವಾಸ್ತುಹೋಮದೊಂದಿಗೆ ಆರಂಭಗೊಂಡು ಇಂದು(ಜ.4) ಗಣಪತಿ ಹವನ, ಪ್ರವೇಶೋತ್ಸವ, ದುರ್ಗಾ ಪೂಜೆ ಹಾಗೂ ವಿವಿಧ ವೈದಿಕ ಕಾರ್ಯಗಳೊಂದಿಗೆ ಜರಗಲಿದೆ.
ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ 12.30 ಕ್ಕೆ ಅನ್ನ ಸಂತರ್ಪಣೆ ಪ್ರಸಾದ ಭೋಜನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.
ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಬಳಿಕ ಆರಾಟು ಉತ್ಸವಕ್ಕೆ ಶ್ರೀದೇವರು ಶೇಡಿಗುಮ್ಮೆಗೆ ಆಗಮಿಸುವಾಗ ಈ ಮಠದಲ್ಲಿ ದೇವಸ್ಥಾನದ ವತಿಯಿಂದ ಗಣಪತಿ ಹವನ, ಪೂಜೆ, ನೈವೇದ್ಯಗಳು ನಡೆಯುವುದು ವಾಡಿಕೆ.
ಶೇಡಿಗುಮ್ಮೆ ಮಠದ ಪ್ರವೇಶೋತ್ಸವ ಇಂದು
0
ಜನವರಿ 03, 2023
Tags




.jpg)
