HEALTH TIPS

ಉತ್ತರ ಅಮೆರಿಕದ ಕೇರಳ ಹಿಂದೂಗಳ ಹಿಂದೂ ಸಮಾವೇಶ ನಾಳೆ: ಆರಿಫ್ ಮೊಹಮ್ಮದ್ ಖಾನ್ ಉದ್ಘಾಟನೆ


              ತಿರುವನಂತಪುರಂ: ಉತ್ತರ ಅಮೆರಿಕದ ಕೇರಳ ಹಿಂದೂಗಳ ಹಿಂದೂ ಕಾನ್ಕ್ಲೇವ್ ನಾಳೆ(ಜನವರಿ 28) ತಿರುವನಂತಪುರಂನ ಮ್ಯಾಸ್ಕಾಟ್ ಹೋಟೆಲ್‍ನಲ್ಲಿ ನಡೆಯಲಿದೆ.
          ಬೆಳಗ್ಗೆ 10 ಗಂಟೆಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಉದ್ಘಾಟಿಸುವರು. ಕೆಎಚ್‍ಎನ್‍ಎ ಅಧ್ಯಕ್ಷ ಜಿ.ಕೆ.ಪಿಳ್ಳೈ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಶ್ರೀಕುಮಾರನ್ ತಂಬಿ ಅವರಿಗೆ ಆರ್ಷದರ್ಶನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಡೂರ್ ಗೋಪಾಲಕೃಷ್ಣನ್, ವಿ ಮಧುಸೂದನನ್ ನಾಯರ್, ಕೈದಪ್ರಂ ದಾಮೋದರನ್ ನಂಬೂದಿರಿ, ಬಿ ಮಾಧವನ್ ನಾಯರ್, ಡಾ ರಾಮದಾಸ್ ಪಿಳ್ಳೈ ಮತ್ತು ರಂಜಿತ್ ಪಿಳ್ಳೈ ಭಾಗವಹಿಸಲಿದ್ದಾರೆ.
            ಬೆಳಗ್ಗೆ 11 ಗಂಟೆಗೆ ವಿಶ್ವ ಹಿಂದೂ ಸಂಸತ್ತಿನ ನಾಯಕತ್ವ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಮಾಧವನ್ ಬಿ ನಾಯರ್ ವಹಿಸುವರು. ಆರ್ ರಾಮಚಂದ್ರನ್ ನಾಯರ್, ಐಎಎಸ್, ಪೆÇ್ರ ಎಂಜಿ ಶಶಿಭೂಷಣ್, ವಿಜಿ ತಂಬಿ, ಕೆಪಿ ಶಶಿಕಲಾ ಟೀಚರ್, ಬಿಎಸ್ ಬಿಜು, ಕೆ ಮಧು, ಎಂಎಸ್ ಭುವನಚಂದ್ರನ್, ಮನ್ನಾಡಿ ಹರಿ, ರಘುಚಂದ್ರನ್ ನಾಯರ್, ರಮೇಶ್ ಕೆವಿ, ರಂಜಿನ್ ರಾಜ್, ಎಸ್ ರಾಜಶೇಖರನ್ ನಾಯರ್, ಸಂದೀಪ್ ವಾಚಸ್ಪತಿ, ಸಂದೀಪ್ ವಾರಿಯರ್, ಶ್ರೀಜಿತ್ ಪಣಿಕ್ಕರ್ , ಬಿ.ಆರ್.ಅಜಿತ್, ಸುಬ್ರಮಣಿಯನ್ ಪೆರಿಂಗೋಡ್, ಸುರೇಶ್ ಕೊಚಾಟಿಲ್, ಯು.ಎಸ್.ಕೃಷ್ಣಕುಮಾರ್, ಉಣ್ಣಿಕೃಷ್ಣನ್ ಗೋಪಿನಾಥ, ವಿದ್ಯಾಸಾಗರ್ ಗುರುಮೂರ್ತಿ, ರಾಣಿ ಮೋಹನ್ ದಾಸ್, ಕಲಾಮಂಡಲಂ ರಾಜಗೋಪಾಲ್, ಆಚಾರ್ಯ ಮನೋಜ್, ಗಾಮಸ್ ಶ್ರೀಸ್ಕುಮಾರ್ ಮೊದಲಾದವರು ಉಪಸ್ಥಿತರಿರುವರು.ಮಹರ್ಷಿ ಶಾಂತಾನಂದ ಅವರು ಸಮಾರೋಪ ಉಪನ್ಯಾಸ ನೀಡಲಿದ್ದಾರೆ.
           ಮಧ್ಯಾಹ್ನ 2 ಗಂಟೆಗೆ ವೃತ್ತಿಪರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು. ಆಡಳಿತ ಮಂಡಳಿ ಅಧ್ಯಕ್ಷ ಡಾ.ರಾಮದಾಸ್ ಪಿಳ್ಳೈ ಅಧ್ಯಕ್ಷತೆ ವಹಿಸುವರು. ಜಿ ರಾಜ್ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೆಎಚ್‍ಎನ್‍ಎ ಮಾಜಿ ಅಧ್ಯಕ್ಷರಾದ ಅನಿಲಕುಮಾರ್ ಪಿಳ್ಳೈ, ವೆಂಕಿಟ್ ಶರ್ಮಾ, ಟಿಎನ್ ನಾಯರ್ ಮತ್ತು ಸುರೇಂದ್ರನ್ ನಾಯರ್ ಭಾಗವಹಿಸಲಿದ್ದಾರೆ.

           ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸಚಿವ ವಿ.ಮುರಳೀಧರನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು. ಅಮ್ಮಕೈನಿಟ್ಟಂ ಯೋಜನೆಯನ್ನು ಅಶ್ವತಿ ತಿರುನಾಳ್ ಗೌರಿ ಲಕ್ಷ್ಮೀ ಭಾಯಿ ಉದ್ಘಾಟಿಸಲಿದ್ದಾರೆ. ಸೂರ್ಯ ಕೃಷ್ಣಮೂರ್ತಿ ಹಾಗೂ ನಟಿ ಅನುಶ್ರೀ ಭಾಗವಹಿಸಲಿದ್ದಾರೆ.
         ಕೆಎಚ್‍ಎನ್‍ಎ ಅವರ ತಿರುವಾಭರಣಂ ಪ್ರಶಸ್ತಿ (ಕುಲಥರ್ ಗಂಗಾಧರನ್ ಪಿಳ್ಳೈ), ಶ್ರೀ ಕೃಷ್ಣ ಸೇವಾ ಪ್ರಶಸ್ತಿ (ಗುರುವಾಯೂರ್ ಕೃಷ್ಣನ್), ಗಜಪರ್ಮಣ ಪ್ರಶಸ್ತಿ (ಮಂಬಿ ಶರತ್), ಕ್ಷೇತ್ರ ಚೈತನ್ಯ ಪ್ರಶಸ್ತಿ (ಮನೆಯತತ್ ಚಂದ್ರಶೇಖರನ್ ನಂಬುದಿರಿ), ಶಾಸ್ತ್ರ ಪ್ರತಿಭಾ ಪ್ರಶಸ್ತಿ (ನಂಬಿ ನಾರಾಯಣನ್), ಅಶ್ವನಿ ದೇವ ತಂತ್ರಿ (ಅತಿರುದ್ರ ಪ್ರಶಸ್ತಿ) ಗಳನ್ನು ಕೇಂದ್ರ ಸಚಿವರು ವಿತರಿಸುವರು.
   ಚಲಚಿತ್ರ ಮಾಳಿಗÀಪ್ಪುರಂ ಚಿತ್ರದ ಹಿಂದೆ ಕೆಲಸ ಮಾಡಿದ ಉಣ್ಣಿ ಮುಕುಂದನ್, ಅಭಿಲಾμï ಪಿಳ್ಳೈ, ವಿಷ್ಣು ಶಶಿಶಂಕರ್, ರಂಜಿನ್ ರಾಜ್, ದೇವ ನಂದನ ಮತ್ತು ಶ್ರೀಪತ್ ಯಾನ್ ಅವರನ್ನು ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆಗಳಾದ ಪರಮೇಶ್ವರನ್ ವಾಸುದೇವನ್ ಭಟ್ಟತಿರಿಪಾಡ್-ದೇವಸ್ಥಾನದ ತಂತ್ರಿ, ಡಾ. ಎಸ್.ಮಹೇಶ್ ಗುರುಗಳು -ಕಳರಿ, ಕಲಾಮಂಡಲಂ ಸಂಗೀತ-ನಂಗ್ಯಾರ್ಕೂತ್, ಜಿಷ್ಣು ಪ್ರತಾಪ್-ಕೂಯಾಟ್ಟಂ, ಎರಿಕಾ ಎನ್. ಸುನೀಲ್ - ಮೃದಂಗಂ, ಯದು ವಿಜಯಕೃಷ್ಣನ್ - ಸಂಸ್ಕøತಿ ಸಿನಿಮಾ, ಕಲ್ಲಟ್ ಮಣಿಕಂಠ ಕುರುಪ್ - ಕಲಮೇಜುತ್ ಪಥ, ಬಿ.ಎಸ್.ಬಿಜು - ಮ್ಯೂರಲ್ ಪೇಂಟಿಂಗ್, ಅಖಿಲ್ ಕೊಟ್ಟಾಯಂ - ನಾದಸ್ವರಂ, ಮಣ್ಣೂರು ಚಂದ್ರನ್ - ಪೆÇೀರಟ್ ನಾಟಕ, ಹರಿಕುಮಾರ್ ತಾಮರಕುಡಿ - ಕಾಕರಿಸ್ಸಿ ನಾಟಕ, ತಾಮರಕುಡಿ ರಾಜಶೇಖರನ್ - ಮುಖೇರಸಂಗ್ರಹಣ ಅವರನ್ನೂ ಗೌರವಿಸಲಾಗುವುದು.
           ಡಾ.ರಾಮದಾಸ್ ಪಿಳ್ಳೈ, ಮಾಧವನ್ ನಾಯರ್, ರಂಜಿತ್ ಪಿಳ್ಳೈ, ಅನಿಲ್ ಆರನ್ಮುಲ, ದಿಲೀಪ್ ಶಶಿಧರ ಗುರುಕಲ್, ಸಂಜೀವ್ ಷಣ್ಮುಖನ್, ಪೆÇಡಿಯಮ್ಮ ಪಿಳ್ಳೈ, ಶಶಿ ಪಿಳ್ಳೈ ಮತ್ತು ಹರಿ ನಂಬೂದಿರಿ ನೇತೃತ್ವದಲ್ಲಿ, ಅಧ್ಯಕ್ಷ ಜಿ.ಕೆ.ಪಿಳ್ಳೆ ಮೊದಲಾದವರು ನೇತೃತ್ವ ವಹಿಸುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries