ಬದಿಯಡ್ಕ: ನಿವೃತ್ತ ಉಪನೊಂದಾವಣಾಧಿಕಾರಿ ಮಾನ್ಯ ವೆಂಕಪ್ಪ ನಾಯ್ಕ (67) ಮಂಗಳವಾರ ಸಂಜೆ ನಿಧನರಾದರು. ಅಸೌಖ್ಯದ ನಿಮಿತ್ತ ಅವರನ್ನು ಮಂಗಳೂರು ಹಾಗೂ ಕಲ್ಲಿಕೋಟೆಯ ಮೆಡಿಕಲ್ ಕಾಲೇಜಿನಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದರು.
ಕಂದಾಯ ಇಲಾಖೆಯಲ್ಲಿ ಬದಿಯಡ್ಕ ಸಹಿತ ವಿವಿಧ ಕಡೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭ ಜೈಲುವಾಸವನ್ನೂ ಅನುಭವಿಸಿದ್ದ ಅವರು ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರದ ಸ್ಥಾಪಕ ಸದಸ್ಯರೂ, ಮಾಜಿ ಅಧ್ಯಕ್ಷರೂ ಆಗಿದ್ದ ಅವರು ಪ್ರಸ್ತುತ ಮಂದಿರದ ಗೌರವ ಸಲಹೆಗಾರರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.
ನಿಧನಕ್ಕೆ ಶ್ರೀ ಅಯ್ಯಪ್ಪ ಸೇವಾಸಂಘ ಚುಕ್ಕಿನಡ್ಕ, ಶಬರಿ ಮಾತೃಮಂಡಳಿ, ಭಾರತೀಯ ಜನತಾಪಕ್ಷ ಬದಿಯಡ್ಕ ಪಶ್ಚಿಮ ಸಮಿತಿ ಸಹಿತ ವಿವಿಧ ಸಂಘಸಂಸ್ಥೆಗಳು ಸಂತಾಪ ಸೂಚಿಸಿದೆ.
ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಮುಖಂಡರಾದ ಸುಧಾಮ ಗೋಸಾಡ, ಹರೀಶ ನಾರಂಪಾಡಿ, ಕಾಸರಗೋಡು ಬ್ಲಾಕ್ ಪಂಚಾಯತ್ ಜನಪ್ರತಿನಿಧಿ ಅಶ್ವಿನಿ ಮೊಳೆಯಾರು, ಬದಿಯಡ್ಕ ಪಂಚಾಯತು ಜನಪ್ರತಿನಿಧಿ ಶಾಂಪ್ರಸಾದ್ ಮಾನ್ಯ, ಚುಕ್ಕಿನಡ್ಕ ಮಂದಿರದ ಕುಂಞಕಣ್ಣ ಗುರುಸ್ವಾಮಿ, ಸುನಿಲ್ ಪಿ ಆರ್, ಮಹೇಶ್ ವಳಕುಂಜ ಸಹಿತ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ನಿವೃತ್ತ ಉಪನೊಂದಾವಣಾಕಾರಿ ಮಾನ್ಯ ವೆಂಕಪ್ಪ ನಾಯ್ಕ ನಿಧನ
0
ಜನವರಿ 25, 2023
Tags


