ಕುಂಬಳೆ : "ಪೆರಡಾನಮೂಲೆದ ಸತ್ಯ ಸ್ವಾಮಿ ಕೊರಗಜ್ಜ" ಮತ್ತು "ತುಳುನಾಡ ತುಡರ್ ಶ್ರೀ ಕೊರಗಜ್ಜ" ತುಳು ಭಕ್ತಗೀತೆಗಳ ವೀಡಿಯೋ ಆಲ್ಬಂ ನ ಚಿತ್ರೀಕರಣ ಕುದ್ರೆಪ್ಪಾಡಿ ಬಳಿಯ ಪೆರಡಾನ ಮೂಲೆ ಶ್ರೀ ಗುಳಿಗಜ್ಜ, ಶ್ರೀ ಕಲ್ಲುರ್ಟಿ, ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ನಡೆಯಿತು.
ಹಿರಿಯ ಗಾಯಕ, ಗಡಿನಾಡ ಕೋಗಿಲೆ ವಸಂತ ಬಾರಡ್ಕ ನಿರ್ದೇಶನದಲ್ಲಿ, ನಿಥಿನ್ ಕುಂಬಳೆ ಅವರ ಛಾಯಾಗ್ರಹಣದಲ್ಲಿ, ಬಾಲು ಭಟ್ ಮವ್ವಾರು ಅವರ ಸಹಕಾರದೊಂದಿಗೆ ಚಿತ್ರೀಕರಣ ನಡೆಯಿತು. ಪತ್ರಕರ್ತ ವೀಜಿ. ಕಾಸರಗೋಡು, ಗಾಯಕಿ ಎಲ್ವಿμÁ ಉಪ್ಪಳ, ಸುಳ್ಯ ಐವರ್ನಾಡು ಪೆರುಮಾಳ್ ಲಕ್ಷ್ಮಣ್, ರೇಶ್ಮಾ ಪ್ರದೀಪ್ ಆಚಾರ್ಯ ಬದಿಯಡ್ಕ, ಪುಟಾಣಿ ವೈಗಾ ಎಸ್. ನಾಯರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೃತ್ಯದಲ್ಲಿ ಅಂಜಲಿ ವಸಂತ ಬಾರಡ್ಕ, ಆಂದ್ರಿತಾ, ಮಾನಸ, ಮೇಘಶ್ರೀ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕುಮಾರ್ ನೃತ್ಯ ನಿರ್ದೇಶಕರಾಗಿದ್ದಾರೆ.
ಚಿತ್ರೀಕರಣಕ್ಕೆ ಕ್ಯಾಮೆರಾ ಸ್ವಿಚ್ ಆನ್ ನಡೆಸುವ ಮೂಲಕ ಹಿರಿಯ ಸಾಮಾಜಿಕ ಕಾರ್ಯಕರ್ತ ಚಂದ್ರಹಾಸ ಮಾಸ್ತರ್ ಚಾಲನೆ ನೀಡಿದರು. ಪಾತ್ರಿ ಸೀತಾರಾಮ ಅವರು ಶುಭ ಸಂದೇಶ ನೀಡಿದರು. ವಸಂತ ಬಾರಡ್ಕ, ವೀಜಿ. ಕಾಸರಗೋಡು, ಐವರ್ನಾಡು ಪೆರುಮಾಳ್ ಲಕ್ಷ್ಮಣ್, ಸಂತೋಷ್ ಬದಿಯಡ್ಕ, ಸವಿತಾ ಸಂತೋμï, ವೈಗಾ ಎಸ್.ನಾಯರ್, ರೇಶ್ಮಾ ಪ್ರದೀಪ್ ಆಚಾರ್ಯ ಬದಿಯಡ್ಕ, ಎಲ್ವಿμÁ ಉಪ್ಪಳ, ಕೃಷ್ಣ ಕುಮಾರ್, ಅಂಜಲಿ ಬದಿಯಡ್ಕ, ಆಂದ್ರಿತಾ, ಮಾನಸ, ಮೇಘಶ್ರೀ ಮೊದಲಾದವರು ಇದ್ದರು.
ಪೆರಡಾನಮೂಲೆಯಲ್ಲಿ ಭಕ್ತಿಗೀತೆ ವೀಡಿಯೋ ಆಲ್ಬಂ ಚಿತ್ರೀಕರಣ
0
ಜನವರಿ 25, 2023
Tags

.jpg)
