HEALTH TIPS

ಗರಗಸ ಬಳಸಿ ಶ್ರದ್ಧಾ ದೇಹ ತುಂಡರಿಸಿದ್ದ ಆಫ್ತಾಬ್: ಮೂಳೆ ಪರೀಕ್ಷೆಯಲ್ಲಿ ಪತ್ತೆ

 

              ನವದೆಹಲಿ: ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್‌ ಅವರನ್ನು ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆದಿದ್ದ ಆರೋಪ ಎದುರಿಸುತ್ತಿರುವ ಆಫ್ತಾಬ್ ಅಮೀನ್ ಪೂನಾವಾಲಾ ಪ್ರಕರಣದ ತನಿಖೆ ಮುಂದುವರಿದಂತೆ ಆಘಾತಕಾರಿ ಸಂಗತಿಗಳು ಹೊರಬೀಳುತ್ತಿವೆ.

         ಶ್ರದ್ಧಾ ವಾಲಕರ್ ಅವರ ದೇಹವನ್ನು ಗರಗಸ ಬಳಸಿ ತುಂಡರಿಸಿರುವುದು ಮೂಳೆಗಳ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

                  ದೆಹಲಿಯ ವಿವಿಧೆಡೆ ಸಂಗ್ರಹಿಸಿದ್ದ ಶ್ರದ್ಧಾ ವಾಲಕರ್ ಅವರ 23 ಮೂಳೆಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಏಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಗರಗಸ ಬಳಸಿ ತುಂಡರಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

                  ಜನವರಿ ಕೊನೆಯ ವಾರದಲ್ಲಿ ಪ್ರಕರಣ ಕುರಿತಂತೆ ಪೊಲೀಸರು ದೆಹಲಿಯ ಸಾಕೆತ್ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.

               ಶ್ರದ್ಧಾ ವಾಲಕರ್ ತಂದೆಯ ಡಿಎನ್‌ಎ ಜೊತೆ ದಕ್ಷಿಣ ದೆಹಲಿಯ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೂಳೆಗಳ ಡಿಎನ್‌ಎ ಹೊಂದಿಕೆಯಾದ ಹಿನ್ನೆಲೆಯಲ್ಲಿ ಆಟೊಪ್ಸಿ(ಮೂಳೆಗಳ ಪರೀಕ್ಷೆ) ನಡೆಸಲಾಯಿತು ಎಂದು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ.

                ಆರೋಪಿ ಆಫ್ತಾಬ್‌ನ ಪಾಲಿಗ್ರಾಫ್ ಮತ್ತು ನಾರ್ಕೊ ಪರೀಕ್ಷೆಯ ವರದಿಯನ್ನು ದೆಹಲಿ ಪೊಲೀಸರು ಪಡೆದುಕೊಂಡಿದ್ದಾರೆ.

             ಮೇ 18, 2022ರಂದು ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದಿದ್ದ ಆಫ್ತಾಬ್, ಆಕೆಯ ಮೃತದೇಹಗಳನ್ನು 35 ತುಂಡಾಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮಹ್ರೌಲಿಯಲ್ಲಿರುವ ತಮ್ಮ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಬಳಿಕ ಅದನ್ನು ತೆಗೆದು, ದೆಹಲಿ ಮತ್ತು ಗುರುಗ್ರಾಮದ ಹಲವೆಡೆ ಎಸೆದು ಬಂದಿದ್ದ. ನವೆಂಬರ್ 12ರಂದು ಪೊಲೀಸರು ಆತನನ್ನು ಬಂಧಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries