HEALTH TIPS

ಮಗು ರಾತ್ರಿ ಎಚ್ಚರಗೊಂಡು ತುಂಬಾ ಅಳುವುದೇ? ಈ ಕಾರಣಗಳಿಂದಿರಬಹುದು

 ದೊಡ್ಡವರಿಗೆ 8 ಗಂಟೆ ನಿದ್ದೆ ಬೇಕಾದರೆ ಮಕ್ಕಳಿಗೆ 11-14 ತಾಸು ನಿದ್ದೆ ಬೆಳವಣಿಗೆಗೆ ಒಳ್ಳೆಯದು. ಹಾಗಂತ ಅವರು ಮಲಗಿದರೆ 11 ತಾಸು ಆದ ಮೇಲೆ ಎದ್ದೇಳುತ್ತಾರೆ ಅಂತಲ್ಲ, ಮಕ್ಕಳಿಗೆ ಎರಡು ವರ್ಷ ತುಂಬುವವರೆಗೆ ಸ್ವಲ್ಪ ಹೊತ್ತು ಮಲಗುವುದು, ಮತ್ತೆ ಎದ್ದು 2-3 ಗಂಟೆ ಆಡುವುದು ಮತ್ತೆ ಮಲಗುವುದು ಮಾಡುತ್ತಾರೆ.

ಹುಟ್ಟಿದಾಗ ಕೆಲ ಮಕ್ಕಳು ರಾತ್ರಿಯಿಡೀ ಎಚ್ಚರವಾಗಿದ್ದು ಹಗಲು ಮಲಗುತ್ತವೆ, ಬರ್ತಾ ಬರ್ತಾ ನಿಧಾನಕ್ಕೆ ಅವರು ರಾತ್ರಿ ಹೊತ್ತಿನಲ್ಲಿ ಮಲಗಲು ಪ್ರಾರಂಭಿಸುತ್ತಾರೆ. ಹಗಲು ತುಂಬಾ ಹೊತ್ತು ನಿದ್ದೆ ಮಾಡಿದರೆ ರಾತ್ರಿ ತಡವಾಗಿ ಮಲಗಬಹುದು, ಹಗಲು ಸ್ವಲ್ಪ ಹೊತ್ತು ಮಲಗಿದರೆ ರಾತ್ರಿ ಬೇಗ ಮಲಗಬಹುದು. ಒಮ್ಮೆ ರಾತ್ರಿ ಮಲಗುವ ಅಭ್ಯಾಸ ಪ್ರಾರಂಭವಾದ ಮೇಲೆ ರಾತ್ರಿ ಚೆನ್ನಾಗಿ ಮಲಗುತ್ತವೆ.

ಕೆಲವೊಮ್ಮೆ ಹಾಲು ಕುಡಿಯಲು ಅಥವಾ ನೀರು ಕುಡಿಯಲು ಎದ್ದೇಳಬಹುದು, ಆದರೆ ನಿಮ್ಮ ಮಗು ರಾತ್ರಿ ಬೆಚ್ಚಿಬಿದ್ದು ಎದ್ದೇಳುತ್ತಿದೆಯೇ? ಹಾಗಾದರೆ ಈ ಕಾರಣಗಳಿಂದಿರಬಹುದು:

ಈ ಸಂದರ್ಭಗಳಲ್ಲಿ

ಹಲ್ಲು ಬರುವ ಸಮಯದಲ್ಲಿ: ಹಲ್ಲು ಬರುವ ಸಮಯದಲ್ಲಿ ಮಕ್ಕಳಿಗೆ ತುಂಬಾ ಕಿರಿಕಿರಿ ಅನಿಸುವುದು, ಆಗ ರಾತ್ರಿಯೆಲ್ಲಾ ಅಳುವುದು ಮಾಡಬಹುದು. ಹಲ್ಲುಗಳು ಸಾಮಾನ್ಯವಾಗಿ 8-9 ತಿಂಗಳ ನಂತರ ಬರಲಾರಂಭಿಸುತ್ತದೆ. ಈ ರೀತಿಯಾದಾಗ ಮಕ್ಕಳು ತುಂಬಾ ಕಿರಿಕಿರಿ ಮಾಡುತ್ತಿದ್ದರೆ ಮಕ್ಕಳ ವೈದ್ಯರಿಗೆ ತೋರಿಸಿ.

ಕಾಯಿಯೆಯಾದಾಗ' ಕಿವಿನೋವು, ಉಸಿರಾಟಕ್ಕೆ ತೊಂದರೆ, ಗಂಟಲು ನೋವು, ಜ್ವರ ಈ ರೀತಿಯಿದ್ದರೆ ಮಕ್ಕಳು ಬೆಚ್ಚಿಬಿದ್ದು ಜೋರಾಗಿ ಅಳಲಾರಂಭಿಸುತ್ತದೆ. ಶೀತಕ್ಕೆ ಆಯಿಂಟ್‌ಮೆಂಟ್‌ ಇದ್ದರೆ ಸ್ವಲ್ಪ ರಿಲೀಫ್ ಸಿಗುತ್ತದೆ. ಕಿವಿ ನೋವು ಇದ್ದರೆ Acetaminophen ಅಥವಾ ibuprofen ಹಾಕಬಹುದು, ಅದಕ್ಕಿಂತ ಮೊದಲು ನಿಮ್ಮ ಮಕ್ಕಳ ತಜ್ಞರಿಗೆ ಕರೆ ಮಾಡಿ ಸಲಹೆ ಪಡೆದ ಬಳಿಕವಷ್ಟೇ ಹಾಕಿ.

ಮಗು ಬೆಚ್ಚಿ ಬೀಳುತ್ತಿದೆಯೇ

ಭಯ

ಮಕ್ಕಳಿಗೆ ಭಯ ಪಡಿಸುವ ಕತೆ ಹೇಳುವುದು ಅಥವಾ ಏನಾದರೂ ವಸ್ತುಗಳನ್ನು ತೋರಿಸಿ ಭಯಪಡಿಸಿ ತಿನಿಸುವುದು ಮಾಡಬೇಡಿ, ಹೀಗೆ ಮಾಡಿದರೆ ಮಕ್ಕಳ ಮನಸ್ಸಿನಲ್ಲಿ ಭಯ ಉಳಿದು ಬಿಡುತ್ತದೆ, ಇದರಿಂದ ಮಗು ನಿದ್ದೆಯಲ್ಲಿ ಬೆಚ್ಚಿಬಿದ್ದು ಅಳಬಹುದು.

ಸ್ವಪ್ನ

ಮಗುವಿಗೆ ಏನಾದೂ ಸ್ವಪ್ನ ಬಿದ್ದಾಗ ಕಿರುಚಿ ಅಳಬಹುದು. ಕೆಲವೊಂದು ಬದಲಾವಣೆಗಳು ಅಥವಾ ಜೋರು ಶಬ್ದ ಇವೆಲ್ಲಾ ಮಕ್ಕಳನ್ನು ಭಯಪಡಿಸುವುದು. ಈ ರೀತಿಯಾದಾಗ ಮಗು ರಾತ್ರಿಯಲ್ಲಿ ಅಳುವುದು ಅಥವಾ ಏನಾದರೂ ಕನಸು ಬಿದ್ದರೂ ಜೋರಾಗಿ ಅಳುವುದು.

ಬೇರೆಯಾಗುವ ಒತ್ತಡ

ಕೆಲವರು ಕೆಲಸದ ಕಾರಣದಿಂದ ಮಗುವನ್ನು ಮನೆಯವರ ಬಳಿ ಅಥವಾ ಕೇರ್ ಟೇಕರ್ ಬಳಿ ಬಿಟ್ಟು ಹೋಗುತ್ತಾರೆ. ಇದರಿಂದ ಮಗುವಿನ ಮೇಲೆ ಒತ್ತಡ ಉಂಟಾಗುವುದು, ಅಮ್ಮ ಬಿಟ್ಟು ಹೋಗುವ ಭಯ ಕಾಡುವುದು ಇದರಿಂದಾಗಿ ಕೂಡ ಭಯಬಿದ್ದು ಎಚ್ಚರವಾಗಿ ಅಳಲಾರಂಭಿಸುವುದು. ಇನ್ನು ತುಂಬಾ ಚಿಕ್ಕ ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡುವುದಾದರೆ ಅಂಥ ಮಕ್ಕಳಲ್ಲಿಯೂ ಈ ರೀತಿ ಕಂಡು ಬರುವುದು. ಒಂದು ವೇಳೆ ಮಗುವನ್ನು ಬಿಟ್ಟ ಕೆಲಸಕ್ಕೆ ಹೋಗುತ್ತಿದ್ದರೆ ನಿಮ್ಮ ಮಗು ಅವರ ಬಳಿ ಕಂಫರ್ಟ್ ಆಗಿದೆಯೇ, ಅವರನ್ನು ಭಯ ಪಡುತ್ತಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ ನಮ್ಮ ಮಗುವಿಗೆ ಸುರಕ್ಷಿತ ಅನಿಸುವ ವ್ಯಕ್ತಿ ಬಳಿ ಮಾತ್ರ ಬಿಡಬೇಕು. ಇಲ್ಲದಿದ್ದರೆ ಮಗುವಿನ ಮನಸ್ಸಿನ ಮೇಲೆ ಪ್ರಭಾವ ಬೀರುವುದು.

ಈ ರೀತಿಯಾದಾಗಲೂ ಅಳುವುದು

ಹಸಿವಿನಿಂದ

ನೀವು ಮಗುವನ್ನು ಬೇಗ ಮಲಗಿಸಿದರೆ ರಾತ್ರಿ ಹೊತ್ತು ಹಸಿವಿನಿಂದ ಅಳಬಹುದು. ಎದೆ ಹಾಲುಣಿಸುತ್ತಿದ್ದರೆ ತೊಂದರೆಯಿಲ್ಲ ಇಲ್ಲದಿದ್ದರೆ ಮಗುವಿಗೆ ಆರೋಗ್ಯಕರ ಆಹಾರ ನೀಡಿ, ಆಗ ಮಗು ಚೆನ್ನಾಗಿ ನಿದ್ದೆ ಮಾಡುತ್ತದೆ.

ನಿದ್ದೆ ಸಾಕಾಗದಿದ್ದಾಗ ಅಥವಾ ತುಂಬಾ ನಿದ್ದೆ ಮಾಡಿದಾಗ

ನಿದ್ದೆ ತುಂಬಾ ಕಡಿಮೆಯಾದಾಗ ಮಗು ರಾತ್ರಿ ಎಚ್ಚರವಾಗಿ ಅಳಲಾರಂಭಿಸುವುದು. ಇನ್ನು ಹಗಲು ಹೊತ್ತಿನಲ್ಲಿ ತುಂಬಾ ನಿದ್ದೆ ಮಾಡಿದಾಗ ರಾತ್ರಿ ಬೇಗನೆ ಎಚ್ಚರವಾಗಿ ಅಳಲಾರಂಭಿಸುವುದು.

ರಾತ್ರಿ ಮಗು ಚೆನ್ನಾಗಿ ನಿದ್ದೆ ಮಾಡಲು ಟಿಪ್ಸ್

* ಹಗಲು ಹೊತ್ತಿನಲ್ಲಿ ನಿದ್ದೆ ಅವಶ್ಯಕ, ಹಾಗಂತ ತುಂಬಾ ನಿದ್ದೆ ಮಾಡಿಸಬೇಡಿ

* ಮಲಗಿಸುವ ಮುನ್ನ ಮಗುವಿನ ಹೊಟ್ಟೆ ತುಂಬಿರಬೇಕು

* ಮಗುವಿಗೆ ಭಯ ಪಡುವ ಶಬ್ದ ಏನೂ ಕೇಳಬಾರದು

* ಮಗುವಿಗೆ ಕಂಫರ್ಟ್ ಆಗುವ ರೀತಿಯಲ್ಲಿ ಬೆಡ್‌ ವ್ಯವಸ್ಥೆ ಮಾಡಿ ಮಲಗಿಸಿ

* ಮೂತ್ರ ಮಾಡಿ ಒದ್ದೆಯಾಗದಂತೆ ಡಯಾಪರ್ ಬಳಸಿ.

* ಚಳಿಗಾಲದಲ್ಲಿ ಬೆಚ್ಚಗೆ ಮಲಗಿಸಿ


 

 

 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries