ಮುಳ್ಳೇರಿಯ: ಪೆರಿಯ ಆಲಕ್ಕೋಡಿನಲ್ಲಿರುವ ಗೋಕುಲಂ ಗೋಶಾಲೆಗೆ ಜಾರ್ಖಂಡ್ ನೀರಾವರಿ ಸಚಿವ ಮಿಥಿಲೇಶ್ ಕುಮಾರ್ ಠಾಕೂರ್, ಪತ್ನಿ ಚಂಚಲ್ ಠಾಕೂರ್, ಮಕ್ಕಳಾದ ಪ್ರತ್ಯಕ್ಷ ಠಾಕೂರ್ ಮತ್ತು ಪ್ರತ್ಯಾಶಾ ಠಾಕೂರ್ ಭೇಟಿ ನೀಡಿದರು. ಹೊಸವರ್ಷದ ಅಂಗವಾಗಿ ಗೋವುಗಳಿಗೆ ಬೆಲ್ಲ ಮತ್ತು ಹಣ್ಣುಗಳನ್ನು ನೀಡಿ ಸಂಭ್ರಮಿಸಿದರು.
ಗೋಶಾಲೆಯ ಡಾ. ನಾಗರತ್ನ ಹೆಬ್ಬಾರ್ ದೇಶಿ ಗೋವುಗಳ ಗುಣಗಳನ್ನು ವಿವರಿಸಿದರು. ಪಂಚಗವ್ಯ ಉತ್ಪನ್ನಗಳ ಬಗ್ಗೆ ತಿಳಿದುಕೊಂಡ ಅವರು ಉತ್ಪನ್ನಗಳನ್ನು ಖರೀದಿಸಿದರು. ಸಚಿವರು ಮಾತನಾಡಿ, ಗೋಶಾಲೆಯ ಮೆಚ್ಚುಗೆಯ ಮಾತುಗಳನ್ನಾಡಿ, ನಿರಂತರವಾಗಿ ನಡೆಯುತ್ತಿರುವ ಸಂಗೀತೋತ್ಸವಕ್ಕೆ ಮತ್ತೆ ಬರುವುದಾಗಿ ತಿಳಿಸಿದರು.
ಪೆರಿಯ ಗೋಕುಲಂ ಗೋಶಾಲೆಗೆ ಭೇಟಿ ನೀಡಿದ ಜಾರ್ಖಂಡ್ ನೀರಾವರಿ ಸಚಿವ
0
ಜನವರಿ 09, 2023




.jpg)
