HEALTH TIPS

ಭಾರತ- ಪಾಕ್‌: ಪರಮಾಣು ಸ್ಥಾವರ ಮಾಹಿತಿ ಹಂಚಿಕೆ

 

                    ನವದೆಹಲಿ : ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಮ್ಮಲ್ಲಿನ ಪರಮಾಣು ಸ್ಥಾವರಗಳ ಪಟ್ಟಿಯನ್ನು ಭಾನುವಾರ ಪರಸ್ಪರ ವಿನಿಮಯ ಮಾಡಿಕೊಂಡವು.

              ಉಭಯ ದೇಶಗಳು ಪರಸ್ಪರರ ಪರಮಾಣ ಸ್ಥಾವರಗಳು ಮತ್ತು ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡುವುದನ್ನು ಈ ಒಪ್ಪಂದ ನಿಷೇಧಿಸುತ್ತದೆ.

ಅದರ ನಿಬಂಧನೆಗಳ ಪ್ರಕಾರ ಎರಡೂ ದೇಶಗಳ ಪಟ್ಟಿಯ ವಿನಿಮಯ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ.

                  ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ಪಟ್ಟಿಗಳ ವಿನಿಮಯ ನಡೆದಿದೆ ಎಂದು ಅದು ಹೇಳಿದೆ.

                  ಈ ಕುರಿತ ಒಪ್ಪಂದಕ್ಕೆ 1988ರ ಡಿಸೆಂಬರ್‌ 31ರಂದು ಎರಡೂ ದೇಶಗಳು ಸಹಿ ಹಾಕಿದ್ದು, 1991ರ ಜನವರಿ 27ರಂದು ಒಪ್ಪಂದ ಜಾರಿಗೆ ಬಂದಿದೆ. ಈ ಒಪ್ಪಂದದ ಪ್ರಕಾರ, ಪ್ರತಿ ವರ್ಷದ ಜನವರಿ ಮೊದಲ ದಿನದಂದು ಉಭಯ ದೇಶಗಳು ತಮ್ಮಲ್ಲಿನ ಪರಮಾಣು ಸ್ಥಾವರಗಳು ಮತ್ತು ಸೌಲಭ್ಯಗಳ ಪಟ್ಟಿಯನ್ನು ಕಡ್ಡಾಯವಾಗಿ ವಿನಿಮಯ ಮಾಡಿಕೊಳ್ಳಬೇಕು. 1992ರಿಂದ ಈ ಪ್ರಕ್ರಿಯೆ ನಡೆದುಕೊಂಡು ಬಂದಿದ್ದು, ಈ ಬಾರಿಯದ್ದು 32ನೇ ವಿನಿಮಯವಾಗಿದೆ ಎಂದು ಎಂಇಎ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries