HEALTH TIPS

ಒಣಕೆಮ್ಮಿಗೆ ಕಾರಣವೇನು? ಯಾವ ಮನೆಮದ್ದು ಒಳ್ಳೆಯದು?

 ಒಣಕೆಮ್ಮಿನ ಸಮಸ್ಯೆ ಬಂದರೆ ಬೇಗನೆ ಕಡಿಮೆಯಾಗಲ್ಲ, ಅಪ್ಪರ್‌ ರೆಸ್ಪ್ರೇಟರಿ ಇನ್‌ಫೆಂಕ್ಷನ್‌ನಿಂದಾಗಿ ಒಣ ಕೆಮ್ಮಿನ ಸಮಸ್ಯೆ ಉಂಟಾಗುವುದು. ಅಸ್ತಮಾ, ವೈರಲ್‌ ಸೋಂಕು, ಧೂಮಪಾನ ಈ ಕಾರಣದಿಂದಾಗಿ ಒಣ ಕೆಮ್ಮಿನ ಸಮಸ್ಯೆ ಹೆಚ್ಚಾಗುವುದು.

ಒಣ ಕೆಮ್ಮಿನ ಸಾಮಾನ್ಯ ಲಕ್ಷಣಗಳೆಂದರೆ
* ಗಂಟಲಿನಲ್ಲಿ ಕೆರೆತ
* ಕಫ ಇರಲ್ಲ
* ಕೆಮ್ಮುವಾಗ ಜೋರಾದ ಶಬ್ದ
* ನಿದ್ದೆಗೆ ಅಡೆತಡೆ ಉಂಟಾಗುವುದು

 ಈ ಅಭ್ಯಾಸಗಳಿಂದ ಕೆಮ್ಮು ಉಂಟಾಗುವುದು
* ಧೂಮಪಾನ
* ಅಭ್ಯಾಸ: ಕೆಲವರು ಕಾರಣವೇ ಇಲ್ಲದೆ ಕೆಮ್ಮುತ್ತಾರೆ

ಈ ಬಗೆಯ ಸಮಸ್ಯೆ ಇದ್ದರೆ
ಅಸ್ತಮಾ: ಅಸ್ತಮಾ ಇರುವವರೆಗೆ ಎಲ್ಲರಿಗೆ ಒಣ ಕೆಮ್ಮು ಉಂಟಾಗುವುದಿಲ್ಲ. ಕೆಲವು ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸುವುದಿಲ್ಲ ಅದರ ಬದಲಾಗಿ ಈ ರೀತಿ ಒಣಕೆಮ್ಮಿನ ಸಮಸ್ಯೆ ಉಂಟಾಗುವುದು.
ಹೃದಯದ ಸಮಸ್ಯೆ: ಹೃದಯದ ಸಮಸ್ಯೆ ಇರುವವರಲ್ಲಿ ಒಣಕೆಮ್ಮಿನ ಸಮಸ್ಯೆ ಉಂಟಾಗುವುದು.

ಶ್ವಾಸಕೋಶದ ಸಮಸ್ಯೆ
* ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಎದೆ ನೋವು, ಉಸಿರಾಟದಲ್ಲಿ ತೊಂದರೆ, ಒಣ ಕೆಮ್ಮು ಈ ಬಗೆಯ ಸಮಸ್ಯೆ ಕಂಡು ಬರುವುದು.

* ವೈರಲ್‌ ಸೋಂಕು : ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ರೀತಿಯಾದಾಗ ಜ್ವರ, ಟಾನ್ಸಿಲ್ ಊದುಕೊಳ್ಳುವುದು, ಮೈ ಕೈ ನೋವು, ಶೀತ, ಸೀನು ಈ ಬಗೆಯ ಸಮಸ್ಯೆಗಳು ಕೂಡ ಕಂಡು ಬರುವುದುದು.

ಮಕ್ಕಳಿಗೆ ವೈರಲ್‌ ಸೋಂಕು ಆದಾಗ ಆಸ್ಪಿರಿನ್‌ ನೀಡಬೇಡಿ, ಅವರಿಗೆ ಆ್ಯಂಟಿಬಯೋಟಿಕ್‌ ಔಷಧ ಪ್ರಾರಂಭಿಸಿದರೆ ಮಾತ್ರ ಕೆಮ್ಮು ಕಡಿಮೆಯಾಗುವುದು.

* ವೈರಲ್‌ ನ್ಯೂಮೋನಿಯಾ
ವೈರಲ್‌ ನ್ಯೂಮೋನಿಯಾ ಇದು ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಮತ್ತೊಬ್ಬರಿಗೆ ಹರಡುವುದು. ಇದರಲ್ಲಿ ಆರಂಭದಲ್ಲಿ ಲಕ್ಷಣಗಳು ಅಷ್ಟಾಗಿ ಗಂಭೀರ ಪರಿಣಾಮ ಬೀರುವುದಿಲ್ಲ, ನಂತರ ಉಸಿರಾಟದಲ್ಲಿ ತೊಂದರೆ, ತಲೆಸುತ್ತು. ಎದೆನೋವು, ಕೆಮ್ಮು ಈ ಬಗೆಯ ಸಮಸ್ಯೆ ಕಂಡು ಬರುವುದು.

ಈ ರೀತಿ ಉಂಟಾದಾಗ ಆ್ಯಂಟಿಬಯೋಟಿಕ್‌ ನೀಡಿದರೆ ಏನೂ ಪ್ರಯೋಜನವಿಲ್ಲ ಬದಲಿಗೆ ಆ್ಯಂಟಿವೈರಲ್‌ ಡ್ರಗ್ಸ್, ಕಾರ್ಟಿಕೋಸ್ಟಿರಾಯ್ಡ್, ಆಕ್ಸಿಜನ್, ಜ್ವರ ಕಡಿಮೆ ಮಾಡಲು ibuprofen ನೀಡಬೇಕಾಗುತ್ತದೆ.

ಲಕ್ಷಣಗಳು: ತಲೆಸುತ್ತು, ತಲೆನೋವು, ಉಸಿರಾಟದಲ್ಲಿ ತೊಂದರೆ, ಹೊಟ್ಟೆ ಹಾಳಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.

ಪೋಸ್ಟ್‌ ಇನ್‌ಫೆಕ್ಷನ್ ಕೆಮ್ಮು
ಲಕ್ಷಣಗಳು: ಕೆಮ್ಮು, ಮೂಗು ಕಟ್ಟುವುದು, ಶೀತ, ಧ್ವನಿ ಹಾಳಾಗುವುದು

ಶೀತ
ಸಾಮಾನ್ಯ ಶೀತ ಉಂಟಾದಾಗ ಕೂಡ ಒಣ ಕೆಮ್ಮು ಉಂಟಾಗುವುದು, ಈ ರೀತಿಯಾದಾಗ 7-10 ದಿನಗಳಲ್ಲಿ ಕಡಿಮೆಯಾಗುವುದು.

COPD (Chronic obstructive pulmonary disease)
ಈ ರೀತಿಯಾದಾಗ ಉಸಿರಾಡಲು ತೊಂದರೆ ಉಂಟಾಗುವುದು. ಇದು ಇದ್ದಕ್ಕಿದ್ದಂತೆ ಉಂಟಾಗುವುದು, ನಿಧಾನಕ್ಕೆ ಉಂಟಾಗುವುದು. ಈ ರೀತಿಯಾದಾಗ ರಕ್ತ ಪರೀಕ್ಷೆ, ಎಕ್ಸ್‌ ರೇ CT ಸ್ಕ್ಯಾನ್ ಮಾಡಿಸಬೇಕಾಗುತ್ತದೆ.

ಲಕ್ಷಣಗಳು: ತಲೆಸುತ್ತು, ಕೆಮ್ಮು, ಉಸಿರಾಟದಲ್ಲಿ ತೊಂದರೆ, ನಿದ್ದೆ ಮಾಡಲು ಸಾಧ್ಯವಾಗದಿರುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.

ಬ್ರಾಂಕೈಟಿಸ್
ಶೀತ, ಜ್ವರಕ್ಕೆ ಕಾರಣವಾದ ವೈರಸ್‌ ಈ ಬ್ರಾಂಕೈಟಿಸ್ ಸಮಸ್ಯೆ ಉಂಟು ಮಾಡುವುದು. ಬ್ರಾಂಕೈಟಿಸ್‌ನಲ್ಲಿ ಕಫ ಹಳದಿ ಅಥವಾ ಹಸಿರು ಬಣ್ಣದಲ್ಲಿರುತ್ತದೆ. ಈ ರೀತಿಯಾದಾಗ ಒಳ್ಳೆಯ ರೆಸ್ಟ್ ಬೇಕಾಗುತ್ತದೆ, ಆ್ಯಂಟಿಬಯೋಟಿಕ್‌ ಪ್ರಯೋಜನವಾಗಲ್ಲ, ನೀವು ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.

ಬ್ಯಾಕ್ಟಿರಿಯಾ ನ್ಯೋಮೋನಿಯಾ

ಬ್ಯಾಕ್ಟಿರಿಯಾ ನ್ಯೂಮೋನಿಯಾ ಉಂಟಾದಾಗ ತಲೆಸುತ್ತು, ಜ್ವರ, ಮೈಕೈ ನೋವು, ಉಸಿರಾಟದಲ್ಲಿ ತೊಂದರೆ, ಕೆಮ್ಮುವಾಗ ಕಫ ಈ ಬಗೆಯ ಸಮಸ್ಯೆ ಕಂಡು ಬರುವುದು. ಇದನ್ನು ನಿರ್ಲಕ್ಷ್ಯ ಮಾಡಬಾರದು, ಇದರಿಂದ ಅಂಗಾಂಗ ವೈಫಲ್ಯ ಕೂಡ ಉಂಟಾಗಬಹುದು.

ಯಾವಾಗ ತುರ್ತು ಚಿಕಿತ್ಸೆ ಪಡೆಯಬೇಕು
ಕೆಮ್ಮುವಾಗ ರಕ್ತ ಬಂದರೆ
* ಎದೆನೋವು, ಜ್ವರ ಕಾಣಿಸಿಕೊಂಡರೆ
* ತುಂಬಾ ತಲೆನೋವು ಅಥವಾ ಕಿವಿನೋವು
* ತುಂಬಾನೇ ಕೆಮ್ಮು

ಮನೆಮದ್ದು
* ಬಿಸಿನೀರಿಗೆ ಜೇನು ಮತ್ತು ನಿಂಬೆರಸ ಸೇರಿಸಿ ಕುಡಿಯಿರಿ
* ಕೆಮ್ಮಿಗೆ ಸಿರಪ್‌ ತೆಗೆದುಕೊಳ್ಳಿ, ಕಷಾಯ ಮಾಡಿ ಕುಡಿಯಿರಿ
* ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ
* ಕೆಮ್ಮು ಅಧಿಕ ಮಾಡುವ ತಣ್ಣನೆಯ ಆಹಾರ ಪದಾರ್ಥಗಳನ್ನು ಸೇವಿಸಬೇಡಿ


 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries