ಕಾಸರಗೋಡು: ಮಹಿಳೆಯರನ್ನು ಅಡುಗೆ ಮನೆಯಿಂದ ಉದ್ಯೋಗದೆಡೆಗೆ ಸ್ಥಳಾಂತರಿಸಲು ಕುಟುಂಬಶ್ರೀ ಸಹಯೋಗದೊಂದಿಗೆ ಮಹಿಳಾ ವಿದ್ಯಾವಂತ ಉದ್ಯೋಗಾಕಾಂಕ್ಷಿಗಳಿಗಾಗಿ ನಾಲೆಜ್ ಎಕಾನಮಿ ಮಿಷನ್ ವಿಶೇಷ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಯೋಜನೆಯ ಮೊದಲ ಹಂತವಾಗಿ, 2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 1000 ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಯೋಜನೆಯ ಎರಡನೇ ಹಂತವಾಗಿ "ನನ್ನ ಕೆಲಸ ನನ್ನ ಹೆಮ್ಮೆ" ಎಂಬ ಯೋಜನೆ ಸಿದ್ಧವಾಗುತ್ತಿದೆ. ನಾಲೆಡ್ಜ್ ಎಕಾನಮಿ ಮಿಷನ್ ಕುಟುಂಬಶ್ರೀ ಸಹಯೋಗದಲ್ಲಿ ರಾಜ್ಯದಲ್ಲಿ 60 ದಿನಗಳಲ್ಲಿ ಒಂದು ಸಾವಿರ ಮಹಿಳೆಯರಿಗೆ ಉದ್ಯೋಗ ನೀಡುವ ತೀವ್ರ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ 42 ಸಮುದಾಯ ರಾಯಭಾರಿಗಳನ್ನು ನೇಮಿಸಲಾಗಿದೆ. ಮಾರ್ಚ್ 8 ರಂದು ಮಹಿಳಾ ಉದ್ಯೋಗಿಗಳಿಗೆ ಮುಖ್ಯಮಂತ್ರಿ ಆಫರ್ ಲೆಟರ್ ಹಸ್ತಾಂತರಿಸಲಿದ್ದಾರೆ. ಇದಕ್ಕಾಗಿ ನಾಲೆಜ್ ಜಾಬ್ ಯೂನಿಟ್ ಸಿದ್ಧಪಡಿಸಲಾಗಿದೆ. ಸಮುದಾಯ ರಾಯಭಾರಿ ನೇತೃತ್ವದಲ್ಲಿ ಘಟಕಕ್ಕೆ ಪಂಚಾಯತ್ ಮಟ್ಟದಲ್ಲಿ ಪ್ಲಸ್ ಟು ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ 25 ಮಹಿಳೆಯರನ್ನೊಳಗೊಂಡ ಯೂನಿಟ್ ತಯಾರಿಸಲಾಗಿದೆ. ನಾನಾ ಕಾರಣಗಳಿಂದ ಉದ್ಯೋಗ ತೊರೆಯಬೇಕಾಗಿದ್ದ ಮಹಿಳೆಯರಿಗೆ ಮುಂದಿನ ಉದ್ಯೋಗ ಪಡೆಯಲು ಯೋಜನೆಯ ಮೂಲಕ ಉತ್ತಮ ಅವಕಾಶ ದೊರೆಯುತ್ತದೆ.ನಾಲೆಡ್ಜ್ ಎಕಾನಮಿ ಮಿಷನ್‍ನ ಕುಟುಂಬಶ್ರೀ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 53 ಲಕ್ಷ ಉದ್ಯೋಗಾಕಾಂಕ್ಷಿಗಳಿದ್ದು, ಇವರಲ್ಲಿ ಶೇ 58ರಷ್ಟು ಮಹಿಳೆಯರಾಗಿದ್ದಾರೆ.
ಕುಟುಂಬಶ್ರೀಯಿಂದ ನಾಲೆಜ್ ಎಕಾನಮಿ ಮಿಷನ್ ವಿಶೇಷ ಯೋಜನೆ
0
ಜನವರಿ 12, 2023
Tags




