HEALTH TIPS

ಕ್ಷಯರೋಗ ತಡೆಗೆ ಪ್ರಯೋಗಿಕ ಲಸಿಕೆ ಶೀಘ್ರ ಆರಂಭ: ಡಾ.ಶೇಖರ್‌ ಮಂಡೆ

 

                 ನಾಗ್ಪುರ: ಕ್ಷಯರೋಗ ತಡೆಗೆ ಬಿಸಿಜಿ (ಬ್ಯಾಸಿಲಸ್ ಕ್ಯಾಲ್ಮೆಟ್-ಗುರಿನ್) ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಭಾರತದಲ್ಲಿ ಶೀಘ್ರ ಆರಂಭವಾಗಲಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್‌) ಮಹಾನಿರ್ದೇಶಕ ಡಾ.ಶೇಖರ್‌ ಮಂಡೆ ಶುಕ್ರವಾರ ಹೇಳಿದರು.

             ಇಲ್ಲಿ ನಡೆಯುತ್ತಿರುವ ವಿಜ್ಞಾನ ಕಾಂಗ್ರೆಸ್‌ ಸಮಾವೇಶದಲ್ಲಿ 'ಕ್ಷಯರೋಗ ಸಂಶೋಧನೆಯಲ್ಲಿ ಜೈವಿಕ ಭೌತಶಾಸ್ತ್ರದ ವಿಧಾನಗಳು' ಎನ್ನುವ ಕುರಿತು ಪ್ರಾತ್ಯಕ್ಷಿಕೆ ನೀಡಿದ ಅವರು, ಈ ರೋಗವನ್ನು ವೈದ್ಯರು ಮತ್ತು ಸಂಶೋಧಕರು ಅರ್ಥೈಸಿಕೊಳ್ಳಲು ತಂತ್ರಜ್ಞಾನ ಹೇಗೆ ಸಹಾಯಕವಾಗಿದೆ ಎಂಬುದನ್ನು ವಿವರಿಸಿದರು.

                      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಸ್‌ಐಆರ್‌ ಭಾರತದಲ್ಲಿ 2025ರ ಹೊತ್ತಿಗೆ ಬ್ಯಾಕ್ಟೀರಿಯಾಗಳಿಂದ ಬರುವ ಕಾಯಿಲೆಗಳ ಪತ್ತೆಹಚ್ಚುವಿಕೆ, ಲಸಿಕೆ ಮತ್ತು ಚಿಕಿತ್ಸೆಯ ಮೂಲಕ ಅವುಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. 2025ರ ಹೊತ್ತಿಗೆ ಸಂಪೂರ್ಣ ಟಿಬಿ ಮುಕ್ತ ಭಾರತವನ್ನಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.

                   ಮುಖ್ಯವಾಗಿ ಕ್ಷಯರೋಗ ತಡೆಗೆ ಹೊಸ ಔಷಧ ಕಂಡುಹಿಡಿಯುವತ್ತ ಗಮನಹರಿಸಲಾಗುತ್ತಿದೆ. ಇದನ್ನು ಪ್ರಾಥಮಿಕವಾಗಿ ಬಳಸಬಹುದಾಗಿದೆ. 2022ರ ಭಾರತೀಯ ಕ್ಷಯರೋಗ ವರದಿಯ ಪ್ರಕಾರ 2021ರಲ್ಲಿ 19.3 ಲಕ್ಷ ಮಂದಿ ಟಿಬಿಗೆ ತುತ್ತಾಗಿದ್ದಾರೆ ಎಂದರು.

                 ಒಟ್ಟಾರೆ ದೇಶದಲ್ಲಿ ಶೆ 30ರಷ್ಟು ಜನರು ಟಿಬಿಗೆ ಕಾರಣವಾಗುವ ವೈರಾಣುವಿಗೆ ತುತ್ತಾಗಿದ್ದಾರೆ. ಆದರೆ ಸಂತಸದ ವಿಷಯವೆಂದರೆ ಅವರಲ್ಲಿ 90ರಷ್ಟು ಮಂದಿ ಜೀವಮಾನದಲ್ಲಿ ಕ್ಷಯರೋಗಕ್ಕೆ ಒಳಗಾಗುವುದಿಲ್ಲ. ಶೆ10ರಷ್ಟು ಜನರು ಮಾತ್ರ ಕ್ಷಯರೋಗವನ್ನು ಎದುರಿಸಬಹುದು ಎಂದು ಮಾಹಿತಿ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries