HEALTH TIPS

ಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸಿದ ಭಾರತ್ ಜೋಡೋ ಯಾತೆ: ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್


            ಮಂಜೇಶ್ವರ: ವಾಮಮಾರ್ಗದಿಂದ ಗಳಿಸಿದ ಅಧಿಕಾರವನ್ನು ಉಳಿಸಲು ಮತ್ತು ಬ್ರಹ್ಮಾಂಡ ಭ್ರμÁ್ಟಚಾರವನ್ನು ಮರೆಮಾಚಲು ಆಡಳಿತಾರೂಢರೇ ಬೇಜವಾಬ್ದಾರಿಯಿಂದ ದೇಶದ ಜನತೆಯನ್ನು ಪರಸ್ಪರ ಬೇರ್ಪಡಿಸಿದಾಗ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತೀಯರನ್ನು ಒಗ್ಗೂಡಿಸುವ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದಾರೆ. ಉರಿಬಿಸಿಲು,ಮೈಕೊರೆಯುವ ಚಳಿ, ಮಳೆ ಇತ್ಯಾದಿ ಪ್ರಾಕೃತಿಕ ಸಮಸ್ಯೆಗಳು ಮತ್ತು ಸಂಘಪರಿವಾರದ ವ್ಯವಸ್ಥಿತ ಅಪಪ್ರಚಾರಗಳನ್ನು ಮೆಟ್ಟಿನಿಂತು ರಾಹುಲ್ ಗಾಂಧಿಯವರು ಚಾರಿತ್ರಿಕ ಪಾದಯಾತ್ರೆ ಕೈಗೊಂಡಿದ್ದು, ಇದು ಜನತೆಯಲ್ಲಿ ಭವಿಷ್ಯದ ಬಗ್ಗೆ ಆಶಾಕಿರಣ ಮೂಡಿಸಿದೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ.ಫೈಸಲ್ ಹೇಳಿದ್ದಾರೆ.
        ಅವರು ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
           ಜನವರಿ ತಿಂಗಳಿನಿಂದ ತೊಡಗಿ ಮೇ ತಿಂಗಳವರೆಗಿನ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ಮಾಹಿತಿ ನೀಡಿದರು.
            ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೇತಾರರಾದ ಪಿ.ವಿ.ಸುರೇಶ್, ಮಣಿಕಂಠನ್, ಜುನೈದ್ ಉರ್ಮಿ,ಉಮ್ಮರ್ ಬೋರ್ಕಳ, ಪಿ.ಸೋಮಪ್ಪ, ಮುಹಮ್ಮದ್ ಕಂಚಿಲ, ಪಿ.ಎಂ.ಖಾದರ್ ಹಾಜಿ, ಫ್ರಾನ್ಸಿಸ್ ಡಿ'ಸೋಜಾ, ಉಮ್ಮರ್ ಶಾಫಿ, ಇಕ್ಬಾಲ್ ಕಳಿಯೂರು, ಓಂ ಕೃಷ್ಣ, ಯೋಗೇಶ್ ಉದ್ಯಾವರ, ಪ್ರದೀಪ್ ಶೆಟ್ಟಿ, ಬರ್ನಾರ್ಡ್ ಡಿ'ಅಲ್ಮೇಡಾ, ಝಕರಿಯಾ ಮಂಜೇಶ್ವರ, ಮುಹಮ್ಮದ್ ಜೆ,ಹನೀಫ್ ಪಡಿಂಞರ್, ಸೀತಾ ಡಿ, ಕೃಷ್ಣನ್ ಅಡ್ಕತೊಟ್ಟಿ, ರಜತ್ ವೇಗಸ್, ಉಮ್ಮರ್ ಪಾಲೆಂಗ್ರಿ, ರವಿ ಮಂಜೇಶ್ವರ, ನೈನಾರ್ ಅಹ್ಮದ್, ಮೊಯ್ದಿನ್ ಗುಡ್ಡೆ, ಮುಹಮ್ಮದ್ ಮಂಜೇಶ್ವರ, ಖಲೀಲ್ ಬಜಾಲ್, ಮನ್ಸೂರ್ ಬಿ.ಎಂ, ಉಮ್ಮರ್ ಬೆಜ್ಜ, ಹಮೀದ್ ಕಣಿಯೂರು, ಯೂಸುಫ್ ಮಾಸ್ತರ್, ಯಾಕೂಬ್ ಕೋಡಿ, ರಫೀಕ್ ಕುಂಟಾರ್, ಮುಹಮ್ಮದ್ ಮಿಸ್ಬಾ, ಶಬೀರ್ ಮಂಜೇಶ್ವರ ಮುಂತಾದವರು ಉಪಸ್ಥಿತರಿದ್ದರು.
         ಆರಿಫ್ ಮಚ್ಚಂಪಾಡಿ ಸ್ವಾಗತಿಸಿ, ಗಣೇಶ್ ಪಾವೂರು ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries