HEALTH TIPS

ಮಕ್ಕಳ ಕಲಿಕಾ ಮಟ್ಟದಲ್ಲಿ ಇಳಿಕೆ: ಎಎಸ್‌ಇಆರ್‌ ವರದಿ

 

             ನವದೆಹಲಿ: ದೇಶದಲ್ಲಿ 3,5 ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟವು 2012ಕ್ಕೂ ಹಿಂದಿನ ಮಟ್ಟವನ್ನು ತಲುಪಿದೆ. ಜೊತೆಗೆ ಗಣಿತ ವಿಷಯದ ಕಲಿಕಾ ಮಟ್ಟವು 2018ರ ಮಟ್ಟಕ್ಕೆ ಇಳಿದಿದೆ ಎಂದು ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ (ಎಎಸ್‌ಇಆರ್‌) 2022ರಲ್ಲಿ ಹೇಳಲಾಗಿದೆ. ಈ ವರದಿಯು ಬುಧವಾರ ಬಿಡುಗಡೆಗೊಂಡಿದೆ.

            ಎಲ್ಲ ರಾಜ್ಯಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲೂ ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಓದಿನಲ್ಲಿ ಕೇರಳ, ಹಿಮಾಚಲ ಪ್ರದೇಶ ಮತ್ತು ಹರಿಯಾಣದ ವಿದ್ಯಾರ್ಥಿಗಳ ಸಾಮರ್ಥ್ಯ ಕುಂಠಿತಗೊಂಡಿದೆ. ತಮಿಳುನಾಡು, ಮಿಜೋರಾಂ ಹಾಗೂ ಹರಿಯಾಣದ ವಿದ್ಯಾರ್ಥಿಗಳ ಗಣಿತ ಕೌಶಲವು ಕಡಿಮೆಯಾಗಿದೆ.

                       ಏನಿದು ಎಎಸ್‌ಇಆರ್‌?
                  ಇದೊಂದು ರಾಷ್ಟ್ರೀಯ ಮಟ್ಟದ ಮನೆ-ಮನೆ ಸಮೀಕ್ಷೆಯಾಗಿದೆ. ಇದನ್ನು ಎಎಸ್‌ಇಆರ್‌ ಕೇಂದ್ರ ನಡೆಸುತ್ತದೆ. ಗ್ರಾಮೀಣ ಭಾರತದ ಮಕ್ಕಳ ಶಾಲೆ ಹಾಗೂ ಕಲಿಕೆಯ ಕುರಿತು ಈ ಸಮೀಕ್ಷೆ ಮಾಹಿತಿ ನೀಡುತ್ತದೆ. 2005ರಿಂದ ಎಎಸ್‌ಇಆರ್‌ ಈ ಸಮೀಕ್ಷೆಗಳನ್ನು ನಡೆಸುತ್ತಿದೆ.

                    ಕೋವಿಡ್‌ ಕಾರಣದಿಂದ ಮಕ್ಕಳು ಶಾಲೆಗೆ ಹೋಗದಂತಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಮಕ್ಕಳು ಪುನಃ ಶಾಲೆಗೆ ತೆರಳುತ್ತಿದ್ದಾರೆ. ಈ ಹಂತದಲ್ಲಿ ಈ ಸಮೀಕ್ಷೆ ನಡೆಸಿರುವುದು ಈ ವರದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ.

ಸಮೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ನೀಡಲಾದ ಪರೀಕ್ಷೆ
* ಒಂದನೇ ಹಂತ; ಅಕ್ಷರ, ಪದ, ಸರಳ ಪ್ಯಾರಾ ಓದುವುದು
* ಎರಡನೇ ಹಂತ; ಕಥೆ ಓದುವುದು

3ನೇ ತರಗತಿ
ಎರಡನೇ ಹಂತದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರಮಾಣವು ಶೇ 27.3 (2018)ರಿಂದ ಶೇ 20.5 (2022)ಕ್ಕೆ ಇಳಿಕೆಯಾಗಿದೆ.

ಶೇ 10 ಅಂಕಗಳಷ್ಟು ಇಳಿಕೆ ಕಂಡ ರಾಜ್ಯಗಳ ಪಟ್ಟಿ (2018ರ ಹೋಲಿಕೆ) (ಶೇಕಡವಾರುಗಳಲ್ಲಿ)
- ರಾಜ್ಯ; 2018;2022
* ಕೇರಳ; 52.1;38.7
* ಹಿಮಾಚಲ ಪ್ರದೇಶ;47.7;28.4

ಅಧಿಕ ಇಳಿಕೆ ಕಂಡ ರಾಜ್ಯ
* ಆಂಧ್ರ ಪ್ರದೇಶ; 22.6;10.3
* ತೆಲಂಗಾಣ;18.1;5.2

5ನೇ ತರಗತಿ
ಎರಡನೇ ಹಂತದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರಮಾಣವು ಶೇ 50.5 (2018)ರಿಂದ ಶೇ 42.8 (2022)ಕ್ಕೆ ಇಳಿಕೆಯಾಗಿದೆ. ಬಿಹಾರ, ಒಡಿಶಾ, ಮಣಿಪುರ ಹಾಗೂ ಜಾರ್ಖಂಡ್‌ ರಾಜ್ಯಗಳಲ್ಲಿ ಈ ತರಗತಿಯ ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿ ಸ್ವಲ್ಪ ಸುಧಾರಣೆಯಾಗಿದೆ.

ಶೇ 15 ಅಂಕಗಳಷ್ಟು ಇಳಿಕೆ ಕಂಡ ರಾಜ್ಯಗಳ ಪಟ್ಟಿ (2018ರ ಹೋಲಿಕೆ) (ಶೇಕಡವಾರುಗಳಲ್ಲಿ)
- ರಾಜ್ಯ; 2018; 2022
* ಆಂಧ್ರ ಪ್ರದೇಶ; 59.7; 36.3
* ಗುಜರಾತ್‌; 53.8; 34.2

ಉತ್ತರಾಖಂಡ, ರಾಜಸ್ಥಾನ, ಹರಿಯಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳು ಶೇ 10ರಷ್ಟು ಇಳಿಕೆಕಂಡಿವೆ.

8ನೇ ತರಗತಿ
ಈ ತಗರತಿಯಲ್ಲಿ ಓದುವ ಸಾಮರ್ಥ್ಯ ಇರುವ ವಿದ್ಯಾರ್ಥಿಗಳ ಪ್ರಮಾಣವು ಶೇ 73 (2018)ರಿಂದ ಶೇ 69.6 (2022)ಕ್ಕೆ ಇಳಿಕೆಯಾಗಿದೆ.

ಗಣಿತ ಕಲಿಕಾ ಸಾಮರ್ಥ್ಯ
ವಿದ್ಯಾರ್ಥಿಗಳ ಗಣಿತ ಕಲಿಕಾ ಸಾಮರ್ಥ್ಯವು 2018ರ ಮಟ್ಟವನ್ನು ತಲುಪಿದೆ. ಮೂರನೇ ಹಾಗೂ ಐದನೇ ತರಗತಿ ವಿದ್ಯಾರ್ಥಿಗಳ ಗಣಿತ ಕಲಿಕಾ ಮಟ್ಟವು ಕುಸಿತ ಕಂಡಿದ್ದರೆ, 8ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.

3ನೇ ತರಗತಿ
ಈ ಹಂತದ ಮಕ್ಕಳು ವ್ಯವಕಲನ (ಕಳೆಯುವುದು) ಮಾಡುವ ಸಾಮರ್ಥ್ಯವು ಶೇ 28.2 (2018)ರಿಂದ ಶೇ 25.9 (2022)ಕ್ಕೆ ಇಳಿಕೆಯಾಗಿದೆ.

- ರಾಜ್ಯ; 2018; 2022
* ತಮಿಳುನಾಡು; 25.9;11.2
* ಮಿಜೋರಾಂ; 58.8;42
* ಹರಿಯಾಣ; 53.9;41.8

5ನೇ ತರಗತಿ
ಭಾಗಾಕಾರ ಮಾಡುವ ಸಾಮರ್ಥ್ಯ ಇರುವ ಐದನೇ ತರಗತಿ ವಿದ್ಯಾರ್ಥಿಗಳ ಪ್ರಮಾಣವು ಶೇ 27.9 (2018)ರಿಂದ ಶೇ 25.6 (2022)ಕ್ಕೆ ಇಳಿಕೆಯಾಗಿದೆ.

ಶೇ 10 ಅಂಕಗಳಷ್ಟು ಇಳಿಕೆ ಕಂಡ ರಾಜ್ಯಗಳ ಪಟ್ಟಿ (2018ರ ಹೋಲಿಕೆ) (ಶೇಕಡವಾರುಗಳಲ್ಲಿ)
-
ರಾಜ್ಯ; 2018; 2022
* ಮಿಜೋರಾಂ; 40.2; 20.9
* ಹಿಮಾಚಲ ಪ್ರದೇಶ; 56.6; 42.6
* ಪಂಜಾಬ್‌; 52.9; 41.1

             8ನೇ ತರಗತಿ ವಿದ್ಯಾರ್ಥಿಗಳ ಗಣಿತ ಕಲಿಕಾ ಸಾಮರ್ಥ್ಯದಲ್ಲಿ ಶೇ 44.1 (2018)ರಿಂದ ಶೇ 44.7 (2022)ರಷ್ಟು ಸುಧಾರಣೆ ಕಂಡುಬಂದಿದೆ. ಈ ಹಂತದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಹಾಗೂ ಪ್ರಮುಖವಾಗಿ ಹೆಣ್ಣುಮಕ್ಕಳ ಸಾಮರ್ಥ್ಯದಲ್ಲಿ ಏರಿಕೆ ಕಂಡುಬಂದಿದೆ. ಹುಡುಗರು ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕಾ ಸಾಮರ್ಥ್ಯದಲ್ಲಿ ಇಳಿಕೆ ಕಂಡುಬಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries