HEALTH TIPS

ಕೇರಳ ಸಾಂಸ್ಕೃತಿ ಕಾರ್ಯಕ್ರಮ ವಿವಾದ: CM ನೈತಿಕ ಹೊಣೆ ಹೊರಲು ಕಾಂಗ್ರೆಸ್‌ ಆಗ್ರಹ

 

         ಕೋಯಿಕ್ಕೋಡ್‌ : ರಾಜ್ಯ ಶಾಲಾ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯವನ್ನು ಉಗ್ರಗಾಮಿ ಎಂದು ತೋರಿಸಿರುವ ಪ್ರಸ್ತುತಿಯ ವಿಚಾರವು ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ ಮಂಗಳವಾರ ಒತ್ತಾಯಿಸಿದೆ.

                   ಐದು ದಿನಗಳ ಯುವಜನೋತ್ಸವವು ಜ.3ರಿಂದ 7ರವರೆಗೆ ನಡೆದಿತ್ತು.

               'ಶಿಕ್ಷಣ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರವಾಸೋದ್ಯಮ ಸಚಿವರು ಯುವಜನೋತ್ಸವದ ನೇತೃತ್ವ ವಹಿಸಿದ್ದರು. ಆದ್ದರಿಂದ ಸರ್ಕಾರವೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಹೇಗಾಯಿತು? ಸರ್ಕಾರ ಹಾಗೂ ಮುಖ್ಯಮಂತ್ರಿಯ ಹೊಣೆಗಾರಿಕೆ ಇದು' ಎಂದು ಕಾಂಗ್ರೆಸ್‌ ಮುಖಂಡ, ಸಂಸದ ಕೆ. ಮುರಳೀಧರನ್‌ ಅಭಿಪ್ರಾಯಪಟ್ಟರು.


                    ಭಾರತೀಯ ಮುಸ್ಲಿಂ ಲೀಗ್‌ (ಐಯುಎಂಎಲ್‌) ಈ ಘಟನೆಯನ್ನು ಖಂಡಿಸಿದೆ.

                 'ಉದ್ದೇಶಪೂರ್ವಕವಲ್ಲ': ಮುಸ್ಲಿಂ ಸಮುದಾಯವನ್ನು ಉಗ್ರಗಾಮಿ ಎಂದು ತೋರಿಸಿದ ಆರೋಪ ಎದುರಿಸುತ್ತಿರುವ ಪೇರಂಬ್ರದ ಮಾತಾ ಕಲಾ ತಂಡವು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ. ಅದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಜೊತೆಗೆ ನಮಗೂ ಹಾಗೂ ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತಕ್ಕೂ ಸಂಬಂಧ ಇಲ್ಲ ಎಂದೂ ಸ್ಪಷ್ಟಪಡಿಸಿದೆ.

                'ಮುಸ್ಲಿಂ ಯುವಕನಾಗಿ ಕಾರ್ಯಕ್ರಮದಲ್ಲಿ ಪಾತ್ರ ಮಾಡಿದವರು ನಮ್ಮ ತಂಡದ ಸದಸ್ಯರಲ್ಲ. ವೇದಿಕೆ ಮೇಲೆ ತಕ್ಷಣವೇ ಬಾ ಎಂದು ಕರೆದಾಗ, ಆತ ತಲೆಯ ಮೇಲೆ ಬಟ್ಟೆ ಸುತ್ತಿಕೊಂಡು ಬಂದಿದ್ದಾನಷ್ಟೇ' ಎಂದು ತಂಡದ ಅಧಿಕಾರಿ ಕನಕದಾಸ ಸ್ಪಷ್ಟಪಡಿಸಿದರು.

                       ಕಾರ್ಯಕ್ರಮದಲ್ಲಿ ಏನು ನಡೆದಿತ್ತು?

               ಕೆಫೀಯೆ (ಅರಬ್‌ನ ಸಾಂಪ್ರದಾಯಿಕ ತಲೆದಿರಿಸು) ತೊಟ್ಟಿದ್ದ ವ್ಯಕ್ತಿಯನ್ನು ಭಾರತೀಯ ಸೇನೆಯು ಸೆರೆ ಹಿಡಿಯುವ ದೃಶ್ಯವನ್ನು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೋರಿಸಲಾಗಿತ್ತು. ಕಾರ್ಯಕ್ರಮಗಳ ಆಯ್ಕೆ ಸಮಿತಿಯ ಮುಂದೆ ಈ ಪ್ರಸ್ತುತಿಯನ್ನು ವೇಷಭೂಷಣ ಇಲ್ಲದೆಯೇ ಪ್ರದರ್ಶಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

               ಘಟನೆ ಬಗ್ಗೆ ಗಮನಹರಿಸಲಾಗುವುದು. ಮುಂಬರುವ ಉತ್ಸವಗಳಲ್ಲಿ ಮಾತಾ ಕಲಾ ತಂಡಕ್ಕೆ ಅವಕಾಶ ನೀಡುವುದಿಲ್ಲ

              ವಿ. ಶಿವನ್‌ಕುಟ್ಟಿ, ಶಿಕ್ಷಣ ಸಚಿವ

                  ಈ ಪ್ರಸ್ತುತಿಯು ಸರ್ಕಾರದ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಕಾರ್ಯಕ್ರಮ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಗೆ ಸಂಘ ಪರಿವಾರದ ಸಂಪರ್ಕ ಇದೆಯೇ ಎನ್ನುವುದನ್ನು ತನಿಖೆ ಮಾಡಬೇಕು

                 ಪಿ.ಎ. ಮೊಹಮ್ಮದ್‌ ರಿಯಾಸ್‌, ಪ್ರವಾಸೋದ್ಯಮ ಸಚಿವ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries