HEALTH TIPS

NASAಗೆ ಚರಣಿಯಾ, ಟೋಲ್ ರೋಡ್ ಅಥಾರಿಟಿಗೆ ಧೈರ್ಯವನ್; ಭಾರತ ಮೂಲದವರಿಗೆ ಅಮೆರಿಕ ಸರ್ಕಾರದಲ್ಲಿ ಉನ್ನತ ಹುದ್ದೆ!

 

            ವಾಷಿಂಗ್ಟನ್: ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ನೀಡಲಾಗಿದ್ದು, NASAಗೆ ಚರಣಿಯಾ ಮತ್ತು ಟೋಲ್ ರೋಡ್ ಅಥಾರಿಟಿಗೆ ಧೈರ್ಯವನ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

            ಅಮೆರಿಕ ಬಾಹ್ಯಾಕಾಶ ಕೈಗಾರಿಕಾ ತಜ್ಞ ಎ.ಸಿ. ಚರಣಿಯಾ ಅವರನ್ನು NASAದ ಮುಖ್ಯ ತಾಂತ್ರಿಕ ತಜ್ಞರಾಗಿ ನೇಮಕ ಮಾಡಲಾಗಿದ್ದು, ಇವರು ನಾಸಾ ಮುಖ್ಯ  ಕಚೇರಿಯಲ್ಲಿ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರಿಗೆ ತಾಂತ್ರಿಕ ನೀತಿ ಮತ್ತು ಕಾರ್ಯಕ್ರಮಗಳಿಗೆ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.

                    ‘ನಾಸಾ ಯೋಜನೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಚರಣಿಯಾ ಅವರು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ನಿಭಾಯಿಸುವ ಪರಿಣತಿ ಹೊಂದಿರುವ ಅನುಭವಿ ನಾಯಕ’ ಎಂದು ನಾಸಾದ ತಂತ್ರಜ್ಞಾನ, ನೀತಿ ಮತ್ತು ಕಾರ್ಯತಂತ್ರ ಕುರಿತ ಸಹ ವ್ಯವಸ್ಥಾಪಕಿ ಭವ್ಯ ಲಾಲ್‌ ತಿಳಿಸಿದ್ದಾರೆ.

                ಇನ್ನು  ಫೋರ್ಟ್ ಬೆಂಡ್ ಟೋಲ್ ರೋಡ್ ಅಥಾರಿಟಿ ಮತ್ತು ಗ್ರ್ಯಾಂಡ್ ಪಾರ್ಕ್‌ವೇ ಟೋಲ್ ರೋಡ್ ಪ್ರಾಧಿಕಾರದ ನಿರ್ದೇಶಕರ ಮಂಡಳಿಗೆ ಭಾರತೀಯ ಮೂಲದ ಸ್ವಪನ್ ಧೈರ್ಯವನ್ ಅವರನ್ನು ನೇಮಕ ಮಾಡಲಾಗಿದೆ. ಸ್ವಪನ್ ಧೈರ್ಯವನ್, (57 ವರ್ಷ), ಅವರ ಹಿನ್ನೆಲೆ, ಸಮುದಾಯದ ಪ್ರಭಾವ ಮತ್ತು ಆರ್ಥಿಕ ಪರಿಣತಿಯ ಆಧಾರದ ಮೇಲೆ ಕಳೆದ ವಾರ ನೇಮಕಗೊಂಡಿದ್ದಾರೆ. 

              "ಗ್ರ್ಯಾಂಡ್ ಪಾರ್ಕ್‌ವೇ ಟೋಲ್‌ವೇ ಬೋರ್ಡ್ ಆಫ್ ಡೈರೆಕ್ಟರ್ಸ್‌ಗೆ ಧೈರ್ಯವಾನ್ ಅವರನ್ನು ನೇಮಿಸಲು ನನಗೆ ಹೆಮ್ಮೆಯಾಗುತ್ತಿದೆ" ಎಂದು ಕಮಿಷನರ್ ಆಂಡಿ ಮೇಯರ್ಸ್ ಹೇಳಿದ್ದಾರೆ. "ಧೈರ್ಯವನ್ ಅವರು ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ ಆಗಿದ್ದು, ಜನರ ಹಣದ ಉತ್ತಮ ಮೇಲ್ವಿಚಾರಕರಾಗುವುದರ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 



 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries