HEALTH TIPS

ಇ-ರುಪೀ ಪ್ರಾಯೋಗಿಕ ಯೋಜನೆಯ ಭಾಗವಾಗಿರುವ RBI ಕಚೇರಿ ಬಳಿಯ ಹಣ್ಣಿನ ವ್ಯಾಪಾರಿ...

 

                 ಮುಂಬೈ: ಇಪ್ಪತ್ತೈದು ವರ್ಷಗಳ ಹಿಂದೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿನ ತನ್ನ ಮನೆಯನ್ನು ತೊರೆದು ಮಂಬೈಗೆ ವಲಸೆ ಬಂದಿದ್ದ ಬಚ್ಚೆ ಲಾಲ್ ಸಾಹನಿ (45) ಈಗ ಮಿಂಟ್ ರಸ್ತೆಯ ಆರ್ಬಿಐ ಕೇಂದ್ರ ಕಚೇರಿಯ ಬಳಿ ಹಣ್ಣುಗಳನ್ನು ಮಾರುತ್ತಿದ್ದಾರೆ.

ಆದರೆ ವಿಷಯ ಇದಲ್ಲ, ಅವರ ಕಥೆಯನ್ನು ಅನನ್ಯವಾಗಿಸಿರುವುದು ಬೇರೆಯೇ...

               ಸಾಹನಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅಥವಾ ಇ-ರುಪೀ ಬಳಕೆ ಕುರಿತು RBI ಉಪಕ್ರಮವಾಗಿರುವ ರಾಷ್ಟ್ರವ್ಯಾಪಿ ಪೈಲಟ್ (ಪ್ರಾಯೋಗಿಕ) ಯೋಜನೆಯ ಭಾಗವಾಗಿದ್ದಾರೆ. 'ನಾನು ಇ-ರುಪೀ ಸ್ವೀಕರಿಸಲು ಆರಂಭಿಸಿ ಸುಮಾರು ಒಂದು ತಿಂಗಳಾಗಿದೆ. ಈವರೆಗೆ 300 ರೂ.ಮೌಲ್ಯದ 2-3 ವಹಿವಾಟುಗಳು ನಡೆದಿವೆ ಎಂದು ಸಾಹನಿ ತಿಳಿಸಿದರು. RBI ಅಧಿಕಾರಿಗಳು ಕಳೆದ ತಿಂಗಳು ಸಾಹನಿಯವರನ್ನು ಸಂಪರ್ಕಿಸಿ ಇ-ರೂಪಾಯಿ ವಹಿವಾಟುಗಳನ್ನು ಪ್ರಾರಂಭಿಸುವಂತೆ ಮನವರಿಕೆ ಮಾಡಿದ್ದರು. ವಹಿವಾಟುಗಳನ್ನು ಸಾಧ್ಯವಾಗಿಸಲು ಡಿಜಿಟಲ್ ವ್ಯಾಲೆಟ್ನೊಂದಿಗೆ ಪ್ರತ್ಯೇಕ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಖಾತೆಯನ್ನು ತೆರೆಯಲು ಅವರು ಸಾಹನಿಗೆ ನೆರವಾಗಿದ್ದರು. ಪ್ರತಿ ವಹಿವಾಟಿಗೂ ಸಾಹನಿ ಫೋನ್ ಗೆ ಸೂಚನೆ ಬರುತ್ತದೆ ಎಂದು indianexpress.com ವರದಿ ಮಾಡಿದೆ.

                   RBI 2022, ನ.1ರಂದು ನಿರ್ದಿಷ್ಟ ಬಳಕೆಯ ಪ್ರಕರಣಗಳಿಗಾಗಿ ಚಿಲ್ಲರೆ ಡಿಜಿಟಲ್ ರೂಪಾಯಿಯ ಪೈಲಟ್ ಯೋಜನೆಗೆ ಚಾಲನೆ ನೀಡಿತ್ತು. ಪೈಲಟ್ ಯೋಜನೆಯು ದೇಶಾದ್ಯಂತ ಆಯ್ದ ಸ್ಥಳಗಳಲ್ಲಿಯ ಸುಮಾರು 15,000 ಬಳಕೆದಾರರು ಮತ್ತು ವ್ಯಾಪಾರಿಗಳನ್ನು ಒಳಗೊಂಡಿದೆ. ಈ ಗುಂಪಿನ ಭಾಗವಾಗಿರುವ ಮುಂಬೈನ ಕೆಲವು ಬೀದಿ ವ್ಯಾಪಾರಿಗಳಲ್ಲಿ ಸಾಹನಿ ಓರ್ವರಾಗಿದ್ದಾರೆ.

                     ಪ್ರಾಯೋಗಿಕ ಹಂತದಲ್ಲಿ ವಹಿವಾಟುಗಳ ಪ್ರಮಾಣ ಕಡಿಮೆಯಿರುವಂತೆ ಕಂಡು ಬಂದಿದ್ದರೂ ಸಾಹನಿ, ವ್ಯಾಪಾರಿಗಳು ಈಗ ಗ್ರಾಹಕರಿಂದ ಹಣವನ್ನು ಸ್ವೀಕರಿಸಲು ನಗದು ಮತ್ತು ಯುಪಿಐ ಜೊತೆಗೆ ಇನ್ನೊಂದು ಆಯ್ಕೆಯನ್ನು ಹೊಂದಿದ್ದಾರೆ ಎಂದರು. ಆದರೂ ಯೋಜನೆಯಲ್ಲಿ ಕೆಲವು ಆರಂಭಿಕ ಸಮಸ್ಯೆಗಳಿರುವಂತಿದೆ. ವಹಿವಾಟು ವಿಳಂಬಗೊಂಡರೆ ಅಥವಾ ವಿಫಲಗೊಂಡರೆ ಗ್ರಾಹಕರು ಪ್ರಸ್ತುತ ವೇಗವಾಗಿರುವ ಇತರ ಡಿಜಿಟಲ್ ಪೇಮೆಂಟ್ ವಿಧಾನಗಳನ್ನು ಬಳಸಿ ಪಾವತಿಸಲು ಆದ್ಯತೆ ನೀಡುತ್ತಾರೆ ಎಂದು ಸಾಹನಿ ಹೇಳಿದರು.

                 'ನನ್ನಿಂದ ಹಣ್ಣುಗಳನ್ನು ಖರೀದಿಸಿದ್ದ ಗ್ರಾಹಕರೋರ್ವರು ಇ-ರುಪೀ ಬಳಸಿ 50 ರೂ.ಗಳನ್ನು ಪಾವತಿಸಿದ್ದರು, ಆದರೆ ಕೆಲವು ದಿನಗಳ ಬಳಿಕ ಸಿಬಿಡಿಸಿ ವಹಿವಾಟು ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ನಾನು ಹಣ್ಣುಗಳನ್ನು ಖರೀದಿಸುವ ಸಗಟು ಮಾರಾಟಗಾರರು ಇ-ರುಪೀ ಸ್ವೀಕರಿಸಲು ಆರಂಭಿಸಿದರೆ ನಾನು ಅವರಿಗೆ ಸಿಬಿಡಿಸಿ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತದೆ. ಎಟಿಎಂ ಕಾರ್ಡ್ ಬಂದ ನಂತರ ನಾನು ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಡ್ ಬರಲು ಮೂರು ತಿಂಗಳಾಗುತ್ತದೆ ಎಂದಿದ್ದಾರೆ ' ಎಂದು ಸಾಹನಿ ಹೇಳಿದರು.

                ಪೈಲಟ್ ಯೋಜನೆಯನ್ನು ಮುಂಬೈ, ದಿಲ್ಲಿ, ಬೆಂಗಳೂರು ಮತ್ತು ಭುವನೇಶ್ವರಗಳಲ್ಲಿ ಆರಂಭಿಸಲಾಗಿದ್ದು, ನಂತರ ಅಹ್ಮದಾಬಾದ್, ಗಾಂಗ್ಟಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ ಮತ್ತು ಶಿಮ್ಲಾಕ್ಕೆ ವಿಸ್ತರಿಸಲಾಗುವುದು. ಈವರೆಗೆ ಎಸ್ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮೊದಲ ಹಂತದ ಪೈಲಟ್ ಯೋಜನೆಯ ಭಾಗವಾಗಿವೆ. ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ನಂತರದಲ್ಲಿ ಈ ಯೋಜನೆಯನ್ನು ಸೇರಲಿವೆ.

                   ಸಿಬಿಡಿಸಿ ಆರ್ಬಿಐ ಡಿಜಿಟಲ್ ರೂಪದಲ್ಲಿ ವಿತರಿಸುವ ಕಾನೂನುಮಾನ್ಯ ಕರೆನ್ಸಿಯಾಗಿದ್ದು, ಅದನ್ನು ವಿದ್ಯುನ್ಮಾನ ಮೂಲಕ ಓರ್ವರಿಂದ ಇನ್ನೋರ್ವರಿಗೆ ವರ್ಗಾಯಿಸಬಹುದು. ಅವುಗಳನ್ನು ಬ್ಯಾಂಕುಗಳ ಮೂಲಕ ಪೇಪರ್ ಕರೆನ್ಸಿ ಮತ್ತು ನಾಣ್ಯಗಳ ಮುಖಬೆಲೆಗಳಲ್ಲಿಯೇ ವಿತರಿಸಲಾಗುವುದು.

               ಇ-ರುಪೀ ವಹಿವಾಟುಗಳನ್ನು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಗ್ರಾಹನಿಂದ ವ್ಯಾಪಾರಿಯ ಜೊತೆಗೆ ನಡೆಸಬಹುದು. ವ್ಯಾಪಾರಿಯ ಬಳಿ ಇ-ರುಪೀ ಕ್ಯೂಆರ್ ಕೋಡ್ಗಳಿರುತ್ತವೆ. ಬಳಕೆದಾರರು ಬ್ಯಾಂಕುಗಳಿಂದ ನಗದು ಹಣವನ್ನು ಹಿಂದೆಗೆದುಕೊಳ್ಳುವಂತೆ ಡಿಜಿಟಲ್ ಟೋಕನ್ಗಳನ್ನೂ ಹಿಂಪಡೆದುಕೊಳ್ಳಬಹುದು. ಡಿಜಿಟಲ್ ಟೋಕನ್ಗಳನ್ನು ಡಿಜಿಟಲ್ ವ್ಯಾಲೆಟ್ಗಳಲ್ಲಿ ಇರಿಸಬಹುದು ಮತ್ತು ಅವುಗಳನ್ನು ಆನ್ಲೈನ್ನಲ್ಲಿ ಅಥವಾ ವ್ಯಕ್ತಿಗತವಾಗಿ ಖರ್ಚು ಮಾಡಬಹುದು ಅಥವಾ ಆಯಪ್ ಮೂಲಕ ವರ್ಗಾಯಿಸಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries