HEALTH TIPS

ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ: ಅಧ್ಯಕ್ಷ ಜೋ ಬೈಡನ್

     ನವದೆಹಲಿ: ಭಾರತದೊಂದಿಗಿನ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನವದೆಹಲಿ: ಭಾರತದೊಂದಿಗಿನ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

     ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ 44 ರಾಜ್ಯಗಳಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದ್ದು, ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಿಕೊಳ್ಳುವುದಕ್ಕೆ ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿಗೆ ಜೋ ಬೈಡನ್ ಹೇಳಿದ್ದಾರೆ. ಬೋಯಿಂಗ್ ಹಾಗೂ ಏರ್ ಇಂಡಿಯಾ ಒಪ್ಪಂದಕ್ಕೆ ಮುಂದಾಗಿದ್ದು ಈ ಒಪ್ಪಂದದ ಪ್ರಕಾರ ವಿಮಾನಸಂಸ್ಥೆ 190 B737 MAX, 20 B787, ಮತ್ತು 10 B777X USD 34 ಶತಕೋಟಿ ಮೌಲ್ಯದ ಒಟ್ಟು 220 ಫರ್ಮ್ ಆರ್ಡರ್ ನಲ್ಲಿ ಖರೀದಿಸಲಿದೆ.

     ಈ ಐತಿಹಾಸಿಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಜೋ ಬೈಡನ್ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದರು. ಈ ಖರೀದಿಯ ಒಪ್ಪಂದದಿಂದ 44 ರಾಜ್ಯಗಳ ಜನರಿಗೆ ಉದ್ಯೋಗ ಸಿಗಲಿದೆ ಈ ಪೈಕಿ ಉದ್ಯೋಗ ಪಡೆಯುವ ಹಲವು ಮಂದಿಗೆ ನಾಲ್ಕು ವರ್ಷಗಳ ಡಿಗ್ರಿ ಅಗತ್ಯವಿರುವಿರುವುದಿಲ್ಲ ಎಂದು ಬೈಡನ್ ಹೇಳಿದ್ದಾರೆ. ಏರ್ ಇಂಡಿಯಾದ ಆರ್ಡರ್ ಡಾಲರ್ ಮೌಲ್ಯದಲ್ಲಿ ಬೋಯಿಂಗ್ ನ ಮೂರನೇ ಅತಿ ದೊಡ್ಡ ಮಾರಾಟವಾಗಿರಲಿದ್ದು, ವಿಮಾನ ಮಾರಾಟದ ಸಂಖ್ಯೆಯಲ್ಲಿ 2 ನೇ ಅತಿ ದೊಡ್ದದಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries