ತಿರುವನಂತಪುರಂ: ಕೇರಳದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರಿ ಪ್ರಗತಿ ಕಾಣುತ್ತಿದೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.
ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು 1,33,000 ಕೋಟಿ ಮೌಲ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1,931 ಕಿ.ಮೀ. ಹೆದ್ದಾರಿ ಅಭಿವೃದ್ದಿ ನಡೆಯುತ್ತದೆ ಎಮದು ತಿಳಿಸಿದರು.
ಭೂಸ್ವಾಧೀನದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಭಾಗವಹಿಸುವಿಕೆಯೇ ಈ ಚಟುವಟಿಕೆಗಳು ಸುಗಮವಾಗಿ ಮತ್ತು ತ್ವರಿತವಾಗಿ ಕಾರ್ಯಗತಗೊಳ್ಳಲು ಮೂಲ ಕಾರಣ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ರಾಜ್ಯ ಸರ್ಕಾರ ಖರ್ಚು ಮಾಡಿರುವ ಹಣವನ್ನೂ ಸಚಿವರು ತಿಳಿಸಿದ್ದು 5580 ಕೋಟಿ ರೂ. ಮಾತ್ರ ವೆಚ್ಚ ಮಾಡುತ್ತಿದೆ ಎಂದರು. ಬಜೆಟ್ ಭಾಷಣದ ವೇಳೆ ಬಾಲಗೋಪಾಲ್ ಅವರು ಕೇಂದ್ರ ಸರ್ಕಾರ ನಡೆಸುತ್ತಿರುವ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮೂರು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಹೇಳುವ ಧೈರ್ಯದ ಕೊರತೆಯನ್ನೂ ವ್ಯಕ್ತಪಡಿಸಿದರು.
ಕೇರಳದಲ್ಲಿ 1,33,000 ಕೋಟಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ; ರಾಜ್ಯ ವೆಚ್ಚಮಾಡುತ್ತಿರುವುದು 5580 ಕೋಟಿ ರೂ: ಸಚಿವ
0
ಫೆಬ್ರವರಿ 03, 2023


