HEALTH TIPS

'ಜಾಗತಿಕ ಆರ್ಥಿಕತೆ ಅಪಾಯಕ್ಕೆ ಒಳಗಾಗದಂತೆ ತಡೆಯುವುದು ಜಿ-20 ಆದ್ಯತೆ'

 

                 ಹೈದರಾಬಾದ್‌: 'ಜಾಗತಿಕ ಆರ್ಥಿಕತೆಯು ಅಪಾಯಕ್ಕೆ ಒಳಗಾಗದಂತೆ ತಡೆಯಲು ಇರುವಂತಹ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಜಿ-20 ಗುಂಪಿನ ಪ್ರಮುಖ ಆದ್ಯತೆಯಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ತಿಳಿಸಿದ್ದಾರೆ.

             ಭಾರತವು ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಪೆಟ್ರೋಲ್‌ ಬೆಲೆ ಹೆಚ್ಚಳದ ಆಘಾತದಿಂದ ಗ್ರಾಹಕರನ್ನು ಪಾರು ಮಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ. ಹಣದುಬ್ಬರ ತಗ್ಗಿಸಲೂ ಅಗತ್ಯ ಕ್ರಮಗಳನ್ನು ಕೈಗೊಂಡಿದೆ' ಎಂದಿದ್ದಾರೆ.

                'ಭದ್ರತೆ ಎಂದರೆ ಕೇವಲ ದೈಹಿಕ ಹಾಗೂ ಆರ್ಥಿಕತೆಗೆ ಸಂಬಂಧಿಸಿದ್ದಲ್ಲ. ಆರೋಗ್ಯ ಮತ್ತು ಆಹಾರ ಭದ್ರತೆ ಕೂಡ ಮಹತ್ವದ್ದು ಎಂಬುದು ಈಗ ಇಡೀ ಜಗತ್ತಿಗೆ ಅರಿವಾಗಿದೆ. ಜಿ-20 ಅಡಿಯಲ್ಲಿ ಈ ವರ್ಷ ಸಚಿವರ ಹಂತದಲ್ಲಿ ಒಟ್ಟು 15 ಸಭೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ರಾಷ್ಟ್ರಪತಿ ಹಾಗೂ ಪ್ರಧಾನಿ ಅವರ ಹಂತದಲ್ಲಿ ಸೆಪ್ಟೆಂಬರ್‌ನಲ್ಲಿ ಸಮಾವೇಶಗಳನ್ನೂ ಹಮ್ಮಿಕೊಳ್ಳಲಾಗಿದೆ' ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries