HEALTH TIPS

ಇ-ಕೋರ್ಟ್ ಯೋಜನೆ 3ನೇ ಹಂತಕ್ಕೆ ₹ 7 ಸಾವಿರ ಕೋಟಿ ಅನುದಾನ: ಸಿಜೆಐ

 

              ನವದೆಹಲಿ: '2023-24ರ ಕೇಂದ್ರ ಬಜೆಟ್‌ನಲ್ಲಿ ಇ-ಕೋರ್ಟ್ ಯೋಜನೆಯ ಮೂರನೇ ಹಂತಕ್ಕೆ ₹ 7 ಸಾವಿರ ಕೋಟಿ ಪ್ರಸ್ತಾವಿತ ಹಂಚಿಕೆಯು ನ್ಯಾಯಾಂಗದ ದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ ನ್ಯಾಯಾಲಯಗಳು ಪ್ರತಿಯೊಬ್ಬ ನಾಗರಿಕನನ್ನೂ ತಲುಪುವುದನ್ನು ಖಾತ್ರಿಪಡಿಸುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶನಿವಾರ ಹೇಳಿದ್ದಾರೆ.

                      ಸುಪ್ರೀಂ ಕೋರ್ಟ್‌ನ 73ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕೋವಿಡ್‌- 19 ಸಾಂಕ್ರಾಮಿಕದ ಸಂದರ್ಭದಲ್ಲಿ ಜನರನ್ನು ತಲು‍ಪುವ ಸಲುವಾಗಿ ನ್ಯಾಯಾಲಯದ ಪ್ರಕ್ರಿಯೆಗಳಿಗಾಗಿ ಸುಪ್ರೀಂ ಕೋರ್ಟ್ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. 2020ರ ಮಾರ್ಚ್ 23ರಿಂದ 2022ರ ಅಕ್ಟೋಬರ್ 30ರ ತನಕ ಸುಪ್ರೀಂ ಕೋರ್ಟ್ ವಿಡಿಯೊ ಕಾನ್ಫರೆನ್ಸ್ ಮೂಲಕ 3.37 ಲಕ್ಷ ಪ್ರಕರಣಗಳನ್ನು ಆಲಿಸಿದೆ' ಎಂದು ತಿಳಿಸಿದ್ದಾರೆ.

                   'ಇತ್ತೀಚಿನ ಬಜೆಟ್‌ನಲ್ಲಿ, ಭಾರತ ಸರ್ಕಾರವು ಇ-ಕೋರ್ಟ್‌ಗಳ ಯೋಜನೆಯ ಮೂರನೇ ಹಂತಕ್ಕೆ ₹ 7 ಸಾವಿರ ಕೋಟಿ ಅನುದಾನ ನೀಡಿದೆ. ಇದು ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ' ಎಂದು ಸಿಜೆಐ ಹೇಳಿದ್ದಾರೆ.

                  'ನಾವು ನಮ್ಮ ವೀಡಿಯೊ ಕಾನ್ಫರೆನ್ಸಿಂಗ್ ಮೂಲಸೌಕರ್ಯವನ್ನು ಮೆಟಾ ಸ್ಕೇಲ್‌ನಲ್ಲಿ ನವೀಕರಿಸಿದ್ದೇವೆ. ಹೈಬ್ರಿಡ್ ವಿಚಾರಣೆಯ ವಿಧಾನಕ್ಕಾಗಿ ನಾವು ತಾಂತ್ರಿಕ ಮೂಲಸೌಕರ್ಯವನ್ನು ಬಳಸುವುದನ್ನು ಮುಂದುವರಿಸುತ್ತಿದ್ದೇವೆ. ಅದು ದೇಶದ ಯಾವುದೇ ಭಾಗದ ಕಕ್ಷಿದಾರರಿಗೆ ನ್ಯಾಯಾಲಯದ ವಿಚಾರಣೆಗೆ ಸೇರಲು ಅವಕಾಶ ನೀಡುತ್ತದೆ' ಎಂದೂ ಅವರು ಹೇಳಿದ್ದಾರೆ.

                    ಕಾರ್ಯಕ್ರಮದಲ್ಲಿ ಸಿಂಗಪುರದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಅವರು 'ಬದಲಾಗುತ್ತಿರುವ ಜಗತ್ತಿನಲ್ಲಿ ನ್ಯಾಯಾಂಗದ ಪಾತ್ರ' ಎಂಬ ವಿಷಯದ ಕುರಿತು ಮಾತನಾಡಿದರು.

                ಜನವರಿ 26ರಂದು ಭಾರತ ಗಣರಾಜ್ಯವಾದ ಎರಡು ದಿನಗಳ ನಂತರ 1950ರ ಜನವರಿ 28ರಂದು ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries