HEALTH TIPS

ಬಿಪಿ ಸಮಸ್ಯೆ ಇದೆಯೇ? ಈ 5 ಬಗೆಯ ಟೀ ಹೈಪರ್‌ಟೆನ್ಷನ್‌ ಕಂಟ್ರೋಲ್‌ನಲ್ಲಿಡುತ್ತೆ

 ಸಾಮಾನ್ಯವಾಗಿ ರಕ್ತದೊತ್ತಡ 120/80 mm ನಡುವೆ ಇರಬೇಕು, ರಕ್ತದೊತ್ತಡ ಅಧಿಕವಾದರೂ ಅಥವಾ ಕಡಿಮೆಯಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ರಕ್ತದೊತ್ತಡ 130/80 mm ಅದಿಕವಿದ್ದರೆ ಅತ್ಯಧಿಕ ರಕ್ತದೊತ್ತಡ ಅಥವಾ ಹೈಪರ್ ಟೆನ್ಷನ್‌ ಎಂದು ಕರೆಯಲಾಗುವುದು.

ಹೈಪರ್‌ ಟೆನ್ಷನ್‌ ಬಂದರೆ ಹೃದಯಾಘಾತ, ಸ್ಟ್ರೋಕ್‌ ಈ ಬಗೆಯ ಅಪಾಯ ಹೆಚ್ಚುವುದು. ಈ ಅಧಿಕ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಅಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ವೈದ್ಯರು ಸೂಚಿಸಿದ ಔಷಧದ ಜೊತೆಗೆ ಆಹಾರಕ್ರಮದ ಕಡೆ ಗಮನ ನೀಡುವುದು ಒಳ್ಳೆಯದು.

ಬಿಪಿ ಅಥವಾ ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ಕೆಲವೊಂದು ಆಹಾರ ಒಳ್ಳೆಯದು, ಇನ್ನು ಕೆಲ ಆಹಾರ ಒಳ್ಳೆಯದಲ್ಲ ಉದಾಹರಣೆಗೆ ಉಪ್ಪಿನಂಶ ಅಧಿಕವಿರುವ ಆಹಾರಗಳು ಬಿಪ ಸಮಸ್ಯೆ ಇರುವವರೆಗೆ ಒಳ್ಳೆಯದಲ್ಲ. ಹಾಗೆಯೇ ಟೀ ಕುಡಿಯಬಹುದೇ ಎಂದು ಕೇಳುವುದಾದರೆ ಕೆಲವೊಂದು ಬಗೆಯ ಟೀ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.

ರಕ್ತದೊತ್ತಡ ನಿಯಂತ್ರಣದಲ್ಲಿಡಲು ಈ 5 ಬಗೆಯ ಟೀ ತುಂಬಾನೇ ಸಹಕಾರಿ ನೋಡಿ:

ರೀನ್ ಟೀ

ಗ್ರೀನ್‌ ಟೀಯಲ್ಲಿ ಅನೇಕ ಆರೋಗ್ಯಕರ ಪ್ರಯೋಜನಗಳಿದ್ದು ರಕ್ತದೊತ್ತಡ ನಿಯಂತ್ರಣದಲ್ಲಿಡುವುದು. ಅಧ್ಯಯನ ಪ್ರಕಾರ ಗ್ರೀನ್ ಟೀ ಕುಡಿಯುವುದರಿಂದ ರಕ್ತ ಸಂಚಾರ ಚೆನ್ನಾಗಿರುತ್ತದೆ ಅಲ್ಲದೆ ಹೃದಯದಲ್ಲಿ ಉರಿಯೂತದ ಸಮಸ್ಯೆ ಕಡಿಮೆ ಮಾಡುವುದು. ಆದ್ದರಿಂದ ಬಿಪಿ ಸಮಸ್ಯೆಯಿದ್ದರೆ ದಿನದಲ್ಲಿ ಎರಡು ಲೋಟ ಗ್ರೀನ್ ಟೀ ಕುಡಿಯುವುದು ಒಳ್ಳೆಯದು.

ದಾಸವಾಳದ ಟೀ

ದಾಸವಾಳದ ಟೀ ಟ್ರೈ ಮಾಡಿದ್ದೀರಾ? ಇಲ್ಲಾಂದ್ರೆ ಇವತ್ತೇ ಟ್ರೈ ಮಾಡಿ, ಇನ್ನು ಬಿಪಿ ಸಮಸ್ಯೆ ಇದ್ದರಂತೂ ಈ ಟೀ ಮಿಸ್‌ ಮಾಡಲೇಬೇಡಿ, ದಾಸವಾಳದ ಟೀ ಅತ್ಯಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಆದರೆ ನೀವು ಈ ಟೀ ಕುಡಿಯುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯರಿ.

ಊಲಾಂಗ್ ಟೀ

ಭಾರತದಲ್ಲಿ ಈ ಟೀ ಅಷ್ಟು ಫೇಮಸ್ ಅಲ್ಲ, ಆದರೆ ಆನ್‌ಲೈನ್‌ನಲ್ಲಿ ತರಿಸಿ ಬಳಸಬಹುದು. ಈ ಟೀ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡುವುದರ ಜೊತೆಗೆ ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.

ಚಾಮೊಯಿಲ್ ಟೀ

ಈ ಟೀ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಔಷಧಿಯಷ್ಟೇ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ. ಇದು ದೇಹದಲ್ಲಿರುವ ನರಗಳಿಗೆ ವಿಶ್ರಾಂತಿ ಸಡಿಲ ಮಾಡುವುದು ಹಾಗೂ ಒಳ್ಳೆಯ ನಿದ್ದೆಗೆ ಸಹಕಾರಿ, ಒಳ್ಳೆಯ ನಿದ್ದೆ ರಕ್ತದೊತ್ತಡ ನಿಯಂತ್ರಿಸಲು ತುಂಬಾನೇ ಸಹಕಾರಿ.

ಬ್ಲ್ಯಾಕ್‌ ಟೀ

ಬ್ಲ್ಯಾಕ್ ಟೀ ಅಂದರೆ ಹಾಲು ಹಾಕದ ಟೀ. ಈ ಟೀ ಆರೋಗ್ಯಕ್ಕೆ, ಜೀರ್ಣಕ್ರಿತೆಗೆ ತುಂಬಾ ಸಹಕಾರಿ. ಯಾರು ದಿನದಲ್ಲಿ 2 ಕಪ್ ಬ್ಲ್ಯಾಕ್‌ ಟೀ ಕುಡಿಯುತ್ತಾರೋ ಅವರಿಗೆ ಬಿಪಿ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.


 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries