HEALTH TIPS

ಪ್ರಸ್ತುತ ಕೇಂದ್ರ ಬಜೆಟ್​ನ​ 7 ಆದ್ಯತೆಗಳನ್ನು ಪಟ್ಟಿ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

 

         ನವದೆಹಲಿ: ಸ್ವಾಂತತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಭಾರತವನ್ನು ಜಗತ್ತು ಗುರುತಿಸಿದೆ. ಭಾರತದ ಯಶಸ್ಸನ್ನು ಜಗತ್ತು ಹೊಗಳುತ್ತಿದೆ. ರೈತರು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಪೂರಕವಾದ ಬಜೆಟ್​ ಇದಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೇಳಿದರು.

           ಬಜೆಟ್​ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್​ ಅವರು ಆರಂಭಿಕ ನುಡಿಗಳನ್ನಾಡಿದರು. ಕೋವಿಡ್​ 19 ಬಿಕ್ಕಟ್ಟಿನ ಸಮಯದಲ್ಲಿ 80 ಕೋಟಿ ಜನರಿಗೆ ಆಹಾರ ಧಾನ್ಯ ಪೂರೈಕೆ ಮಾಡಿದ್ದೇವೆ. ಪೌಷ್ಠಿಕ ಆಹಾರದ ಭದ್ರತೆ ನೀಡಿದ್ದೇವೆ. ಗರಿಬ್​ ಕಲ್ಯಾಣ ಯೋಜನೆಯಡಿ 2 ಲಕ್ಷ ಕೋಟಿ ರೂ. ವ್ಯಯಿಸಿದ್ದೇವೆ. 2023ರಿಂದ ಇನ್ನು ಒಂದು ವರ್ಷ ಉಚಿತ ಆಹಾರ ಧಾನ್ಯ ನೀಡಲಿದ್ದೇವೆ ಎಂದು ಹೇಳಿದರು.

                 ದೇಶದಲ್ಲಿ 222 ಕೋಟಿ ಕೋವಿಡ್​ ಲಸಿಕೆ ಡೋಸ್​ ನೀಡಲಾಗಿದೆ. ಇದರಿಂದ 102 ಕೋಟಿ ಜನ ಪ್ರಯೋಜನ ಪಡೆದಿದ್ದಾರೆ ಎಂದ ನಿರ್ಮಲಾ ಸೀತಾರಾಮನ್​, 9 ವರ್ಷಗಳಲ್ಲಿ ವಿಶ್ವದ 5ನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ. 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ತಂತ್ರಜ್ಞಾನ, ಜ್ಞಾನಾಧಾರಿತ ಆರ್ಥಿಕ ಶಕ್ತಿ ರೂಪಿಸುತ್ತೇವೆ ಎಂದು ತಿಳಿಸಿದರು.

                   ದೇಶದಲ್ಲಿ 11.7 ಲಕ್ಷ ಶೌಚಗೃಹಗಳನ್ನು ನಿರ್ಮಿಸಿದ್ದೇವೆ. 47 ಕೋಟಿ ಜನ್​ಧನ್​ ಖಾತೆಗಳನ್ನು ತೆರೆದಿದ್ದೇವೆ. ದೇಶದ ಜಿಡಿಪಿ ಅಂದಾಜಿ 7ರಷ್ಟು ಏರಿಕೆಯಾಗಿದೆ. ತಲಾವಾರು ಆದಾಯ 1.97 ಲಕ್ಷ ರೂ.ಗೆ ಏರಿಕೆಯಾಗಿದೆ. ಅಮೃತಕಾಲದಲ್ಲಿ ಮೊದಲ ಬಜೆಟ್​ ಮಂಡನೆಯಾಗುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ರೀತಿಯಲ್ಲಿ ನೆರವಾಗಲು ಕ್ರಮಗಳನ್ನು ರೂಪಿಸಲಾಗುವುದು. ಕಚ್ಚಾವಸ್ತುಗಳ ಪೂರೈಕೆ, ಬ್ರಾಂಡಿಂಗ್ ಮತ್ತು ಸಿದ್ಧವಸ್ತುಗಳಿಗೆ ಮಾರುಕಟ್ಟೆ ರೂಪಿಸಲು ಸರ್ಕಾರ ನೆರವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.

                ಕೇಂದ್ರ ಬಜೆಟ್​ಗೆ 7 ಆದ್ಯತೆಗಳಿವೆ ಎಂದು ವಿತ್ತ ಸಚಿವೆ ಘೋಷಿಸಿದರು. ಆ ಏಳು ಆದ್ಯತೆಗಳು ಯಾವುವೆಂದರೆ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ, ಆರ್ಥಿಕ ಸುಧಾರಣೆ ಈ ಏಳು ಆದ್ಯತೆಗಳನ್ನು ಬಜೆಟ್​ನಲ್ಲಿ ನೀಡಲಾಗಿದೆ ಎಂದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries