HEALTH TIPS

ಪೊಲೀಸ್​ ವೇಷ ಧರಿಸಿ ವೃದ್ಧೆಯ ಬಳಿ 7 ಸವರನ್​ ಚಿನ್ನ ದೋಚಿದ ಕರ್ನಾಟಕ ಗ್ಯಾಂಗ್​ ಕೇರಳದಲ್ಲಿ ಅರೆಸ್ಟ್!​

 

               ಕೊಚ್ಚಿ: ಪೊಲೀಸ್​ ವೇಷ ಧರಿಸಿದ ವಯಸ್ಸಾದ ಮಹಿಳೆಯ ಬಳಿ 7 ಸವರನ್​ ಚಿನ್ನ ದೋಚಿದ್ದ ನಾಲ್ವರು ದಾಳಿಕೋರರನ್ನು ಕೇರಳ ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ನಾಲ್ವರು ಆರೋಪಿಗಳು ಕೂಡ ಕರ್ನಾಟಕದ ಭಟ್ಕಳ ಮೂಲದವರು. ಇನ್ನು ಕೆಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

                  ಕರ್ನಾಟಕ ಮೂಲದ ಖತರ್ನಾಕ್​ ಗ್ಯಾಂಗ್​ ಕೇರಳವನ್ನೇ ಹೆಚ್ಚು ಕೇಂದ್ರಿಕೃತವಾಗಿಸಿಕೊಂಡಿತ್ತು. ಇಂತಹ ಅನೇಕ ಅಪರಾಧಗಳನ್ನು ಎಸಗಿರುವ ಇತಿಹಾಸವನ್ನು ಈ ಗ್ಯಾಂಗ್​ ಹೊಂದಿದ್ದು, ತ್ರಿಸ್ಸೂರ್​ ಪೊಲೀಸ್​ ತಂಡ ಕೊಚ್ಚಿಯನ್ನು ತಲುಪಿ, ವಿಚಾರಣೆ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದೆ.

               ಎಸಿಪಿ ರಾಜಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಜನವರಿ 16 ರಂದು ಎರ್ನಾಕುಲಂನ ದಕ್ಷಿಣ ಮೇಲ್ಸೇತುವೆಯ ಬಳಿ ಈ ಗ್ಯಾಂಗ್​, ವೃದ್ಧೆಯನ್ನು ತಡೆದು ಆಕೆಯ ವಸ್ತುಗಳನ್ನು ದೋಚಿತ್ತು. ನಾಲ್ವರು ಖದೀಮರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಮತ್ತು ವೃದ್ಧೆಯನ್ನು ಹೆದರಿಸಿ 7 ಸವರನ್​ ಚಿನ್ನವನ್ನು ದೋಚಿದ್ದರು.

                ಸಂತ್ರಸ್ತ ಮಹಿಳೆಯ ಪ್ರಕಾರ ಖತರ್ನಾಕ್​ ಗ್ಯಾಂಗ್ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿತ್ತು. ವೃದ್ಧೆ ಒದಗಿಸಿದ ಮೊಬೈಲ್ ಟವರ್ ಲೊಕೇಶನ್ ಮೂಲಕ ದಾಳಿಕೋರರನ್ನು ಪತ್ತೆ ಹಚ್ಚಿ ಬಂದಿಸಲಾಗಿದೆ. ಇಂತಹ ಹಲವು ಗ್ಯಾಂಗ್‌ಗಳು ನಗರದಲ್ಲಿ ಸಕ್ರಿಯವಾಗಿವೆ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries