HEALTH TIPS

ಪೊಲೀಸ್ ಸಬ್​ ಇನ್​ಸ್ಪೆಕ್ಟರ್​​ ಕಿವಿಯನ್ನೇ ಕಚ್ಚಿದ ಪಾನಮತ್ತ ಬೈಕ್ ಸವಾರ!

 

                 ತಿರುವನಂತಪುರಂ: ಕೆಲವರು ಕುಡಿದು ಮಾಡುವ ರಂಪಾಟ ಭಯಂಕರವಾಗಿರುತ್ತದೆ, ಇನ್ನು ಕೆಲವೊಮ್ಮೆ ವಿಚಿತ್ರವೂ ಆಗಿರುತ್ತದೆ. ಹಾಗೆಯೇ ಇಲ್ಲೊಬ್ಬ ಮದ್ಯವ್ಯಸನಿ ಪೊಲೀಸ್ ಸಬ್​ ಇನ್​ಸ್ಪೆಕ್ಟರ್​ ಒಬ್ಬರ ಕಿವಿಯನ್ನೇ ಕಚ್ಚಿಬಿಟ್ಟಿದ್ದಾನೆ. ಕೇರಳದಲ್ಲಿ ಈ ವಿಚಿತ್ರ ಪ್ರಸಂಗ ನಡೆದಿದೆ.

ಸ್ಟ್ಯಾನಿ ರೊಡ್ರಿಕ್ಸ್ ಎಂಬ ಮದ್ಯವ್ಯಸನಿ ಕಿಡಿಗೇಡಿತನ ತೋರಿದ್ದಾನೆ. ಸಬ್​ ಇನ್​ಸ್ಪೆಕ್ಟರ್ ವಿಶುನಾಥ್ ಗಾಯಗೊಂಡವರು. ಇಂದು ಬೆಳಗ್ಗೆ ಕಾಸರಗೋಡಿನಲ್ಲಿ ನಡೆದ ಅಪಘಾತ ಸಂದರ್ಭದಲ್ಲಿ, ಸ್ಥಳಕ್ಕೆ ಪೊಲೀಸರು ತೆರಳಿದ್ದು, ಆ ಬಳಿಕ ಈ ಪ್ರಸಂಗ ನಡೆದಿದೆ.

                    ಪಾನಮತ್ತನಾಗಿ ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಬಂದು ಅಪಘಾತವಾದ ಕಾರಣಕ್ಕೆ ಗಲಾಟೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಿಳಿದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

                 ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಸ್ಟ್ಯಾನಿ ರೊಡ್ರಿಕ್ಸ್​ನನ್ನು ವಶಕ್ಕೆ ಪಡೆದು, ವಾಹನದಲ್ಲಿ ಪೊಲೀಸ್ ಸ್ಟೇಷನ್​ಗೆ ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಆತ ಎಸ್​ಐ ವಿಶುನಾಥ್ ಬಲಗಿವಿಗೆ ಕಚ್ಚಿದ್ದು, ಗಂಭೀರ ಗಾಯವಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆರೋಪಿಯನ್ನು ಠಾಣೆಗೆ ಕರೆದೊಯ್ದ ಪೊಲೀಸರು ಕೇಸು ಜಡಿದಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries