HEALTH TIPS

ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಭೇದಿಸಲಾಗದೇ ಅಧಿಕಾರಿಗಳು ಕಂಗಾಲು

 

          ಕಣ್ಣೂರು: ಆಸ್ಪತ್ರೆಗೆ ಹೋಗುವಾಗ ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿದು ಗಂಡ ಮತ್ತು ಗರ್ಭಿಣಿ ಪತ್ನಿ ಸಜೀವ ದಹನವಾದ ಘಟನೆ ಕೇರಳದ ಕಣ್ಣೂರಿನಲ್ಲಿ ಮೊನ್ನೆ (ಫೆ.2) ನಡೆದಿದ್ದು, ಈ ಅವಘಡಕ್ಕೆ ಕಾರಣ ಏನೆಂಬುದೇ ಕೇರಳ ಸಾರಿಗೆ ಇಲಾಖೆಗೆ ಬಹುದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದೆ.

               ಫೆ.2ರಂದು ಬೆಳಗ್ಗೆ ಕಣ್ಣೂರು ಮೂಲದ ರೀಶಾ (26) ಮತ್ತು ಪತಿ ಪ್ರಿಜಿತ್​ (35) ಇಬ್ಬರು ಆಸ್ಪತ್ರೆಗೆ ತೆರಳುತ್ತಿದ್ದರು. ಗರ್ಭಿಣಿ ರೀಶಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. 2020 ಮಾರುತಿ ಎಸ್​- ಪ್ರೆಸ್ಸೋ ಕಾರಿನಲ್ಲಿ ಒಟ್ಟು 6 ಮಂದಿ ತೆರಳುತ್ತಿದ್ದರು. ಒಂದು ಮಗು ಸೇರಿದಂತೆ ನಾಲ್ವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಹಿಂದೆ ಕುಳಿತ್ತಿದ್ದವರು ಎಸ್ಕೇಪ್​ ಆದರು. ಆದರೆ, ಮುಂದೆ ಕುಳಿತಿದ್ದ ದಂಪತಿಯ ಕೈಯಿಂದ ಕಾರಿನ ಬಾಗಿಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿದರು.

                 ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ರೀಶಾ ಮತ್ತು ಪ್ರಿಜಿತ್​ ಮೃತಪಟ್ಟಿದ್ದರು. ಸ್ಥಳದಲ್ಲಿದ್ದ ಜನರು ಇಬ್ಬರನ್ನು ಕಾಪಾಡಲು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.

                   ಇದೀಗ ಈ ಘಟನೆಗೆ ಕಾರಣ ಏನು ಎಂಬುದೇ ಕೇರಳ ಸಾರಿಗೆ ಇಲಾಖೆಗೆ ಭಾರೀ ಸವಾಲಾಗಿದೆ. ಮೋಟಾರು ವಾಹನ ಇಲಾಖೆ, ವಿಧಿವಿಜ್ಞಾನ ವಿಭಾಗ ಹಾಗೂ ಪೊಲೀಸರು ನಡೆಸಿದ ತಪಾಸಣೆಯಲ್ಲಿ ವಾಹನದ ಇಂಧನ ಲೈನ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಹಾಗಾದರೆ, ಈ ಅವಘಡ ಹೇಗೆ ಸಂಭವಿಸಿತು? ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಲೇ ಇದೆ.

                 ಬಹುಶಃ ಶಾರ್ಟ್​ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿರಬಹುದೆಂದು ಒಂದು ತಂಡ ಅಂದಾಜಿಸಿದೆ. ಆದಾಗ್ಯೂ, ಕಾರಿನಲ್ಲಿದ್ದ ಕೆಲವು ವಸ್ತುಗಳಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿ ಪಿವಿ ಬಿಜು ಊಹಿಸಿದ್ದಾರೆ.

                 ಕಾರನ್ನು ಪರಿಶೀಲಿಸಿದಾಗ ಎರಡು ಪ್ಲಾಸ್ಟಿಕ್​ ಬಾಟಲ್​ಗಳು ಪತ್ತೆಯಾಗಿದ್ದು, ಬಾಟಲ್​ಗಳಲ್ಲಿ ಏನಾದರೂ ದ್ರವ ಇತ್ತೇ ಎಂಬುದನ್ನು ತಿಳಿಯಲು ಅವುಗಳನ್ನು ಕೆಮಿಕಲ್​ ಟೆಸ್ಟ್​ಗೆ ಕಳುಹಿಸಲಾಗಿದೆ. ಈ ಮಧ್ಯೆ ಮೃತ ರೀಶಾಳ ತಂದೆ ವಿಶ್ವನಾಥನ್ ಅವರು ಕಾರಿನಲ್ಲಿ ಎರಡು ಬಾಟಲ್‌ಗಳಲ್ಲಿ ಇಟ್ಟಿದ್ದ ದ್ರವದಿಂದ ಅಪಘಾತ ಸಂಭವಿಸಿದೆ ಎಂಬ ವದಂತಿಯನ್ನು ಅಲ್ಲಗಳೆದಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries