ತಿರುವನಂತಪುರ: ಉದ್ಯೋಗ ಅರಸಿ ವಿದೇಶಕ್ಕೆ ಹೋಗುವ ಪರಿಸ್ಥಿತಿ ಮಾಯವಾಗಲಿದ್ದು, ಕೇರಳದ ಎಲ್ಲ ಯುವಕರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ವಿದ್ಯಾಭ್ಯಾಸ, ಕಾರ್ಮಿಕ ಇಲಾಖೆ ಸಚಿವ ವಿ.ಶಿವಂಕುಟ್ಟಿ. ರಾಜ್ಯಮಟ್ಟದ ಯೋಜನೆ ‘ತೊಳಿರಂಗಟಮಂ’ನ್ನು ಉದ್ಘಾಟಿಸಿ ತಿಳಿಸಿರುವರು.
ಈ ಸರ್ಕಾರದ ಅವಧಿಯಲ್ಲಿ 20 ಲಕ್ಷ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಜಾಗತಿಕ ಉದ್ಯೋಗಿಗಳ ಬದಲಾವಣೆಯನ್ನು ಆಧರಿಸಿ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರ ಭಾಗವಾಗಿ ಸರಕಾರ ಸಮಾಜದ ನಾನಾ ಕ್ಷೇತ್ರಗಳಲ್ಲಿ ನಾನಾ ಚಟುವಟಿಕೆಗಳನ್ನು ಜಾರಿಗೊಳಿಸುತ್ತಿದೆ ಎಂದು ಸಚಿವರು ಹೇಳಿದರು.
ಪ್ರತಿ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವಂತೆ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ.ಶಿಕ್ಷಕರ ಹುದ್ದೆಗಳನ್ನು ನಿರ್ಧರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.
ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ಹೋಗಬೇಕಾಗಿಲ್ಲ: ವಿ ಶಿವಂಕುಟ್ಟಿ
0
ಫೆಬ್ರವರಿ 08, 2023





